ಬೆಂಗಳೂರು: ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ; RDX ಮೂಲಕ ಸ್ಫೋಟಿಸುವುದಾಗಿ ಇಮೇಲ್

ಬೆಂಗಳೂರು: ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ; RDX ಮೂಲಕ ಸ್ಫೋಟಿಸುವುದಾಗಿ ಇಮೇಲ್


ಬೆಂಗಳೂರು, ಜನವರಿ 09: ಇತ್ತೀಚೆಗಷ್ಟೇ ಕೋಲಾರ ಸೇರಿದಂತೆ ಮೈಸೂರು, ಬಾಗಲಕೋಟೆ, ಧಾರವಾಡ ಮತ್ತು ಗದಗ ಕೋರ್ಟ್‌ಗಳನ್ನು ಸ್ಫೋಟಿಸುವದಾಗಿ ಹುಸಿ ಬಾಂಬ್ ಬೆದರಿಕೆ (ಇಮೇಲ್ ಬಾಂಬ್ ಬೆದರಿಕೆಗಳು) ಬಂದಿತ್ತು. ಅಷ್ಟೇ ಅಲ್ಲದೆ ಲಾಲ್‌ಬಾಗ್ ರಸ್ತೆಯಲ್ಲಿರುವ ಪಾಸ್‌ಪೋರ್ಟ್ ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಇದೀಗ ಹೆಬ್ಬಾಳದ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಬಂದಿದೆ. 3 ಆರ್ಡಿಎಕ್ಸ್ (RDX) ಇಟ್ಟಿದ್ದಾಗಿ ವಿದ್ಯಾಲಯದ ಇ-ಮೇಲ್ ಐಡಿಗೆ ಕಿಡಿಗೇಡಿಗಳು ಸಂದೇಶ ರವಾನಿಸಿದ್ದಾರೆ.

ಪ್ರಾಂಶುಪಾಲರಿಂದ ಸದಾಶಿವನಗರ ಠಾಣೆಗೆ ದೂರು

ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬರುತ್ತಿದ್ದಂತೆ ಕಾಲೇಜಿನ ಪ್ರಾಂಶುಪಾಲ ಪಿ.ಎಂ.ಪ್ರಕಾಶ್ ಅವರು ಬೆಂಗಳೂರಿನ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆರ್ಡಿಎಕ್ಸ್ ಬಾಂಬ್ ಯಾವುದೂ ಇಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಅನ್ನೋದು ಮೇಲ್ನೋಟಕ್ಕೆ ಪತ್ತೆ ಆಗಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ 5ಕೋರ್ಟ್‌ಸ್ಫೋಡಿಸೋದಾಗಿ ಬೆದರಿಕೆ ಇಮೇಲ್

ಇತ್ತೀಚೆಗೆ ರಾಜ್ಯದ 5 ಕೋರ್ಟ್‌ಗಳಿಗೆ ಬಾಂಬ್ ಸ್ಫೋಟದ ಬೆದರಿಕೆ ಸಂದೇಶ ಬಂದಿತ್ತು. ಮೈಸೂರಿನ ಹಳೇ ಕೋರ್ಟ್‌ನ ಮಧ್ಯಾಹ್ನ 1.55ಕ್ಕೆ ಸ್ಫೋಟಿಸಿರುವುದಾಗಿ ಇ-ಮೇಲ್ ಬಂದಿತ್ತು. ತಕ್ಷಣ ಎಚ್ಚೆತ್ತ ನ್ಯಾಯಾಧೀಶರು, ವಕೀಲರು ಕೋರ್ಟ್ ಆವರಣದಿಂದ ಹೊರ ಬಂದಿದ್ದರು.

ಇದನ್ನೂ ಓದಿ: ಮೈಸೂರು, ಬಾಗಲಕೋಟೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ, ಪಾಸ್‌ಪೋರ್ಟ್ ಕಚೇರಿಗೂ ಬಂತು ಇ-ಮೇಲ್

ಇಷ್ಟೇ ಅಲ್ಲ ಧಾರವಾಡ, ಬಾಗಲಕೋ, ಗದಗ, ಜಿಲ್ಲಾ ನ್ಯಾಯಾಲಯ ಕೂಡ ಸ್ಫೋಟಿಸುವ ಬಗ್ಗೆ ಬೆದರಿಕೆ ಇಮೇಲ್ ಬಂದಿದ್ದವು. ತಪಾಸಣೆ ಮಾಡಿದರೂ ಒಂದೇ ಒಂದು ಸ್ಫೋಟದ ವಸ್ತುಗಳು ಸಿಕ್ಕಿಲ್ಲ.

ಇದನ್ನೂ ಓದಿ: ಗದಗ, ಮಂಗಳೂರು ಆಯ್ತು ಈಗ ಭಟ್ಕಳದ ತಹಶೀಲ್ದಾರ್ ಕಚೇರಿಗೂ ಬಾಂಬ್ ಬೆದರಿಕೆ!

ಇನ್ನು ಬೆಂಗಳೂರಿನ ಕೋರಮಂಗಲದ ಪಾಸ್‌ಪೋರ್ಟ್ ಕಚೇರಿಯನ್ನು ಸ್ಫೋಟಿಸುವುದಾಗಿ ಇತ್ತೀಚೆಗೆ ಇಮೇಲ್‌ನಲ್ಲಿ ಬೆದರಿಕೆ ಸಂದೇಶ ಬಂದಿತ್ತು. ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ತಂಡಗಳ ಕಚೇರಿಯಲ್ಲಿ ಪರಿಶೀಲಿಸಲಾಯಿತು. ಆದರೆ ಶಂಕಾಸ್ಪದ ಹಾಗೂ ಸ್ಪೋಟಕ ವಸ್ತುಗಳು ಇರಲಿಲ್ಲ. ಇಲ್ಲ, ಇವು ಹುಸಿ ಬೆದರಿಕೆ ಇಮೇಲ್ ಅಂತಾ ಪೊಲೀಸರು ತೀರ್ಮಾನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *