ಕೋಳಿ ಮೊಟ್ಟೆ ದರ ಏರಿಕೆ (ಸಾಂದರ್ಭಿಕ ಚಿತ್ರ)
ಬೆಂಗಳೂರು, ಡಿಸೆಂಬರ್ 5: ಈ ವರ್ಷ ಬೆಂಗಳೂರಿನಲ್ಲಿ (ಬೆಂಗಳೂರು) ಚಳಿ ಹೆಚ್ಚೇ ಇದೆ. ಇಂತಹ ಸಮಯದಲ್ಲಿ ಮೊಟ್ಟೆ, ಚಿಕನ್, ಮೀನು ಸೇವಿಸುವವರ ಸಂಖ್ಯೆ ಹೆಚ್ಚು. ಅದರಲ್ಲೂ ಮೊಟ್ಟೆಯಿಂದ ತಯಾರಿಸಿದ ಆಹಾರಗಳನ್ನು ಹೆಚ್ಚಿನ ಜನ ಸೇವಿಸುತ್ತಾರೆ. ಜೊತೆಗೆ ಕ್ರಿಸ್ಮಸ್, ಹೊಸವರ್ಷದ ಹಬ್ಬದ ಕೇಕ್ ಉತ್ಪಾದನೆಗಾಗಿ ಮೊಟ್ಟೆಗೆ ಬೇಡಿಕೆಯಿದೆ. ಆದರೆ, ಪೂರೈಕೆ ಕಡಿಮೆಯಾಗಿದೆ, ಮೊಟ್ಟೆಯ ದರವೂ ಏರಿಕೆಯಾಗಿದೆ.
ಮೊಟ್ಟೆ ಪೂರೈಕೆ ಕೊರತೆಗೆ ಕಾರಣ ಏನು?
ಬೆಂಗಳೂರಿನಲ್ಲಿ ಮೊಟ್ಟೆ ಪೂರೈಕೆ ಕಡಿಮೆಯಾಗಿದೆ. ಜೊತೆಗೆ ಕಳೆದ ವರ್ಷ ಹಕ್ಕಿ ಜ್ವರ ಬಂದಿದ್ದರಿಂದ ಕೋಳಿಗಳ ಸಾಕಾಣಿಕೆ ಕಡಿಮೆಯಾಗಿತ್ತು. ಈ ಎಲ್ಲಾ ಕಾರಣಗಳಿಂದ ಎಲ್ಲಿಯೂ, ಬೆಂಗಳೂರಿನಲ್ಲಿ ಬೇಡಿಕೆಗೆ ತಕ್ಕಂತೆ ಮೊಟ್ಟೆಗಳು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಮೊಟ್ಟೆಗಳ ಕೊರತೆ ಉಂಟಾಗಿದೆ. ಸದ್ಯ ಪ್ರತಿನಿತ್ಯ ಬೆಂಗಳೂರಿನಲ್ಲಿ 1.10 ಕೋಟಿ ಮೊಟ್ಟೆಗಳಿಗೆ ಬೇಡಿಕೆ ಇದೆ. ಆದರೆ 30 ರಿಂದ 40 ಲಕ್ಷ ಮೊಟ್ಟೆಗಳ ಕೊರತೆ ಎದುರಾಗಿದೆ ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್ ನಾಗರಾಜ್ ಆವೃತ್ತಿ.
ಬೆಂಗಳೂರಿನಲ್ಲಿ ಈಗೆಷ್ಟಿದೆ ಮೊಟ್ಟೆ ದರ?
ಬೆಂಗಳೂರಿನಲ್ಲಿ 5 ರೂಪಾಯಿ ಇದ್ದ ಮೊಟ್ಟೆ ಬೆಲೆ ಇದೀಗ ದುಬಾರಿ, ಒಂದು ಮೊಟ್ಟೆಗೆ 7 ರಿಂದ 8 ರೂಪಾಯಿ ಆಗಿದೆ. ತಮಿಳುನಾಡಿನ ನಾಮಕಲ್ ನಿಂದ ಪ್ರತಿನಿತ್ಯ 79 ಲಕ್ಷ ಮೊಟ್ಟೆ ಪೂರೈಕೆಯಾಗುತ್ತಿದೆ. ಸದ್ಯ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಕರ್ನಾಟಕಕ್ಕೆ ಮೊಟ್ಟೆ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ.
ಚಿಕನ್ ಬೆಲೆಯೂ ಹೆಚ್ಚಿದೆ
ಮೊಟ್ಟೆಯ ಜೊತೆಗೆ ಕೋಳಿಯ ಬೆಲೆ ಹೆಚ್ಚಾಗಿದ್ದು, ಕೋಳಿ ಕೆಜಿಗೆ 150 ರೂಪಾಯಿ ಹಾಗೂ ಫಾರಂ ಕೆ.ಜಿಗೆ 170 ರೂಪಾಯಿಗೆ ಏರಿಕೆಯಾಗಿದೆ. ಹೀಗಾಗಿ ಕೋಳಿ ಹಾಗೂ ಮೊಟ್ಟೆಯಿಂದ ಮಾಡಿದ ಎಲ್ಲಾ ಆಹಾರ ಪದಾರ್ಥಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಆಗಸ್ಟ್ ಮಳೆಯಿಂದ ರೈತರಿಗೆ ಸಂಕಷ್ಟ: ಚಳಿಗಾಲದಲ್ಲಿ ಬೆಂಗಳೂರಿಗರಿಗೆ ಶಾಕ್ ಕೊಟ್ಟ ಅವರೆಕಾಯಿ
ಮೊಟ್ಟೆ ಬೆಲೆ ಏರಿಕೆ ಬಗ್ಗೆ ಕಾಣಿಸಿಕೊಂಡ ಗೃಹಿಣಿ, ದರ ಏರಿಕೆ ಆಗಿರುವುದರಿಂದ ಮಕ್ಕಳಿಗೆ ಸರಿಯಾಗಿ ಮೊಟ್ಟೆ ಕೊಡಲು ಆಗುತ್ತಿಲ್ಲ. ಜಿಮ್ಗೆ ಹೋಗುತ್ತಿದ್ದರೆ, ಪ್ರೋಟಿನ್ಗಾಗಿ ಪ್ರತಿದಿನ 10 ರಿಂದ 12 ಮೊಟ್ಟೆಗಳನ್ನು ತಿನ್ನಬೇಕು. ಇಷ್ಟೊಂದು ದರ ಏರಿಕೆ ಆದರೆ ಕಷ್ಟ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಇನ್ನೂ ಎರಡು-ಮೂರು ತಿಂಗಳು ಕೋಳಿ, ಮೊಟ್ಟೆಯ ಬೆಲೆ ಕಡಿಮೆಯಾಗುವ ಸಾಧ್ಯತೆ ಇಲ್ಲ. ಇತ್ತ ಈ ದರ ಏರಿಕೆಯು ಕ್ರಿಸ್ಮಸ್ ಕೇಕ್ ತಿನ್ನಬೇಕು ಎಂದವರ ಜೇಬಿಗೂ ಕತ್ತರಿ ಹಾಕುವ ಸಾಧ್ಯತೆ ಇದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ