ಬೆಂಗಳೂರು: ನಕಲಿ ಉಂಗುರ ಇಟ್ಟು ಅಸಲಿ ಉಂಗುರ ಕಳ್ಳತನ; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಬೆಂಗಳೂರು: ನಕಲಿ ಉಂಗುರ ಇಟ್ಟು ಅಸಲಿ ಉಂಗುರ ಕಳ್ಳತನ; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ


ಬೆಂಗಳೂರು, ನವೆಂಬರ್ 28: ಬೆಂಗಳೂರಿನ ಗಣೇಶ್ ಗೋಲ್ಡ್ ಪ್ಯಾಲೆಸ್‌ನಲ್ಲಿ ಮಾಲೀಕನ ಗಮನ ಬೇರೆಡೆ ಸೆಳೆದು, ನಕಲಿ ಉಂಗುರ ಇಟ್ಟು ಅಸಲಿ ಚಿನ್ನದ ಉಂಗುರ ಕದ್ದ ಘಟನೆ ನಡೆದಿದೆ. 5 ನಕಲಿ ಉಂಗುರಗಳನ್ನು ಅಂಗಡಿಗೆ ತಂದ ಆರೋಪಿ, 2.30 ಲಕ್ಷ ರೂ.ಬೆಲೆ ಬಾಳುವ 22.37 ಗ್ರಾಂ ಉಂಗುರ ಹಾಗೂ 2 ಚಿನ್ನದ ಗಟ್ಟಿಯನ್ನು ಕದ್ದಿದ್ದಾನೆ. ತುಮಕೂರು ಮೂಲದ ಆರೋಪಿ ರಾಜೇಶನನ್ನು ಪತ್ತೆಭಾರತಿ ಪೊಲೀಸರು ಬಂಧಿಸಿದ್ದಾರೆ. ಕಳ್ಳತನವಾದ ಚಿನ್ನ ಮತ್ತು 2 ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಗಿದೆ. ಕಳ್ಳತನದ ದೃಶ್ಯ ಚಿನ್ನದಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *