Headlines

Video: ಬೆಂಗಳೂರಿನ ವಿಮಾನ ನಿಲ್ದಾಣದ ಸೌಂದರ್ಯಕ್ಕೆ ಫಿದಾ ಆದ ಡಚ್ ಮಹಿಳೆ

Video: ಬೆಂಗಳೂರಿನ ವಿಮಾನ ನಿಲ್ದಾಣದ ಸೌಂದರ್ಯಕ್ಕೆ ಫಿದಾ ಆದ ಡಚ್ ಮಹಿಳೆ


ಬೆಂಗಳೂರು, ಡಿಸೆಂಬರ್ 07: ಭಾರತದಲ್ಲಿ ನೆಲೆಸಿರುವ ಡಚ್ ಮಹಿಳೆಯೊಬ್ಬರು ಬೆಂಗಳೂರು (ಬೆಂಗಳೂರು) ವಿಮಾನ ನಿಲ್ದಾಣವನ್ನು ಹೊಗಳಿದ್ದಾರೆ. ಇವಾನಾ (ಇವಾನಾ) ಎಂಬ ವಿದೇಶಿ ಮಹಿಳೆ, ನಿಲ್ದಾಣದ ಕ್ಲಿಪ್ ಹಂಚಿಕೊಂಡರು ಈ ಸ್ಥಳವು ಭಾರತದ ವಿದೇಶಿಯರು ಹೊಂದಿರುವ ಸ್ಟೀರಿಯೋಟೈಪ್‌ಗಳಿಂದ ದೂರವಿದೆ. ಟರ್ಮಿನಲ್‌ನ ಅದ್ಭುತ ದೃಶ್ಯಗಳು, ಹಚ್ಚ ಹಸಿರಿನ ವಿಶಾಲವಾದ ಗಾಳಿಯಾಡುವ ಒಳಾಂಗಣ ಕಂಡು ಖುಷಿ ಪಟ್ಟಿದ್ದಾರೆ. ನೆಟ್ಟಿಗರಿಂದ ಕಾಮೆಂಟ್‌ಗಳು ಹರಿದು ಬಂದಿವೆ ಈ ವಿಡಿಯೋ ವೈರಲ್ ಆಗುತ್ತಿದೆ.

ಇವಾನಾ(ivanaperkovicofficial) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ ಆದರೆ ಈ ವಿಡಿಯೋದಲ್ಲಿ ಭಾರತವನ್ನು ಹಿಂದುಳಿದ ದೇಶ ಎಂದು ಕರೆಯುವುದನ್ನು ಕಲ್ಪಿಸಿಕೊಳ್ಳಿ ಇದು ಬೆಂಗಳೂರು ವಿಮಾನ ನಿಲ್ದಾಣ ಎಂದು ಕ್ಲಿಪ್ನಲ್ಲಿ ಬರೆಯಲಾಗಿದೆ. ಈ ಟರ್ಮಿನಲ್‌ನ ಅದ್ಭುತ ದೃಶ್ಯಗಳು, ಹಚ್ಚ ಹಸಿರಿನ ವಿಶಾಲವಾದ, ಗಾಳಿಯಾಡುವ ಒಳಾಂಗಣಗಳನ್ನು ಕಾಣಬಹುದು. ಇದು ಮೊದಲ ಬಾರಿಗೆ ಭೇಟಿ ನೀಡುವವರನ್ನು ಅಚ್ಚರಿಗೊಳಿಸಿದೆ ಎಂದು ಹೇಳಿದ್ದಾರೆ. ಈ ವಿಮಾನ ನಿಲ್ದಾಣದ ವಿನ್ಯಾಸ ಹಾಗೂ ಹಚ್ಚ ಹಸಿರಿನಿಂದ ಕೂಡಿದ ವಾತಾವರಣವನ್ನು ಆಸ್ವಾದಿಸುತ್ತಾ ವಿದೇಶಿ ಮಹಿಳೆ ನಿಂತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಸ್ಥಳೀಯ ಭಾಷೆ ಕಲಿತರೆ ಜೀವನ ನಡೆಸೋದು ಸುಲಭ, ಕನ್ನಡ ಕಲಿಯಿರಿ ಎಂದ ದೆಹಲಿ ಮಹಿಳೆ

ಈ ವಿಡಿಯೋ ವೈರಲ್ ಆಗಿದ್ದು ಒಬ್ಬ ವಿಮಾನ ಬಳಕೆದಾರ ಬೆಂಗಳೂರು ಹಾಗೂ ದೆಹಲಿ ನಿಲ್ದಾಣಗಳು ಅತ್ಯುತ್ತಮ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅದಕ್ಕಾಗಿಯೇ ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ. ಇತರ ಬಳಕೆದಾರ ನಮ್ಮ ಹೆಮ್ಮೆಯ ಕರ್ನಾಟಕ ಎಂದು ಕಾಮೆಂಟ್ ಮಾಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 2:28 pm, ಭಾನುವಾರ, 7 ಡಿಸೆಂಬರ್ 25





Source link

Leave a Reply

Your email address will not be published. Required fields are marked *