
ಬೆಂಗಳೂರು, ಮಾರ್ಚ್ 20: ಗಂಗೊಂಡನಹಳ್ಳಿಯಲ್ಲಿ ಇಬ್ಬರು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕನೋರ್ವ ಆಕೆಯನ್ನು ಡ್ಯಾಗರ್ ನಿಂದ ಇರಿದು ಕೊಲೆ ಪ್ರಕರಣ ಸಂಬಂಧ ಆರೋಪಿ ಹಫೀಜ್ನ ಚಂದ್ರಾಲೇಔಟ್ ಆರೋಪಿಯನ್ನು ಬಂಧಿಸಿದ್ದಾರೆ. ನಿನ್ನೆ ಸಂಜೆ ಫೀರ್ದೋಸ್ ಬಾನು ಎಂಬಾಕೆಯನ್ನು ಈತ ಹತ್ಯೆಗೈದಿದ್ದು, ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಹಫೀಜ್ನ ಬಂಧನವಾಗಿದೆ. ಆರೋಪಿ ಹಫೀಜ್ ಜತೆ ಸಂಪರ್ಕದಲ್ಲಿದ್ದು ತನಿಖೆ ವೇಳೆ ಬಯಲಾಗಿದೆ.
ಮೃತ ಫೀರ್ದೋಸ್ ಬಾನು ಮತ್ತು ಆರೋಪಿ ಹಫೀಜ್ ಇಬ್ಬರು ಚೆನ್ನಾಗಿಯೇ ಇದ್ದಾರೆ. ಈ ವಿಚಾರ ಮಹಿಳೆ ಕುಟುಂಬಕ್ಕೂ ಗೊತ್ತಿತ್ತು. ಈ ನಡುವೆ ಫೀರ್ದೋಸ್ ಗೆ ಕುಟುಂಬದವರು ಬುದ್ಧಿವಾದ ಹೇಳಿದ್ದರು. ಆ ಬಳಿಕ ಫೆ.28ರಂದು ಮಹಿಳೆ ಜತೆ ಹಫೀಜ್ ಗಲಾಟೆ ಮಾಡಿದ್ದರು. ಈ ಸಂಬಂಧ ಚಂದ್ರಾಲೇಟ್ ಪೊಲೀಸರಿಗೆ ಫೀರ್ಡೋಸ್ ಬಾನು ಕುಟುಂಬ ದೂರು ನೀಡಿತ್ತು. ಪ್ರಕರಣ ಸಂಬಂಧ ಆರೋಪಿ ಹಫೀಜ್‌ನನ್ನು ಠಾಣೆಗೆ ಕರೆದು ಬುದ್ಧಿವಾದ ಹೇಳಲಾಗಿದೆ. ಜೊತೆಗೆ ಪ್ರಕರಣವನ್ನು ಬರೆಸಿಕೊಂಡು ರಾಜಿ ಮಾಡಿಕೊಂಡಿದ್ದರು. ಕೇಸ್ ಮುಚ್ಚಳಿಕೆ ಬರೆಸಿಕೊಡಿ ಎರಡೂ ಕಡೆಯವರು ಎಂದಿದ್ದರು. ಆದರೆ ನಿನ್ನೆ ಸಂಜೆ ಮನೆಗೆ ತೆರಳುವ ದಾರಿಯಲ್ಲಿ ಫೀರ್ದೋಸ್ನ ಹಫೀಜ್ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿರುವ ಚಂದ್ರಾಲೇಔಟ್ ಠಾಣೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಎದೆಯ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಕರವಾಗಿ ಕೊಲೆ; ಭಾವಿ ಪತಿ ಅನುಮಾನಕ್ಕೆ ಅಪ್ರಾಪ್ತ ಬಲಿ
ಈ ಪ್ರಕರಣದ ಮಾಹಿತಿ ನೀಡಿರುವ ಪಶ್ಚಿಮ ವಲಯ ಡಿಸಿಪಿ ಯತೀಶ್, ಆರೋಪಿ ಹಫೀಜ್ ಮತ್ತು ಕೊಲೆಯಾಗಿರುವ ಫಿರ್ದೋಸ್ ಬಾನು ಇಬ್ಬರಿಗೂ ಮದುವೆಯಾಗಿ ಪ್ರತ್ಯೇಕ ಮಕ್ಕಳಿದ್ದಾರೆ. ಆರೋಪಿ ಯಾವುದಾದರೂ ಕೆಲಸಕ್ಕೆ ಹೋಗಬೇಕು. ಮಹಿಳೆ ನಿನ್ನೆ ಕೆಲಸಕ್ಕೆ ಹೋಗುವಾಗ ಹಿಂಬಾಲಿಸಿಕೊಂಡು ಬಂದಿದ್ದ ಆತ, ಸುಮಾರು ಆರೇಳು ಬಾರಿ ಚಾಕುವಿನಿಂದ ಇದ್ದಿದ್ದಾನೆ. ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಆಗಿದ್ದಾಳೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.