Headlines

ಬೆಂಗಳೂರು: ಆರ್ಥಿಕ ಸುಳಿಯೊಳಗೆ ಸಿಲುಕಿದ 58 ವರ್ಷ ಇತಿಹಾಸವಿರುವ ಶಾಲೆ; ಬಂದ್​​ಗೆ ನಿರ್ಧಾರ

ಬೆಂಗಳೂರು: ಆರ್ಥಿಕ ಸುಳಿಯೊಳಗೆ ಸಿಲುಕಿದ 58 ವರ್ಷ ಇತಿಹಾಸವಿರುವ ಶಾಲೆ; ಬಂದ್​​ಗೆ ನಿರ್ಧಾರ


ಬೆಂಗಳೂರು: ಆರ್ಥಿಕ ಸುಳಿಯೊಳಗೆ ಸಿಲುಕಿದ 58 ವರ್ಷ ಇತಿಹಾಸವಿರುವ ಶಾಲೆ; ಬಂದ್ ಗೆ ನಿರ್ಧಾರ

ಬೆಂಗಳೂರು, ಮಾರ್ಚ್ 13: ಸುಮಾರು 350 ಮಕ್ಕಳು ವ್ಯಾಸಂಗ ಮಾಡುತ್ತಿರುವ ಈ ವೆಸ್ಟ್ ಅಕಾಡೆಮಿ ಶಾಲೆಯ (ಪೂರ್ವ ಪಶ್ಚಿಮ ಅಕಾಡೆಮಿ ಶಾಲೆ) ಮುಚ್ಚುವುದಕ್ಕೆ ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ತೀವ್ರ ಆರ್ಥಿಕ ಸಂಕಷ್ಟವೇ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಹೀಗಾಗಿ ಮಕ್ಕಳ ಭವಿಷ್ಯವೇ ಅತಂತ್ರವಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯ ಅತಂತ್ರ: ವಿರೋಧ ಆಕ್ರೋಶ

ರಾಜಾಜಿನಗರ ಮಾರುತಿ ಎಕ್ಸ್‌ಟೆನ್ಷನ್‌ನಲ್ಲಿ 58 ವರ್ಷಗಳ ಇತಿಹಾಸವಿರುವ ಈಸ್ಟ್ ವೆಸ್ಟ್ ಶಾಲೆ ಇಂದು ಖಾಸಗಿ ದೌಡಾಯಿಸಿದ್ದರು. ಏಕೆಂದರೆ ಶಾಲೆಯನ್ನೇ ಬಂದ್ ಮಾಡುವುದಕ್ಕೆ ಆಡಳಿತ ಮಂಡಳಿ ನಿರ್ಧಾರ ಮಾಡುವುದೇ ಇದಕ್ಕೆ ಕಾರಣ. ಹೀಗಾಗಿ ಶಾಲೆಯಲ್ಲಿ 1 ರಿಂದ 10 ನೇ ತರಗತಿಯವರೆಗೆ ಓದುತ್ತಿರುವ 350ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿರುವ ಹಿನ್ನೆಲೆ ಅಕ್ರೋಶ ಹೊರಹಾಕಿದೆ.

ಇದನ್ನೂ ಓದಿ: ಕರ್ನಾಟಕ ಬಜೆಟ್ 2026: ಉರ್ದು ಶಾಲೆಗಳ ಅಭಿವೃದ್ಧಿಗೆ 400 ರೂ. ಕೋಟಿ ಅನುದಾನ ಘೋಷಣೆ ಮಾಡಿದ ಸಿಎಂ ಸಿದ್ಧರಾಮಯ್ಯ

ಈ ಶಾಲೆಯು ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ, ನಿರ್ವಹಣೆ ಕಷ್ಟವಾಗಿದೆ ಎಂದು ಹೇಳುತ್ತಿರುವ ಆಡಳಿತ ಮಂಡಳಿ, ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಶೈಕ್ಷಣಿಕ ವರ್ಷಗಳ ಪರೀಕ್ಷೆಗಳು ಮುಗಿದ ಬಳಿಕ ಮಕ್ಕಳನ್ನ ಬೇರೆ ಶಾಲೆಗೆ ದಾಖಲು ಮಾಡಿ ಅಂತಾ ಪೋಷಕರಿಗೆ ಸೂಚನೆ ನೀಡಲಾಗಿದೆ. ಆದರೆ ಪೂರಕ ಇದಕ್ಕೆ ಸುತಾರಂ ಒಪ್ಪುತ್ತಿಲ್ಲ. ಫೀಸ್ ಸ್ವಲ್ಪ ಹೆಚ್ಚಿಗೆ ಮಾಡಿ, ಇನ್ನೊಂದು ವರ್ಷ ಶಾಲೆ ನಡೆಸಿ ಅಂತಾ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಜೆಟ್ 2026: ಸರ್ಕಾರಿ ಕಾಲೇಜುಗಳಲ್ಲಿ 2,000 ಬೋಧಕ ಸಿಬ್ಬಂದಿ ನೇಮಕಕ್ಕೆ ಗ್ರೀನ್ ಸಿಗ್ನಲ್ ನೀಡಿದ ಸಿಎಂ

ಇನ್ನು ಈ ಬಗ್ಗೆ ಸ್ಥಳೀಯ ಶಿಕ್ಷಣಾಧಿಕಾರಿ ಕೂಡ ಗಮನ ವಹಿಸದೇ ನಿರ್ಲಕ್ಷ್ಯ ತೋರಿದ್ದಾರಂತೆ. ಮ್ಯಾನೇಜ್ಮೆಂಟ್ ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪೋಷಕರು ಕಿಡಿಕಾರಿದ್ದು, ಶಿಕ್ಷಣ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಾಗಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *