Video: ನಮ್ಮ ವಸ್ತುಗಳು ಇಲ್ಲಿ ಸೇಫ್, ಬೆಂಗಳೂರು ಇಷ್ಟವಾಗೋದು ಇದೇ ಕಾರಣಕ್ಕೆ ಎಂದ ಇಟಲಿಯನ್ ಮಹಿಳೆ

Video: ನಮ್ಮ ವಸ್ತುಗಳು ಇಲ್ಲಿ ಸೇಫ್, ಬೆಂಗಳೂರು ಇಷ್ಟವಾಗೋದು ಇದೇ ಕಾರಣಕ್ಕೆ ಎಂದ ಇಟಲಿಯನ್ ಮಹಿಳೆ


ವಿದೇಶಿಯರಿಗೆ ಭಾರತವೆಂದರೆ ಅದೇನೋ ಸೆಳೆತ. ಹೀಗಾಗಿ ಇಲ್ಲಿಯ ಪ್ರವಾಸಿಗಳ ಸವಿಯಲು ಬರುವ ತಾಣವು ಜನರು ತೋರುವ ಪ್ರೀತಿಗೆ ಕಳೆದೇ ಹೋಗುತ್ತಾರೆ. ಎಲ್ಲಾ ಆಚಾರ ವಿಚಾರವನ್ನು ಇಷ್ಟ ಪಟ್ಟು ಭಾರತದಲ್ಲೇ ನೆಲೆಸಲು ಇಷ್ಟ ಪಡುತ್ತಾರೆ. ಇಟಾಲಿಯನ್ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ (ಬೆಂಗಳೂರು) ನೆಲೆಸಿದ್ದಾರೆ. ತಾವು ಬಳಸುವ ಈ ವಸ್ತುಗಳು ಎಷ್ಟು ಸೇಫ್ ಆಗಿವೆ ಎನ್ನುವುದನ್ನು ಅರಿತುಕೊಂಡಿದ್ದಾರೆ. ಹೌದು, ಬೆಂಗಳೂರಿನಲ್ಲಿ ಅಂಗಡಿಯೊಂದಕ್ಕೆ ತೆರಳಿದ ವಿದೇಶಿ ಮಹಿಳೆ ಹೆಲ್ಮೆಟ್ ಅನ್ನು ಮರೆತು ಸ್ಕೂಟರ್‌ನಲ್ಲೇ ಬಿಟ್ಟಿದ್ದಾರೆ. ಕೊನೆಗೆ ಈ ಬಗ್ಗೆ ಅರಿವಿಗೆ ಬಂದಿದೆ. ಕೂಡಲೇ ಹೆಲ್ಮೆಟ್ ಇದೆಯೇ ಎಂದು ವಾಹನದ ಕಡೆಗೆ ನೋಡಿದ್ದಾರೆ. ಈ ಕ್ಲಿಪ್ ವಿದೇಶಿ ಮಹಿಳೆ ಅನುಭವಿಸಿದ ಸುರಕ್ಷತೆಯ ಭಾವನೆಯನ್ನು ಎತ್ತಿ ತೋರಿಸಿದೆ. ಈ ವಿಡಿಯೋದಲ್ಲಿ ಸುರಕ್ಷತೆ ಹಾಗೂ ಭದ್ರತೆಯಲ್ಲಿ ಬೆಂಗಳೂರನ್ನು ಹಾಡಿ ಹೊಗಳಿದ್ದಾರೆ.

serenaspeaksalot ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸೆರೆನಾ ಎಂಬ ವಿದೇಶಿ ಮಹಿಳೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಭಾರತದಲ್ಲಿ ವಾಸಿಸುವುದರಿಂದ ನನಗೆ ಸಿಕ್ಕ ಲಾಭಗಳು ಇಲ್ಲಿ ಸುರಕ್ಷಿತವೆನಿಸುತ್ತದೆ, ಅದರ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ವಿದೇಶಿ ಮಹಿಳೆಯೊಬ್ಬಳು ದ್ವಿ ಚಕ್ರ ವಾಹನದಲ್ಲೇ ಹೆಲ್ಮೆಟ್ ಬಿಟ್ಟು ಅಂಗಡಿಗೆ ತೆರಳಿದ. ನಾನು ನನ್ನ ಹೆಲ್ಮೆಟನ್ನು ಅಲ್ಲಿಯೇ ಬಿಟ್ಟೆ ಎಂದು ವಿಡಿಯೋದ ಮೇಲೆ ಬರೆಯಲಾಗಿದೆ. ಆ ಬಳಿಕ ಈ ಮಹಿಳೆ ಅಂಗಡಿಯಿಂದ ಹೊರ ಬಂದು ಸ್ಕೂಟರ್ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ. ಈ ಕ್ಲಿಪ್ ನಲ್ಲಿ ಅಯ್ಯೋ ಇಟಲಿಯಲ್ಲಿಯಾದ್ರೆ 2 ನಿಮಿಷ ಕೂಡ ಈ ವಸ್ತುಗಳು ಉಳಿಯಲ್ಲ ಎಂದು ಬರೆದಿರುವುದನ್ನು ನೋಡಬಹುದು.

ಇದನ್ನೂ ಓದಿ:ಬೆಂಗಳೂರಿನಲ್ಲಿ ವಸತಿ ದರ, 2ಬಿಹೆಚ್‌ಕೆ ಮನೆಗೆ 1 ಕೋಟಿ ರೂ; ವಾಸ್ತವ ಸ್ಥಿತಿ ಬಿಚ್ಚಿಟ್ಟ ವ್ಯಕ್ತಿ

ಈ ವಿಡಿಯೋ ಮೂವತ್ತೂ ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ, ಒಬ್ಬ ಬಳಕೆದಾರ ಬೆಂಗಳೂರಿನಲ್ಲಿ ನಿಮ್ಮ ಹೆಲ್ಮೆಟ್ ಎಲ್ಲಿ ಬಿಟ್ಟು ಹೋಗು, ಸೇಫ್ ಆಗಿರುತ್ತದೆ ಎಂದು ಹೇಳಿದರು. ಮತ್ತೊಬ್ಬರು ಈ ಕಾರಣಕ್ಕಾಗಿ ನಾನು ಭಾರತವನ್ನು ಪ್ರೀತಿಸುತ್ತೇವೆ. ಒಪ್ಪಿಕೊಂಡರು, ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *