ಬೆಂಗಳೂರು, (ಡಿಸೆಂಬರ್ 05): ಇಂಡಿಗೋ ವಿಮಾನಗಳು ಹಾರಾಟ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಸ್ತಿ ವಿಸರ್ಜನೆಗೆಂದು ಹರಿದ್ವಾರಕ್ಕೆ ಟಿಕೆಟ್ ಬುಕ್ ಮಾಡಿದ್ದ ಕುಟುಂಬಸ್ಥರಿಗೂ ಸಹ ವಿಮಾನ ಸಿಗದ ಪರದಾಡುವ ಸ್ಥಿತಿ ಎದುರಾಗಿದೆ. ಹೌದು..ಕುಟುಂಬವೊಂದು ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆಯ ಪೂಜೆಯನ್ನು ಸಿದ್ದಪಡಿಸಿಕೊಂಡು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಆದರೆ, ಕೊನೆ ಕ್ಷಣದಲ್ಲಿ ವಿಮಾನ ರದ್ದಾಗಿರುವುದು ತಿಳಿದುಕೊಂಡಕ್ಕೊಳಗಾಗಿದ್ದಾರೆ. ಅತ್ತ ಹರಿದ್ವಾರದಲ್ಲಿ ಪೂಜೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ರೆ, ಬೆಂಗಳೂರಿನಿಂದ ವಿಮಾನ ಕ್ಯಾನ್ಸಲ್ ಆಗಿರುವ ಕುಟುಂಬ ಅಸ್ಥಿಯನ್ನು ಕೈನಲ್ಲೇ ಹಿಡಿದುಕೊಂಡು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಕುಳಿತುಕೊಂಡಿದೆ.