ಬೆಂಗಳೂರಿನ ಅಪಾರ್ಟ್​ಮೆಂಟ್​ ಲಿಫ್ಟ್​​ನಲ್ಲಿ ನಾಯಿ ಮರಿಯನ್ನು ಬಡಿದು ಕೊಂದ ಕೆಲಸದಾಕೆ!

ಬೆಂಗಳೂರಿನ ಅಪಾರ್ಟ್​ಮೆಂಟ್​ ಲಿಫ್ಟ್​​ನಲ್ಲಿ ನಾಯಿ ಮರಿಯನ್ನು ಬಡಿದು ಕೊಂದ ಕೆಲಸದಾಕೆ!


ಬೆಂಗಳೂರು, ನವೆಂಬರ್ 3: ಬೆಂಗಳೂರು (ಬೆಂಗಳೂರು) ಬಾಗಲೂರು ಪ್ರದೇಶದಲ್ಲಿ ಮನೆ ಕೆಲಸಗಾರ್ತಿಯೊಬ್ಬಳು ಗೂಫಿ ಎಂಬ ಸಾಕು ನಾಯಿಮರಿಯನ್ನು ಲಿಫ್ಟ್ ಗೋಡೆಗೆ ಬಡಿದು ಕ್ರೂರವಾಗಿ ಕೊಂದಿದ್ದಾಳೆ. ಇದಾದ ಪುಷ್ಪಲತಾ ಎಂಬ ಆ ಕೆಲಸಾಕೆ ಸತ್ತ ನಾಯಿಮರಿಯನ್ನು ಯಾವ ಕರುಣೆಯಿಲ್ಲದೆ ದರದರನೆ ಲಿಫ್ಟ್ ನಿಂದ ಹೊರಗೆ ಎಳೆದುಕೊಂಡು ಹೋಗಿದ್ದಾಳೆ.

ಈ ದೃಶ್ಯ ಲಿಫ್ಟ್ ನೊಳಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಾನು ಪ್ರೀತಿಯಿಂದ ಸಾಕಿದ್ದ ನಾಯಿಮರಿ ಮೃತಪಟ್ಟಿರುವುದನ್ನು ಕಂಡು ರಾಶಿ ಪೂಜಾರಿ ಎಂಬಾಕೆ ಪೊಲೀಸರಿಗೆ ದೂರು ನೀಡಿದ್ದರು. ಅವರು ಸಿಸಿಟಿವಿ ಪರಿಶೀಲಿಸಿದಾಗ ಮನೆಕೆಲಸದಾಕೆಯೇ ಮರಿಯನ್ನು ಕೊಂದಿರುವುದು ಬಯಲಾಗಿದೆ. ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಷ್ಟು ವೈರಲ್ ವೀಡಿಯೊಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *