Headlines

ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್

ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್


ಬೆಂಗಳೂರು, ಡಿಸೆಂಬರ್ 22: ದೇವನಹಳ್ಳಿ ಸಮೀಪ ಫ್ಯಾಕ್ಸ್‌ಕಾನ್ ಸಂಸ್ಥೆ ನಿರ್ಮಿಸಿರುವ ಐಫೋನ್ ಫ್ಯಾಕ್ಟರಿಯಲ್ಲಿ (ಫಾಕ್ಸ್‌ಕಾನ್‌ನ ಐಫೋನ್ ಅಸೆಂಬ್ಲಿ ಘಟಕ) ಭಾರೀ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿದೆ. ವರದಿಗಳ ಪ್ರಕಾರ, ಕೇವಲ ಎಂಟು ತಿಂಗಳಲ್ಲಿ ಇಲ್ಲಿಗೆ ಬರೋಬ್ಬರಿ 30,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗಿದೆ. ಭಾರತದಲ್ಲಿ ಯಾವುದೇ ಸಂಸ್ಥೆಯು, ಅಥವಾ ಯಾವುದೇ ಫ್ಯಾಕ್ಟರಿಯು ಇಷ್ಟು ವೇಗದಲ್ಲಿ ಇಷ್ಟು ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಂಡಿದ್ದೇ ಇಲ್ಲ.

ಐಫೋನ್ ಫ್ಯಾಕ್ಟರಿಯಲ್ಲಿ ಶೇ. 80 ಮಹಿಳೆಯರು

300 ಜಾಗದಲ್ಲಿ ತೈವಾನ್ ಮೂಲದ ಫಾಕ್ಸ್‌ಕಾನ್ ಕಂಪನಿ ನಿರ್ಮಿಸಿರುವ ವಿಶಾಲ ಫ್ಯಾಕ್ಟರಿಯಲ್ಲಿ ನೇಮಕವಾಗಿರುವವರಲ್ಲಿ ಶೇ. 80ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. ಎಲ್ಲರೂ ಕೂಡ ಎಂಟ್ರಿ ಏಜ್ ಲೆವೆಲ್ನಲ್ಲಿದ್ದಾರೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಐಫೋನ್ ಫ್ಯಾಕ್ಟರಿಗೆ ನೇಮಕವಾಗಿರುವವರಲ್ಲಿ ಹೆಚ್ಚಿನವರು ಕೇವಲ 19-24 ವಯೋಮಾನದವರಾಗಿದ್ದರೆ, ಎಲ್ಲರಿಗೂ ಮೊದಲ ಕೆಲಸ.

ಪಿಯುಸಿ, ಡಿಪ್ಲೊಮಾ ಮಾಡಿರುವ ಯುವತಿಯರನ್ನು ಕೆಲಸಕ್ಕೆ ಸೇರಿಸಿಕೊಂಡು, ಆರು ತಿಂಗಳ ಕಾಲ ತರಬೇತಿ ಕೊಟ್ಟು ಬಳಿಕ ಐಫೋನ್ ಪ್ರೊಡಕ್ಷನ್ ಯುನಿಟ್‌ಗಳಿಗೆ ಸೇರಿಸಲಾಗುತ್ತಿದೆ. ಉದ್ಯೋಗಿಗಳಿಗೆಂದೇ ಒಂದು ಟೌನ್ ಶಿಪ್ ಕೂಡ ನಿರ್ಮಾಣ ಮಾಡಲಾಗುತ್ತಿದೆ.

ಇದನ್ನೂ ಓದಿ: ಡಾವೋಸ್ ಸಭೆಗೆ ಭಾರತದಿಂದ ಪ್ರಬಲ ತಂಡ; 100ಕ್ಕೂ ಹೆಚ್ಚು ಉದ್ಯಮಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ನಿಯೋಗದಲ್ಲಿ

ಭಾರತದಲ್ಲಿ ಇದು ಫಾಕ್ಸ್ಕಾನ್ನ ಅತಿದೊಡ್ಡ ಘಟಕ

2024ರ ಏಪ್ರಿಲ್-ಮೇ ತಿಂಗಳಲ್ಲೇ ಇಲ್ಲಿ ಐಫೋನ್-16 ಫೋನ್‌ಗಳ ಅಸೆಂಬ್ಲಿಂಗ್ ಶುರುವಾಗಿತ್ತು. ಇದೀಗ ಇಲ್ಲಿ ಐಫೋನ್-17 ಪ್ರೋ ಮ್ಯಾಕ್ಸ್ ಮಾಡಲ್ ಫೋನ್ ಅಸೆಂಬ್ಲಿಂಗ್ ನಡೆಯುತ್ತಿದೆ. ಈ 300 ಜನರಿಗೆ ನಿರ್ಮಾಣವಾಗಿರುವ ಘಟಕ 50,000 ಜನರಿಗೆ ಕೆಲಸ ಮಾಡುವಷ್ಟು ವಿಶಾಲವಾಗಿದೆ. ತಮಿಳುನಾಡಿನಲ್ಲಿರುವ ಐಫೋನ್ ಫ್ಯಾಕ್ಟರಿ ಇದು ಬೃಹತ್ತಾಗಿದೆ.

ಐಟಿ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಹೈರಿಂಗ್

ಭಾರತದಲ್ಲಿ ಐಟಿ ವೃತ್ತಿಪರರಿಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ನೇಮಕಾತಿ ತೀವ್ರತರದಲ್ಲಿ ನಡೆಯುತ್ತಿದೆ. ಈ ವರ್ಷ (2025) 18 ಲಕ್ಷ ಐಟಿ ಹುದ್ದೆಗಳ ನೇಮಕಾತಿ ಆಗಿದೆ. ಹಿಂದಿನ ವರ್ಷಕ್ಕೆ ಬೇಡಿಕೆ ಶೇ. 16ರಷ್ಟು ಹೆಚ್ಚಿದೆ. ಆದರೆ, ಹೆಚ್ಚಿನ ನೇಮಕಾತಿಗಳು ಗ್ಲೋಬಲ್ ಕೇಬಿಲಿಟಿ ಸೆಂಟರ್‌ಗಳಿಂದಲೇ ಆಗುತ್ತಿದೆ. ಇನ್ಫೋಸಿಸ್, ಟಿಸಿಎಸ್ ಇತ್ಯಾದಿ ಐಟಿ ಸರ್ವೀಸ್ ಕಂಪನಿಗಳಿಂದ ನೇಮಕಾತಿ ಮಂದವಾಗಿಯೇ ಇದೆ.

ಇದನ್ನೂ ಓದಿ: ಈ ವರ್ಷ ಸರ್ಕಾರಕ್ಕೆ ಸಿಕ್ಕಿದ ನಿವ್ವಳ ನೇರ ತೆರಿಗೆ ಸಂಗ್ರಹ 17 ಲಕ್ಷ ಕೋಟಿ ರೂ

ಉತ್ತರಪ್ರದೇಶದಲ್ಲಿ ಮುಂದಿನ ತಿಂಗಳ ಮೊದಲ ಸೆಮಿಕಂಡಕ್ಟರ್ ಘಟಕ

ಫಾಕ್ಸ್‌ಕಾನ್ ಮತ್ತು ಎಚ್‌ಸಿಎಲ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿರುವ ಸೆಮಿಕಂಡಕ್ಟರ್ ಘಟಕ ಮುಂದಿನ ತಿಂಗಳು (2026ರ ಜನವರಿ) ಲೋಕಾರ್ಪಣೆ ಆಗಬಹುದು. ಇದು ಉತ್ತರಪ್ರದೇಶ ರಾಜ್ಯಕ್ಕೆ ಸೇರಿದ್ದು, ದೆಹಲಿಗೆ ಸಮೀಪವೇ ಇರುವ ಗೌತಮ್ ಬುದ್ಧ ನಗರ ಜೇವರ್ ಪ್ರದೇಶದ ಸೆಕ್ಟರ್ 28 ರಲ್ಲಿ ನಿರ್ಮಾಣವಾಗಿದೆ. ಇಲ್ಲಿ ಡಿಸ್ಪ್ಲೇ ಡ್ರೈವರ್ ಇಂಟಿಗ್ರೇಟೆಡ್ ಪ್ರದರ್ಶನಗಳನ್ನು ಹೊಂದಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *