
ಸಮೀಕ್ಷೆಯಡಿ ಎರಡು ನಗರಗಳ ಸಾಮಾನ್ಯ ಡೇಟ್ ನೈಟ್ಗಳ ಬೆಲೆಯನ್ನು ಹೋಲಿಸಲಾಗಿದೆ. ಡಿನ್ನರ್, ವೈನ್, ಕಾಫಿ, ಸಿನಿಮಾ ಟಿಕೆಟ್ಗಳು, ಸಾರಿಗೆ ಮತ್ತು ಜೀನ್ಸ್ ಸೇರಿದಂತೆ ಬಟ್ಟೆಗಳ ಶಾಪಿಂಗ್ ಎಲ್ಲವನ್ನು ಸೇರಿಸಿ ಇಲ್ಲಿ ಇದೆಲ್ಲದ್ದಕ್ಕೂ ಒಟ್ಟಾಗಿ ಜೋಡಿಗಳು 104 ಡಾಲರ್ ಹಣವನ್ನು(9,427 ರೂಪಾಯಿ) ವ್ಯಯ ಮಾಡಬೇಕಾಗಬಹುದು. ಪಾಶ್ಚಿಮಾತ್ಯ ನಗರಗಳಿಗೆ ಹೋಲಿಸಿದರೆ ಇದು ಅವರ ವೆಚ್ಚದ ಮೂರನೇ ಒಂದು ಭಾಗಕ್ಕಿಂತಲೂ ಕಡಿಮೆ. ಹೀಗಾಗಿ ಬೆಂಗಳೂರು ನಗರವನ್ನು ವಿಶ್ವದಲ್ಲೇ ಡೇಟಿಂಗ್ಗೆ ಅತ್ಯಂತ ಬಜೆಟ್ ಸ್ನೇಹಿ ಸ್ಥಳವನ್ನಾಗಿಸಿದೆ.