Headlines

ಬೆಂಗಳೂರಿನಲ್ಲಿ ವಿನಾ ಕಾರಣ ಬೈಕ್ ತಡೆದು ಹಣ ವಸೂಲಿ: ಮೂವರು ಪೊಲೀಸರು ಸಸ್ಪೆಂಡ್

ಬೆಂಗಳೂರಿನಲ್ಲಿ ವಿನಾ ಕಾರಣ ಬೈಕ್ ತಡೆದು ಹಣ ವಸೂಲಿ:  ಮೂವರು ಪೊಲೀಸರು ಸಸ್ಪೆಂಡ್


ಬೆಂಗಳೂರಿನಲ್ಲಿ ವಿನಾ ಕಾರಣ ಬೈಕ್ ತಡೆದು ಹಣ ವಸೂಲಿ: ಮೂವರು ಪೊಲೀಸರು ಸಸ್ಪೆಂಡ್

ಬೆಂಗಳೂರು, (ಮಾರ್ಚ್ 30): ಸ್ಮಾರ್ಟ್ ಟ್ರಾಫಿಕ್ ನಿರ್ವಹಣಾ ವ್ಯವಸ್ಥೆ ಜಾರಿಗೆ ಕಾನೂನು ಸುವ್ಯವಸ್ಥೆ ಹಾಗೂ ಮೇಲ್ವಿಚಾರಣೆಯ ದೃಷ್ಟಿಯಿಂದ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಬಾಡಿ ಕ್ಯಾಮೆರಾ (ದೇಹ ಧರಿಸಿರುವ ಕ್ಯಾಮರಾ) ಕಡ್ಡಾಯವಾಗಿದೆ. ಆದರೆ, ಬೆಂಗಳೂರಿನ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯ (ಬೆಂಗಳೂರು ಹೈ ಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣೆ) ಮೂವರು ಸಿಬ್ಬಂದಿ ಬಾಡಿ ಕ್ಯಾಮೆರಾವನ್ನು ಅಳವಡಿಸಿಕೊಂಡ ವಿನಾ ಕಾರಣ ಬೈಕ್ ನಿಲ್ಲಿಸಿ ಹಣ ವಸೂಲಿ ಮಾಡಿದ ಆರೋಪ ಕೇಳಿಬಂದಿದ್ದು, ಇದೀಗ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಹೈ ಗ್ರೌಂಡ್ ಸಂಚಾರಿ ಸುರೇಶ್ ಪೊಲೀಸ್ ಠಾಣೆಯ ಎಸ್ ಎಸ್ ಐ ,ಕಾನ್ಸ್ ಟೇಬಲ್ ಗಳಾದ ಪ್ರಶಾಂತ್ ಹಾಗೂ ಸಾದಿಕ್ ಅವರನ್ನ ಸಸ್ಪೆಂಡ್ ಮಾಡಿ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?

ಹೈ ಗ್ರೌಂಡ್ ಸಂಚಾರ ಠಾಣಾ ಕರ್ತವ್ಯ ನಿರ್ವಹಿಸುವ ವೇಳೆ ಲಂಚ ಪಡೆದ ಆರೋಪ, ಕರ್ತವ್ಯ ಲೋಪ , ಬಾಡಿ ವಾರ್ನ್ ಕ್ಯಾಮೆರಾ ಆಪ್ ಮಾಡಿ ಕೆಲಸ ನಿರ್ವಹಣೆ ಹಾಗೂ ವಿನಾ ಕಾರಣ ಬೈಕ್ ತಡೆದು ಹಣ ವಸೂಲಿ ಮಾಡಿದ ಆರೋಪ. ಹೀಗೆ ಹಲವು ಆರೋಪಗಳು ಕೇಳಿಬಂದಿದ್ದವು.

ವಾಹನಗಳನ್ನು ತಡೆದು ಹಣ ವಸೂಲಿ ಮಾಡುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ ಇಲಾಖೆಯು ಆಂತರಿಕ ತನಿಖೆ ನಡೆಸಿತ್ತು. ತನಿಖೆಯ ವೇಳೆ ಈ ಮೂವರು ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರುವುದು ಮತ್ತು ಲಂಚ ಪಡೆದಿರುವುದು ಸಾಬೀತಾಗಿದೆ. ಈ ಶಿಸ್ತು ಕ್ರಮವಾಗಿ ಮೂವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಪಶ್ಚಿಮ ವಿಭಾಗ ಸಂಚಾರಿ ಡಿಸಿಪಿ ಅನೂಪ್ ಶೆಟ್ಟಿ ಇಂದು (ಮಾರ್ಚ್ 30) ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಪೊಲೀಸ್ ಇನ್ಸ್‌ಪೆಕ್ಟರ್‌ನಿಂದ ಲೇಡಿ ರೌಡಿಶೀಟರ್‌ಗೆ ಕಿರುಕುಳ: ಚಿನ್ನ, ಮುದ್ದು, ಬಂಗಾರ ಎಂದವನಿಂದಲೇ ಕೊಲೆ ಬೆದರಿಕೆ!

ಪೊಲೀಸರಿಗೆ ಬಾಡಿ ಕ್ಯಾಮೆರಾ ಕಡ್ಡಾಯ

ಬಾಡಿ ಕ್ಯಾಮರಾ ಅಳವಡಿಸಿಕೊಳ್ಳುವುದರಿಂದ ಪೊಲೀಸ್ ಸಿಬ್ಬಂದಿ ಎಸಗುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಸಿಬ್ಬಂದಿ ಕಾರ್ಯವೈಖರಿಯನ್ನು ಸಂಬಂಧಪಟ್ಟ ಠಾಣೆಗಳಿಂದಲೇ ಗಮನಿಸಬಹುದು. ಇದಲ್ಲದೆ, ಬಾಡಿ ಕ್ಯಾಮರಾ ಧರಿಸುವುದರಿಂದ ಪೊಲೀಸರ ಮೇಲೆ ಹಲ್ಲೆ ನಡೆಸುವವರಿಗೆ ಭಯ ಹುಟ್ಟುವುದರ ಜೊತೆಗೆ, ಪೊಲೀಸರಿಗೂ ರಕ್ಷಣೆ ಸಿಕ್ಕಂತಾಗುತ್ತದೆ. ಹೀಗಾಗಿ ಸರ್ಕಾರ ಬಾಡಿ ಕ್ಯಾಮೆರಾ ಖರೀದಿಸಿ ಪೊಲೀಸರಿಗೆ ಕಡ್ಡಾಯವಾಗಿ ಧರಿಸುವಂತೆ ಸೂಚಿಸಿದೆ.ಆದ್ರೆ ಕೆಲವರು ಬಾಡಿ ಕ್ಯಾಮೆರಾವನ್ನು ಕಳ್ಳತನದಿಂದ ತೊಡಿಸಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

3 ವರ್ಷಗಳಲ್ಲಿ 666 ಪೊಲೀಸರು ಸಸ್ಪೆಂಡ್

ಕರ್ತವ್ಯ ಲೋಪ, ನಿರ್ಲಕ್ಷ್ಯ, ದುರ್ನಡತೆ, ಸಂತ್ರಸ್ತರಿಂದ ಹಣ ಪಡೆದಿರುವುದು ಸೇರಿದಂತೆ ವಿವಿಧ ಅಪರಾಧವೆಸಗಿದ ಆರೋಪದಡಿ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 666 ಮಂದಿ ಪೊಲೀಸರು ಅಮಾನತುಗೊಂಡಿದ್ದಾರೆ. 2023ರಲ್ಲಿ 188, 2024ರಲ್ಲಿ 242 ಹಾಗೂ 2025ರಲ್ಲಿ 236 ಮಂದಿ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಬೆದರಿಕೆ, ಹಲ್ಲೆ, ಆರೋಪ ಸೇರಿದಂತೆ ವಿವಿಧ ಅಪರಾಧಗಳಲ್ಲಿ ಸಿಲುಕಿದ್ದ ಪೊಲೀಸ್ ಸಿಬ್ಬಂದಿ ವಿರುದ್ಧ 88 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ನೀಡಿದ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *