ದಂಡ ವಿಧಿಸಿದ್ರೂ ಬೆಂಗಳೂರಿನಲ್ಲಿ ಕಸ ಎಸೆಯುವುದು ನಿಲ್ಲುತ್ತಿಲ್ಲ: ವಿಲೇವಾರಿಯಲ್ಲೂ ನಿರ್ಲಕ್ಷ್ಯ

ದಂಡ ವಿಧಿಸಿದ್ರೂ ಬೆಂಗಳೂರಿನಲ್ಲಿ ಕಸ ಎಸೆಯುವುದು ನಿಲ್ಲುತ್ತಿಲ್ಲ: ವಿಲೇವಾರಿಯಲ್ಲೂ ನಿರ್ಲಕ್ಷ್ಯ


ಬೆಂಗಳೂರು, ನವೆಂಬರ್ 20: ಎಲ್ಲೆಂದರಲ್ಲಿ ಕಸ (ಕಸ) ಎಸೆಯುವವರ ವಿರುದ್ಧ ಸಮರ ಸಾರಿರುವ ಜಿಬಿಎ, ಕಳೆದ ಮೂರು ದಿನಗಳಿಂದ ವಿಶೇಷ ಅಭಿಯಾನ ನಡೆಸಿದೆ. ಎಲ್ಲೆಂದರಲ್ಲಿ ಕಸ ಎಸೆದವರ ಮನೆ ಬಾಗಿಲಿಗೆ ಕಸ ಸುರಿದು ದಂಡ ವಸೂಲಿ ಮಾಡ್ತಿರೋ ಜಿಬಿಎ (GBA)ಇದುವರೆಗೆ 30 ಲಕ್ಷ ರೂ ಅಧಿಕ ದಂಡ ವಸೂಲಿ ಮಾಡಿದೆ. ಇತ್ತ ಒಂದೆಡೆ ಕಸ ಎಸೆದವರ ಮೇಲೆ ದಂಡ ಪ್ರಯೋಗ ಮಾಡ್ತಿದ್ರೂ ಕೂಡ ಸಿಟಿಮಂದಿ ರಸ್ತೆಬದಿಯಲ್ಲಿ ಕಸ ಹಾಕೋದಕ್ಕೆ ಬ್ರೇಕ್ ಹಾಕದಿರೋದು ಸಿಟಿಯಲ್ಲಿ ಕಸದ ಸಮಸ್ಯೆ ತಂದಿಟ್ಟಿದೆ. ಎಲ್ಲೆಂದರಲ್ಲಿ ಕಸುವವರ ಟಿವಿ ಸಂಖ್ಯೆ ಹೆಚ್ಚಾಗ್ತಿದ್ರೆ, ಇತ್ತ ಕಸ ವಿಲೇವಾರಿಯಲ್ಲೂ ಜಿಬಿಎ ನಿರ್ಲಕ್ಷ್ಯ ತೋರೋದು9 ರಿಯಾಲಿಟಿ ಚೆಕ್ ನಲ್ಲಿ ಬಯಲಾಗಿದೆ.

ಐಟಿಸಿಟಿ ಬೆಂಗಳೂರನ್ನ ಕಸ ಮುಕ್ತ ಮಾಡ್ತೀವೆ ಅಂತಾ ಹೊರಟಿರುವ ಜಿಬಿಎ ಹಾಗೂ ಘನತ್ಯಾಜ್ಯ ನಿಯಮಿತ, ಕಸ ಎಸೆಯೋರನ್ನ ಹುಡುಕಿ ಹುಡುಕಿ ಮನೆ ಬಳಿ ಕಸ ಸುರಿದು ದಂಡ ವಸೂಲಿ ಮಾಡ್ತಿದೆ. ಕಸ ಎಸೆಯುವವರನ್ನ ಪತ್ತೆಹಚ್ಚಿ ದಂಡಾಸ್ತ್ರ ಪ್ರಯೋಗ ಮಾಡುವ ಮೂಲಕ ಜಿಬಿಎ ಬಿಸಿ ಮುಟ್ಟಿಸೋಕೆ ಹೊರಟರೆ, ಇತ್ತ ರಾಜಧಾನಿಯ ರಸ್ತೆಗಳಲ್ಲಿ ಕಸ ಎಸೆಯುವ ಕೆಲಸಕ್ಕೆ ಬ್ರೇಕ್ ಬೀಳುತ್ತದೆ.

ಇದನ್ನೂ ಓದಿ: 218 ಮನೆಗಳ ಮುಂದೆ ಕಸ ಸುರಿದ ಜಿಬಿಎ! ಒಂದೇ ದಿನ 2.80 ಲಕ್ಷ ರೂ. ದಂಡ ವಸೂಲಿ

ವಿಲ್ಸನ್ ಗಾರ್ಡನ್, ವಿನಾಯಕ ನಗರ ಸುತ್ತಮುತ್ತ ನಿತ್ಯ ರಸ್ತೆಬದಿಯಲ್ಲಿ ರಾಶಿ ರಾಶಿ ಕಸ ಸಂಗ್ರಹ ಆಗ್ತಿದ್ರೆ, ಇತ್ತ ಕಸ ತೆರವು ಮಾಡೋಕೆ ಜಿಬಿಎ ನಿರ್ಲಕ್ಷ್ಯ ತೋರುತ್ತಿರೋದು ರಾಜಧಾನಿಯ ರಸ್ತೆಗಳಲ್ಲಿ ಕಸದ ರಾಶಿ ರಾರಾಜಿಸುವಂತೆ ಮಾಡಿದೆ.

ಎರಡ್ಮೂರು ದಿನಗಳಾದ್ರೂ ತೆರವಾಗದ ಕಸ: ಜನರು ಪರದಾಟ

ಈ ರಸ್ತೆಗಳಲ್ಲಿ ಕಸ ಹಾಕೋದು ಒಂದೆಡೆಯಾದರೆ ಕಸದರಾಶಿಯಲ್ಲಿರುವ ಅಳಿದುಳಿದ ಆಹಾರ ಪದಾರ್ಥಗಳು, ಕೊಳೆತ ತರಕಾರಿಗಳ ಬೀಡಾಡಿ ದನಗಳು ತಿನ್ನುತ್ತಿರೋದು ಹಸುಗಳ ಆರೋಗ್ಯಕ್ಕೂ ಕಂಟಕ ತಂದಿಡೋ ಸೂಚನೆ ನೀಡುತ್ತೆ. ರಸ್ತೆಬದಿ ಕಸದ ರಾಶಿ ಬಿದ್ದು ಎರಡ್ಮೂರು ದಿನಗಳಾದ್ರೂ ಕಸ ತೆರವು ಮಾಡದಿರೋದು ಅಕ್ಕಪಕ್ಕದ ಜನರಿಗೆ ಸಂಕಷ್ಟ ತಂದಿಟ್ಟಿದೆ.

ಕಸದ ವಾಸನೆಗೆ ಮೂಗು ಮುಚ್ಚಿಕೊಂಡೇ ಸ್ಥಿತಿ ನಿರ್ಮಾಣ ಆಗಿದ್ದರೆ, ಕಸ ಹಾಕೋರನ್ನ ತಡೆಯೋದಕ್ಕೆ ಜಿಬಿಎ, ಸರಿಯಾದ ಸಮಯಕ್ಕೆ ಕಸದ ವಾಹನ ಬರುತ್ತೆ ಅನ್ನೋದನ್ನ ನಿಗಾ ಇಡಲಿ ಅಂತಿರೋ ಸಿಟಿಮಂಡಿ, ಜನರು ಕೂಡ ಕಸ ಹಾಕೋ ಬದಲು ಕಸದ ವಾಹನಗಳ ವಿಳಂಬ, ಕಸ ವಿಲೇವಾರಿ ಸಮಸ್ಯೆ ಬಗ್ಗೆ ದೂರು ಕೊಡಿ ಅಂತಿದ್ದಾರೆ.

ಟಿವಿ9 ದೌಡಾಯಿಸುವಂತೆ ಕಸ ತೆರವು

ಸದ್ಯ ಬೆಂಗಳೂರಿನ ಹಲವೆಡೆ ಕಸ ಎಸೆಯುವವರನ್ನ ಜಿಬಿಎ ಕಡಿವಾಣ ಹಾಕೋಕೆ ಹೊರಟಿದ್ರೆ, ಇತ್ತ ರಸ್ತೆಬದಿಯಲ್ಲಿ ಕಸ ಹಾಕೋ ಕೆಲಸ ಕೂಡ ಮುಂದುವರಿದಿದೆ. ಸದ್ಯ ವಿನಾಯಕ ನಗರದ ರಸ್ತೆಯಲ್ಲಿನ ಕಸದ ಅವ್ಯವಸ್ಥೆಯ ಬಗ್ಗೆ ಟಿವಿ9 ಮಾಡೋಕೆ ತೆರಳಿದ ಬಳಿಕ ದಿಢೀರ್ ಅಂತಾ ಪ್ರತ್ಯಕ್ಷವಾದ ಜಿಬಿಎ ಸಿಬ್ಬಂದಿ ಎರಡು ದಿನಗಳಿಂದ ಬಿದ್ದಿದ್ದ ಕಸದ ತೆರವು ಮಾಡಿದ್ದಾರೆ.

ಇದನ್ನೂ ಓದಿ: ಎಲ್ಲೆಂದರಲ್ಲಿ ಕಸ ಹಾಕುತ್ತೀರಾ ಜೋಕೆ: ನಿಮ್ಮ ಮನೆ ಬಾಗಿಲಲ್ಲೇ ಸುರಿಯಬಹುದು ರಾಶಿ ರಾಶಿ ತ್ಯಾಜ್ಯ!

ಸದ್ಯ ಕಸ ಎಸೆದವರ ಮನೆ ಮುಂದೆ ಕಸ ಸುರಿದು ದಂಡ ಪೀಕುವ ಜಿಬಿಎ, ಯಾವ ಏರಿಯಾಗಳಲ್ಲಿ ಕಸ ನಿರ್ವಹಣೆ ಆಗ್ತಿಲ್ಲ, ಕಸದ ಆಟೋಗಳು ಸರಿಯಾಗಿ ಕಸ ಸಂಗ್ರಹ ಮಾಡುತ್ತಿವೆಯಾ ಅನ್ನೋದನ್ನ ಪರಿಶೀಲಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *