Headlines

Viral: ಫಿಲ್ಟರ್ ಕಾಫಿಯಿಂದ ಮದುವೆ ಪ್ರಸ್ತಾಪದವರೆಗೆ; ಇದು ಬೆಂಗಳೂರಿನ ಜಿಟಿಜಿಟಿ ಮಳೆಯಲ್ಲಿ ಚಿಗುರಿದ ಪ್ರೀತಿ

Viral: ಫಿಲ್ಟರ್ ಕಾಫಿಯಿಂದ ಮದುವೆ ಪ್ರಸ್ತಾಪದವರೆಗೆ; ಇದು ಬೆಂಗಳೂರಿನ ಜಿಟಿಜಿಟಿ ಮಳೆಯಲ್ಲಿ ಚಿಗುರಿದ ಪ್ರೀತಿ


ಪ್ರೀತಿಗೆ (Love) ಕಣ್ಣಿಲ್ಲ, ಯಾವಾಗ, ಯಾರ ಮೇಲಾದ್ರೂ ಲವ್ ಆಗಬಹುದು. ತುಂತುರು ಮಳೆಯ ನಡುವೆ ಪ್ರೀತಿ ಚಿಗುರುವ ದೃಶ್ಯಗಳನ್ನು ಸಿನಿಮಾದಲ್ಲಿ ಹೆಚ್ಚಾಗಿ ನೋಡಿ ಇರ್ತೀರಾ. ಯುವ ಜೋಡಿಯ ಮಧ್ಯೆ ನಡೆದ ಹಾಸ್ಯಭರಿತ ಮಾತುಕತೆ ಹಾಗೂ ಪ್ರೇಮಕಥೆಗೆ ಈ ಬೆಂಗಳೂರಿನ ಮಲ್ಲೇಶ್ವರಂ (ಬೆಂಗಳೂರಿನ ಮಲ್ಲೇಶ್ವರಂ) ಮಾರುಕಟ್ಟೆ ಸಾಕ್ಷಿಯಾಗಿದೆ. ಆ ಸಂಜೆಯ ವಾತಾವರಣ ಹಾಗೂ ಜಿಟಿಜಿಟಿ ಮಳೆಯ ನಡುವೆ ಚಿಗುರಿದ ಪ್ರೇಮಕಥೆಯನ್ನು ಯುವಕನು ರೆಡ್ಡಿ ಖಾತೆಯಲ್ಲಿ ರಿವೀಲ್ ಮಾಡಿದ್ದಾನೆ. ಈ ಕುರಿತಾದ ವಿಶೇಷ ಲವ್ ಸ್ಟೋರಿ ಇಲ್ಲಿದೆ ನೋಡಿ.

ಜಿಟಿಜಿಟಿ ಮಳೆಯಲ್ಲಿ ಶುರುವಾದ ಲವ್ ಸ್ಟೋರಿ

ರೆಡ್ಡಿಟ್ ಖಾತೆಯಲ್ಲಿ ವಿಶೇಷ ದಿನದ ಬಗ್ಗೆ ಹಂಚಿಕೊಳ್ಳುತ್ತಾ, ಮಲ್ಲೇಶ್ವರನ ಹಿತವಾದ ಜಿಟಿ ಜಿಟಿ ಮಳೆಯಲ್ಲಿ, ನಾನು ಮತ್ತು ಗೆಳತಿ ಒಂದೇ ಬಾರಿಗೆ ಛತ್ರಿಯಡಿ ನಡೆಯುತ್ತಿತ್ತು. ಈ ಮುದ್ದಾದ ಜೋಡಿಯ ಅಕ್ಕಪಕ್ಕದ ಬದಿಯಲ್ಲಿ ಹೂವು ಮಾರುವವರು ಹಾಗೂ ಪುಸ್ತಕ ಮಾರಾಟ ಮಾಡುವವರು ಇಬ್ಬರು. ಒದ್ದೆ ಮಣ್ಣಿನ ಪರಿಮಳ ಹೊತ್ತ ಆ ಸಂಜೆಯನ್ನು ಮತ್ತಷ್ಟು ಸುಂದರ ರಸಮಯವಾಗಿಸಿತ್ತು. ರಸ್ತೆ ಬದಿಯ ಹೂವಿನ ವ್ಯಾಪಾರಿಗಳ ಕೂಗು ಹಾಗೂ ಮಾರುಕಟ್ಟೆಯ ನಿಧಾನಗತಿಯಿಂದ ಸಾಗುತ್ತಿದ್ದ ಸಂಜೆಯೂ ಹೊಸ ಅನುಭವ ಸೃಷ್ಟಿಸಿತ್ತು. ಬಟ್ಟೆ ವ್ಯಾಪಾರಿಗಳ ಜೋರಾದ ಧ್ವನಿ ಆ ದಿನಕ್ಕೆ ಮತ್ತಷ್ಟು ಮೆರುಗು ನೀಡಿತ್ತು. ಡೇಟಿಂಗ್ ಮಾಡಲು ಕೆಲವೇ ವಾರಗಳಲ್ಲಿ ಆದರೂ, ಆ ದಿನ ಮಾತ್ರ ವಿಶೇಷವಾಗಿತ್ತು ಎಂದು ಹೇಳಿದ್ದಾನೆ.

ವಿಶೇಷ ಪ್ರಸ್ತಾಪ ಮಾಡಿದ ಯುವಕ

ಒಂದೇ ಕೊಡೆಯಡಿ ಇಬ್ಬರು ನಡೆದು ಹೋಗುವಾಗ ಸಂಜೆ, ಮಳೆಗೆ ಬಿಸಿ ಬಿಸಿ ಕಾಫಿ ಕುಡಿಯಬೇಕು ಎಂದೆನಿಸಿತು. ಆಗ ಅಲ್ಲೇ ಸಮೀಪದಲ್ಲಿದ್ದ ಪುಟ್ಟ ಕೆಫೆ ವ್ಯಕ್ತಿಯನ್ನು ನೋಡಿದ ಯುವಕ, ತನ್ನ ಗೆಳತಿಗೆ `ನಾನು ನಿನ್ನಲ್ಲಿ ಒಂದು ಮುಖ್ಯವಾದ ವಿಷಯವನ್ನು ಕೇಳಬೇಕು ಎಂದೆನು. ನನ್ನ ಮಾತು ಕೇಳುತ್ತಿದ್ದಂತೆ ಗೆಳತಿ ಮಾತ್ರ ತನ್ನ ಎರಡು ಕಣ್ಣನ್ನು ಅರಳಿಸಿದಳು. ಆಕೆ ಈ ಮದುವೆಯ ಪ್ರಸ್ತಾಪವೇ ಇರಬೇಕು ಎಂದು ಕಸಿವಿಸಿಗೊಂಡಳು. ಕೊನೆಗೆ ನಾನು ಏನು ಹೇಳಬೇಕೆಂದು ತಿಳಿಯದೆ ಕೊಂಚ ಸುಧಾರಿಸಿಕೊಂಡು ತನ್ನ ಪ್ರಸ್ತಾಪವನ್ನು ಗೆಳತಿಯ ಮುಂದೆ ಇಟ್ಟೆನು ಎಂದು ವಿವರಿಸಿದ್ದಾನೆ.

ಇದನ್ನೂ ಓದಿ

ಇದು ಮದುವೆ ಪ್ರಸ್ತಾಪ ಅಲ್ಲ. ಒಂದು ಸ್ಟ್ರಾಂಗ್ ಫಿಲ್ಟರ್ ಕಾಫಿಯನ್ನು ಕುಡಿಯೋಣ. ಮಳೆಗೆ ತುಂಬಾ ಚೆನ್ನಾಗಿರುತ್ತದೆ ಎಂದು ನಾನು ಹೇಳಿದೆ. ಆಗ ನಮ್ಮಿಬ್ಬರಿಗೂ ನಗು ತಡೆಯಲಾಗಲಿಲ್ಲ. ಆ ಮುಜುಗರದ ಕ್ಷಣವು ನಗುವಿನ ಅಲೆಗಳಲ್ಲೇ ಬೆರೆತು ಬಿಸಿ ಬಿಸಿ ಕಾಫಿಯೊಂದಿಗೆ ಸಂಜೆ ಮತ್ತಷ್ಟು ಸ್ಮರಣೀಯವಾಗಿಸಿತು. ಕಾಫಿ ಶಾಪ್‌ಗೆ ತೆರಳಿ ಒಂದು ಕಾಫಿ ಆರ್ಡರ್ ಮಾಡಿದೆವು. ಆ ನಂತರ ಕಾಫಿ ಒಂದು ಸಿಪ್ ಹೀರುತ್ತಾ ನಗುತ್ತಲೇ ಇದ್ದೆವು. ನಾವು ಕೊನೆಯ ಸಿಪ್‌ವರೆಗೂ ತಮಾಷೆ ಮಾಡುತ್ತ ಸಿಪ್‌ ಮುಗಿಯುವವರೆಗೂ ಮಾತನಾಡಿದ್ವಿ. ಈ ಸಾಮಾನ್ಯ ಕಾಫಿ ಡೇಟ್ ಮುಂದೊಂದು ದಿನ ಇದಕ್ಕಿಂತ ಹೆಚ್ಚಿನದಾಗಬಹುದು . ಆದರೆ ಸದ್ಯಕ್ಕೆ, ಆ ಮಳೆ, ನಗು, ಫಿಲ್ಟರ್ ಕಾಫಿಯ ಶ್ರೀಮಂತ ಪರಿಮಳ ಹಾಗೂ ಆಕೆಯ ಪ್ರಕಾಶಮಾನವಾದ ನಗು ಸಂಜೆಯನ್ನು ಮತ್ತಷ್ಟು ಸುಂದರವಾಗಿಸಿತು ಎಂದು ಪ್ರೇಮಕಥೆಯನ್ನು ತೆರೆದಿದ್ದಾನೆ.

ಇದನ್ನೂ ಓದಿ:ನನಗೆ ದೆಹಲಿಗಿಂತ ಬೆಂಗಳೂರು ಇಷ್ಟ, ಈ ಕಾರಣಕ್ಕೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಈ ಸ್ಟೋರಿ ಓದಿದಾಗ ಸಿನಿಮಾದ ದೃಶ್ಯವೇ ಕಣ್ಣ ಮುಂದೆ ಬಂದಿತು. ಮತ್ತೊಬ್ಬರು, ಈ ಸಂಜೆಯ ವಿಶೇಷ ದಿನದಲ್ಲಿ ಒಂದೊಳ್ಳೆ ಸಿನಿಮಾ ತೆಗೆಯಬಹುದು ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ನಿಮಗೇನು ಕಾಫಿ ಕುಡಿಯೋಕೆ ಗೆಳತಿಯಾದ್ರು ಇದ್ದಾರೆ, ನಾವು ಸಿಂಗಲ್ಸ್ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *