ಪತಿಯನ್ನು ಉಳಿಸಲು ಪತ್ನಿ ಅಂಗಲಾಚಿದರೂ ಜನ ಡಾಂಟ್ ಕೇರ್!
ಬೆಂಗಳೂರು, ಡಿಸೆಂಬರ್ 16: ನಡುರಸ್ತೆಯಲ್ಲಿ ಅಪಘಾತಗಳು ಸಂಭವಿಸಿದಾಗ ತುರ್ತು ಸಹಾಯ ನೀಡುವುದು ಮಾನವೀಯತೆ. ಆದರೆ ವಾಸ್ತವವಾಗಿ ಅಕ್ಷರಸ್ತರೇ ತುಂಬಿರುವ ಬೆಂಗಳೂರಿನಲ್ಲಿ (ಬೆಂಗಳೂರು) ರಸ್ತೆಯ ಮಧ್ಯೆ ಹೃದಯಾಘಾತದಿಂದ ವ್ಯಕ್ತಿಯೋರ್ವ ಅಸ್ವಸ್ಥನಾಗಿದ್ದರೂ, ಆತನ ಹೆಂಡತಿ ಅಂಗಲಾಚಿ ಬೇಡಿದರೂ ಜನರ ಕಲ್ಲು ಮನಸ್ಸು ಕರಗಲಿಲ್ಲ. ಪರಿಣಾಮ, ವ್ಯಕ್ತಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ.
ಪತ್ನಿ ಬೈಕ್‌ನಲ್ಲಿಯೇ ಆಸ್ಪತ್ರೆಗೆ ತೆರಳುತ್ತಿದ್ದ ವ್ಯಕ್ತಿ
ಇತ್ತೀಚೆಗೆ ಇಳಿವಯಸ್ಸಿನವರು ಹದಿಹರೆಯದವರೂ ಸಹ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ರಾಜ್ಯದಲ್ಲಿ ಕಿರಿ ವಯಸ್ಸಿನ ಕಾಯಿಲೆ ಇದೆ ಕಾರಣಕ್ಕೆ ಸಾವನ್ನಪ್ಪಿದ ಉದಾಹರಣಗಳಿವೆ. ಅದೇ ರೀತಿ ಇಟ್ಟುಮಡುವಿನ ಬಾಲಾಜಿನಗರ ನಿವಾಸಿ 34 ವರ್ಷದ ವೆಂಕಟರಮಣನ್ ಹೃದಯಘಾತದಿಂದ ಪ್ರದರ್ಶಿಸಿದ್ದಾರೆ. ಬುಧವಾರ ಬೆಳಗಿನ ಜಾವ ಸುಮಾರು 3.30 ರ ವೇಳೆಗೆ ಅವರಿಗೆ ಎದೆನೋವು ಸಂಭವಿಸಿದ ಕಾರಣ ಪತ್ನಿಯ ಬೈಕ್‌ನಲ್ಲಿಯೇ ಜಯದೇವ ಹೃದಯ ಆಸ್ಪತ್ರೆ ಕಡೆಗೆ ಹೊರಟಿದ್ದರು.ಮನೆಯಿಂದ ಕೇವಲ 100 ಮೀಟರ್ ದೂರದಲ್ಲಿ ವೆಂಕಟರಮಣನಿಗೆ ಲಘು ಹೃದಯಾಘಾತ ಸಂಭವಿಸಿದೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ವೆಂಕಟರಮಣನ್
ಚಲಿಸುತ್ತಿದ್ದ ಬೈಕ್‌ನಲ್ಲೇ ತೀವ್ರ ಹೃದಯಾಘಾತವಾದ ಕಾರಣ, ವೆಂಕಟರಮಣನ್ ರಸ್ತೆ ಮಧ್ಯೆ ಕುಸಿದುಬಿದ್ದಿದ್ದರು. ನೋವಿನಿಂದ ಒಡ್ಡುತ್ತಿದ್ದರೂ, ಸುತ್ತಮುತ್ತಲಿದ್ದ ಜನರು ನೆರವಿಗೆ ಬರಲಿಲ್ಲ. ಪತಿಯನ್ನು ಉಳಿಸಿಕೊಳ್ಳಲು ಪತ್ನಿ ಕೈಮುಗಿದು ಅಂಗಲಾಚಿದರೂ ಸಹಾಯಕ್ಕೆ ಯಾರೂ ಮುಂದಾಗಲಿಲ್ಲ. ಆಂಬ್ಯುಲೆನ್ಸ್ ಸಿಗದ ಹಿನ್ನೆಲೆ, ದಂಪತಿ ಬೈಕ್‌ನಲ್ಲೇ ಆಸ್ಪತ್ರೆಗೆ ತೆರಳಲು ಪ್ರಯತ್ನಿಸಿದ್ದಾರೆ. ಆದರೆ ಮಾರ್ಗಮಧ್ಯೆ ಕದೇರನಹಳ್ಳಿ ಸಮೀಪ ವೆಂಕಟರಮಣನ್ ಕೊನೆಯುಸಿರೆಳೆದಿದ್ದಾರೆ. ಈ ದುರ್ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದ ವೆಂಕಟರಮಣನ್ ಕುಟುಂಬಸ್ಥರು, ಅವರ ಎರಡೂ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.