ಬೆಂಗಳೂರು, ಡಿಸೆಂಬರ್ 4: ಕರ್ನಾಟಕದಿಂದ ರಾಜಧಾನಿ ಬೆಂಗಳೂರಿಗೆ (ಬೆಂಗಳೂರು) ಬಂದು ಹೋರಾಟಗಾರರ ಹೋರಾಟ ಮಾಡುವ ಏಕೈಕ ಜಾಗ ಅದು. ಅಂಥ ಫ್ರೀಡಂ ಪಾರ್ಕ್ ಅನ್ನು ಈಗ ಬಂದ್ ಮಾಡಲಾಗಿದೆ. ಹೌದು, ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆ ತಾತ್ಕಾಲಿಕವಾಗಿ ಫ್ರೀಡಂ ಪಾರ್ಕ್ ಬಂದ್ ಮಾಡಲಾಗಿದೆ. 22 ಜಾಗದಲ್ಲಿ ವ್ಯಾಪಿಸಿರುವ ಫ್ರೀಡಂ ಪಾರ್ಕ್ ಅನ್ನು ಒಳಗಿನಿಂದ ಬಂದ್ ಮಾಡಲಾಗಿದೆ. ಸಾರ್ವಜನಿಕರಿಗೆ ಅವಕಾಶವನ್ನು ನಿಷೇಧಿಸಲಾಗಿದೆ. ಹೀಗಾಗಿ ಇದೀಗ ಪ್ರತಿಭಟನೆಕಾರರು ಫ್ರೀಡಂ ಪಾರ್ಕ್ ಹೊರಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಿಯೂ ಪ್ರತಿಭಟನೆಗೂ ಅವಕಾಶ ಕೊಡದಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ.
ಬ್ರ್ಯಾಂಡ್ ಬೆಂಗಳೂರು ಹೆಸರಿನಡಿ ಗ್ರೇಟರ್, ಬೆಂಗಳೂರು ಪ್ರಾಧಿಕಾರದಿಂದ ಫ್ರೀಡಂ ಪಾರ್ಕ್ನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಫ್ರೀಡಂ ಪಾರ್ಕ್ನಲ್ಲಿ ಅಭಿವೃದ್ಧಿ ಕಾಮಗಾರಿ ನಂತರ ಹೋರಾಟಗಾರರು, ನಡಿಗೆದಾರರು, ಪ್ರದರ್ಶನ, ಪ್ರದರ್ಶನ, ಸಾರ್ವಜನಿಕರಿಗೆ ಇತರ ಉದ್ದೇಶಗಳಿಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ 5 ಕೋಟಿ ರೂ ವೆಚ್ಚದಲ್ಲಿ ಶೌಚಾಲಯ, ಹೋರಾಟಗಾರರಿಗೆ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿ ತೀವ್ರಗತಿಯಲ್ಲಿ ಸಾಗಿದೆ. ಇದೀಗ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ, ನೀರಿನ ಸೌಲಭ್ಯವೂ ಸಹ ಇಲ್ಲ. ಇಲ್ಲಿ ಶಾಶ್ವತ ಕಾಮಗಾರಿ ಪೂರ್ಣಗೊಳ್ಳುವವರೆಗೆ ಪ್ರತಿಭಟನೆ ನಡೆಸಲು ಅನುಮತಿ ನೀಡುವುದನ್ನು ನಿಲ್ಲಿಸಲು ಮನವಿ ಮಾಡಲಾಗಿದೆ. ಇದೇ ವಾರದಲ್ಲಿ ಪ್ರತಿಭಟನೆಗೆ ಅವಕಾಶ ಕೊಡದಿರಲು ಚಿಂತನೆ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ನಡಿಗೆದಾರರು, ಫ್ರೀಡಂ ಪಾರ್ಕ್ ಕ್ಲೋಸ್ ಮಾಡುವುದರಿಂದ ನಮಗೆ ವಾಕ್ ಮಾಡಲು ಆಗುತ್ತಿಲ್ಲ. ಇದರಿಂದ ತುಂಬಾ ಸಮಸ್ಯೆ ಆಗುತ್ತಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ
ಒಟ್ಟಿನಲ್ಲಿ, ಅಭಿವೃದ್ಧಿ ಕಾಮಗಾರಿಗಾಗಿ ಫ್ರೀಡಂ ಪಾರ್ಕ್ ಮುಚ್ಚಲಾಗಿದೆ. ಇದರಿಂದ ಹೋರಾಟಗಾರರಿಗೆ ಸಮಸ್ಯೆ ಆಗುತ್ತಿದೆ, ಆದಷ್ಟು ಬೇಗ ಕಾಮಗಾರಿ ಮುಗಿಸಿ ಪಾರ್ಕ್ ಓಪನ್ ಮಾಡಲಿ ಎಂಬ ಆಗ್ರಹವಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ