ಬೆಂಗಳೂರಿನಲ್ಲಿ ಮನೆ ಖರೀದಿಸುವಾಗ (ಬೆಂಗಳೂರು ಮನೆ ಖರೀದಿ) ಸ್ವಲ್ಪ ಯೋಚನೆ ಮಾಡುವುದು ಸಹಜ, ಒಂದಿಷ್ಟು ಜನ ಪರಿಚಯದ ವ್ಯಕ್ತಿಗಳ ಸಲಹೆಗಳನ್ನು ಪಡೆಯಲು ಮುಂದುವರಿಯುತ್ತಾರೆ. ಹೊಸ ಆಸ್ತಿ ಖರೀದಿ ಮಾಡುವಾಗ ನಾಲ್ಕು ಜನರಲ್ಲಿ ಕೇಳಬೇಕು ಎನ್ನುವ ಮಾತಿದೆ. ಆದರೆ ಇಲ್ಲೊಬ್ಬರು, ಬೆಂಗಳೂರಿನಲ್ಲಿ ಆಸ್ತಿ ಖರೀದಿ ಮಾಡುವ ಬಗ್ಗೆ ರೆಡ್ಡಿಟ್‌ನಲ್ಲಿ ಸಲಹೆ ಕೇಳಿದ್ದಾರೆ. ಇದಕ್ಕೆ ನೆಟ್ಟಿಗರು ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ವೃತ್ತಿಪರ ವ್ಯಕ್ತಿ, ಬೆಂಗಳೂರಿನಲ್ಲಿ 2.2 ಕೋಟಿ ರೂ. ಮೌಲ್ಯದ ಮನೆ ಖರೀದಿಸಲು ಮುಂದಾಗಿದ್ದಾರೆ. ತಿಂಗಳಿಗೆ 3.2 ಲಕ್ಷ ಸಂಬಳ ಬರುತ್ತದೆ. 70 ಲಕ್ಷದವರೆಗೆ ಡೌನ್ ಪೇಮೆಂಟ್ ಮಾಡಲು ಸಿದ್ಧವಿದ್ದರೂ, ಬೆಂಗಳೂರಿನಲ್ಲಿ ಇಷ್ಟು ದೊಡ್ಡ ಮಟ್ಟದ ಆಸ್ತಿಯನ್ನು ಖರೀದಿಸಲು ನಂಬಿಕೆ ಬರುತ್ತಿಲ್ಲ, ಇದಕ್ಕೆ ಏನು ಮಾಡಬೇಕು ಎಂದು ಸಾರ್ವಜನಿಕರ ಸಲಹೆ ಕೇಳಿದ್ದಾರೆ.
2.2 ಕೋಟಿ ರೂ. ಮೌಲ್ಯದ ಮನೆ ಖರೀದಿ ಮಾಡಿದರೂ, ಅದಕ್ಕೆ ಸ್ವಲ್ಪ ಬ್ಯಾಂಕ್‌ನಿಂದ ಸಾಲ ಪಡೆಯಲೇಬೇಕು. ಅದಕ್ಕಾಗಿ ಸಂಬಳ, ಇತರ ಖರ್ಚಿನ ಜೊತೆಗೆ ಇಎಂಐಯನ್ನು ಹೊಂದಿಸಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆ ಮೂಡಿದೆ. ಇದಕ್ಕೂ ಮೊದಲು ಯಾವುದೇ ಇಎಂಐಯನ್ನು ಕಟ್ಟಿದ ಅನುಭವ ಇಲ್ಲದ ಕಾರಣ, ಈ ಬಗ್ಗೆಯೂ ಸಲಹೆ ಕೇಳಿದ್ದಾರೆ. ರೆಡ್ಡಿಯಲ್ಲಿ ಹೀಗೆ ಹಂಚಿಕೊಂಡಿದ್ದಾರೆ. ” ಉತ್ತರ ಬೆಂಗಳೂರಿನಲ್ಲಿ G+2 (G-1bhk & ಪಾರ್ಕಿಂಗ್, 1 ನೇ ಮತ್ತು 2 ನೇ ಮಹಡಿ – 3bhk) ಹೊಂದಿರುವ ಸ್ವತಂತ್ರ ಮನೆಯನ್ನು ಖರೀದಿಸಲು ನಾನು ಯೋಚಿಸಿದೆ. 3.2 ಲಕ್ಷ ರೂಪಾಯಿಯಷ್ಟು. ನಾನು 70 ಲಕ್ಷ ರೂಪಾಯಿಗಳನ್ನು ಪಾವತಿಸುತ್ತೇನೆ ಇಎಂಐ ಪಡೆಯಲು ಸುಲಭವಾಗುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: “ಇದು ಕಾರು, ವಿಮಾನವಲ್ಲ”: ನೀವು ಬರುತ್ತಿದ್ದೀರಾ? ಎಂದು ಕೇಳಿದ್ದಕ್ಕೆ ಪ್ರಯಾಣಿಕನ ಮೇಲೆ ಸಿಟ್ಟಾದ ಚಾಲಕ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:

ಆದರೆ ಇದನ್ನು ಖರೀದಿಸಲು ಯಾಕೆ ಯೋಚನೆ ಮಾಡುತ್ತಿದ್ದೇನೆ ಎಂದರೆ, ನನಗೆ ಈ ವಿಷಯದ ಬಗ್ಗೆ ಯಾವುದೇ ಸ್ಪಷ್ಟವಾದ ಮಾಹಿತಿ ಇಲ್ಲ. ಹಾಗಾಗಿ ನಾನು ಸ್ವಲ್ಪ ಆತಂಕಗೊಂಡಿದ್ದೇನೆ. ಮತ್ತೊಂದೆಡೆ, ನನಗೆ ನನ್ನ ಸ್ವಂತ ಮನೆಯ ಅವಶ್ಯಕತೆಯಿದೆ. ಹೀಗಾಗಿ ಆಸ್ತಿಯನ್ನು ಖರೀದಿಸಬಹುದೇ ಎಂದು ನೆಟ್ಟಿಗರ ಬಳಿ ಕೇಳಿದ್ದಾರೆ. ಈ ಬಗ್ಗೆ ಕೆಲವರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಇಲ್ಲ, ನೀವು ಮನೆಯನ್ನು ಖರೀದಿಸಬಾರದು. ದಯವಿಟ್ಟು ನನಗೆ ವಿವರಗಳನ್ನು ಕಳುಹಿಸಿ ಇದರಿಂದ ನಾನು ಮನೆ ಖರೀದಿಯನ್ನು ಮುಂದುವರಿಸಬಹುದು ಎಂದು ಹೇಳಿದರು. ಇದು 30X40 ಅಥವಾ 20X30 ಪ್ಲಾಟ್ ಆಗಿದೆಯೇ? ಮನೆ ಖರೀದಿಸಲು ಬೆಲೆ ಸರಿಯಾಗಿದೆ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ನಿಮ್ಮ ಸಂಬಳ vs ಬಾಡಿಗೆ vs ಇಎಂಐಗಳು ಸಹ ನಿಭಾಯಿಸಲು ಸೂಕ್ತವಾಗಿದೆ. ಒಂದು ಅಪಾರ್ಟ್‌ಮೆಂಟ್‌ಗೆ 1.5 ಕೋಟಿ ರೂ. ಖರ್ಚು ಮಾಡುವ ಬದಲು, ಇದು ಹೆಚ್ಚು ಆರ್ಥಿಕ ಲಾಭವನ್ನು ನೀಡುತ್ತದೆ. ಇದು ನೋಡಲು ತುಂಬಾ ಚೆನ್ನಾಗಿದೆ. ಆದರೆ ಒಂದು ಬಾರಿ ಇದರ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ಮುಂದುವರಿಯುವುದು ಉತ್ತಮ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ಅಪಾರ್ಟ್ಮೆಂಟ್ಗೆ 1.5 ಕೋಟಿ ಖರ್ಚು ಮಾಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ