ಖಾಸಗಿ ದೃಶ್ಯ ಇಟ್ಟುಕೊಂಡು 78 ವರ್ಷದ ವ್ಯಕ್ತಿಗೆ ಮಹಿಳೆ ಬ್ಲ್ಯಾಕ್​​ಮೇಲ್​​: ದೂರು ದಾಖಲು

ಖಾಸಗಿ ದೃಶ್ಯ ಇಟ್ಟುಕೊಂಡು 78 ವರ್ಷದ ವ್ಯಕ್ತಿಗೆ ಮಹಿಳೆ ಬ್ಲ್ಯಾಕ್​​ಮೇಲ್​​: ದೂರು ದಾಖಲು


ಖಾಸಗಿ ದೃಶ್ಯ ಇಟ್ಟುಕೊಂಡು 78 ವರ್ಷದ ಮಹಿಳೆ ಬ್ಲ್ಯಾಕ್ ಮೇಲ್: ದೂರು ದಾಖಲು

ಬೆಂಗಳೂರು, ಮಾರ್ಚ್ 08: 78 ವರ್ಷದ ವ್ಯಕ್ತಿಯೋರ್ವರನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿಕೊಂಡ ಮಹಿಳೆಯೊಬ್ಬಳು ಅವರ ಜೊತೆ ಸ್ನೇಹ ಬೆಳೆಸಿ, ಈಗ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. ಸಂತ್ರಸ್ತ ವ್ಯಕ್ತಿಯ ಸೊಸೆ ಈ ಬಗ್ಗೆ ನೀಡಿರುವ ದೂರಿನ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಮಾರ್ಚ್ 3 ರಂದು ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ಮಹಿಳೆ ಮೊದಲು ಫೇಸ್‌ಬುಕ್‌ನಲ್ಲಿ 78 ವರ್ಷದ ವ್ಯಕ್ತಿಯನ್ನು ಸಂಪರ್ಕಿಸಿದ್ದಾಳೆ. ಬಳಿಕ ತನ್ನ ವಾಟ್ಸ್ಆಪ್ ಸಂಖ್ಯೆಯನ್ನು ನೀಡಿ ಅಲ್ಲಿ ಸಂಭಾಷಣೆಯನ್ನು ಮುಂದುವರಿಸಿದ್ದಾಳೆ. ಮಾಹಿತಿ ಪ್ರಕಾರ ಆರಂಭದಲ್ಲಿ ಸ್ನೇಹಪೂರ್ಣವಾಗಿ ನಡೆದ ಮಾತುಕತೆ ನಂತರ ಆತ್ಮೀಯ ವಿಡಿಯೋ ಕರೆಗಳಿಗೆ ತಿರುಗಿದೆ ಎಂದು ಹೇಳಲಾಗಿದೆ. ಬಳಿಕ ಆರೋಪಿ ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದು, 2 ಲಕ್ಷ ರೂ. ಹಣದ ಬೇಡಿಕೆ ಇಟ್ಟು, ನಂತರ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡಿರೋದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಕುಟುಂಬಕ್ಕೆ ತೀವ್ರ ಮಾನಸಿಕ ಒತ್ತಡ ಉಂಟುಮಾಡಿದ್ದು, ವಯಸ್ಸಿನ ಕಾರಣದಿಂದ ಮಾವ ಘಟನೆಯಿಂದ ಪೊಲೀಸರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: 90 ವರ್ಷದ ವೃದ್ಧೆಯ ಮೇಲೆ ನಾಲ್ವರು ಮುಸುಕುಧಾರಿಗಳಿಂದ ಸಾಮೂಹಿಕ ಅತ್ಯಾಚಾರ

ಈ ಸಂಬಂಧ ಸೈಬರ್ ತಂತ್ರಜ್ಞಾನ ಮಾಹಿತಿ ಕಾಯ್ದೆ 66 (C), ಸೆಕ್ಷನ್ 67 ಮತ್ತು ನ್ಯಾಯ ಸಂಹಿತೆಯ ಸೆಕ್ಷನ್ 318(4) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ನಮೂದಿಸಿದ ಸಾಮಾಜಿಕ ಜಾಲತಾಣ ಖಾತೆಗಳು ಮತ್ತು ಫೋನ್ ಸಂಖ್ಯೆಗಳ ಪರಿಶೀಲನೆ ಕಾರ್ಯವನ್ನು ಆರಂಭಿಸಿದ್ದು, ಆರೋಪಿಗಾಗಿ ಬಲೆ ಬೀಸಲಾಗಿದೆ. ಇದಲ್ಲದೆ, ಆರೋಪಿ ಮಹಿಳೆಯ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆಯನ್ನು ಸೃಷ್ಟಿಸಲಾಗಿದೆ ಎಂದು ಆರೋಪಿತರು, ಕುಟುಂಬದ ಸದಸ್ಯರನ್ನು ಆ ಖಾತೆಗೆ ಖಾಸಗಿ ಫೋಟೋಗಳನ್ನು ಸೇರಿಸಿ ಮತ್ತು ವೀಡಿಯೊಗಳನ್ನು ಶೇರ್ ಮಾಡಿ ಅವಮಾನ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *