ಬೆಂಗಳೂರಿನಲ್ಲಿ ಪತ್ನಿ ಕಾವ್ಯಾಳನ್ನು ಕೊಲೆ ಮಾಡಿದ ಆರೋಪದ ಮೇಲೆ ಪತಿ ದನಿಯಪ್ಪನನ್ನು ಬಂಧಿಸಲಾಗಿದೆ. ರಾಜಕೀಯ ಪ್ರವೇಶಿಸಲು ಬೆಂಗಳೂರಿನ ಆಸ್ತಿ ಮಾರಾಟ ಮಾಡಲು ದನಿಯಪ್ಪ ಮುಂದಾಗಿದ್ದು, ಇದಕ್ಕೆ ಪತ್ನಿ ಒಪ್ಪದ ಕಾರಣ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ.

ಬೆಂಗಳೂರಿನ ಮಹಿಳೆಯ ಸಾವಿನ ಸಂಬಂಧ ಆಕೆಯ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ಕಾವ್ಯಾ ಕೊಲೆಯಾದ ಮಹಿಳೆ. ಬೆಳಗಾವಿ ಮೂಲದ ದನಿಯಪ್ಪನಿಗೆ ರಾಜಕೀಯದಲ್ಲಿ ಗುರುತಿಸಿಕೊಳ್ಳುವ ಆಸೆ ಇತ್ತು. ಆದ್ರೆ ದನಿಯಪ್ಪನ ಕನಸಿಗೆ ಕಾವ್ಯಾ ಆಡ್ಡಿಯಾಗಿದ್ದರು. ಇದೇ ಕಾರಣಕ್ಕೆ ಕಾವ್ಯಾ ಕೊ*ಲೆಯಾಗಿರುವ ಅನುಮಾನಗಳು ವ್ಯಕ್ತವಾಗಿವೆ.

ಬೆಳಗಾವಿ ಜಿಲ್ಲೆಯ ಅಥಣಿಯ ನಿವಾಸಿಯಾಗಿರುವ ದನಿಯಪ್ಪ ಬೆಂಗಳೂರಿನಲ್ಲಿ ವಾಸವಾಗಿದ್ದನು. ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ವ್ಯವಹಾರ (Construction Business) ಮಾಡಿಕೊಂಡಿದ್ದ, ಧನಿಯಪ್ಪ ಒಂದಿಷ್ಟು ಹಣ ಮಾಡಿಕೊಂಡಿದ್ದನು. ಬೆಂಗಳೂರಿನ ಪೀಣ್ಯಾದಲ್ಲಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಕಟ್ಟಿಕೊಂಡಿದ್ದನು. ಆದ್ರೆ ಈ ಮನೆ ಪತ್ನಿ ಕಾವ್ಯಾ ಹೆಸರಿನಲ್ಲಿತ್ತು. ಇನ್ನುಳಿದ ಆಸ್ತಿ ತಾಯಿ ಹೆಸರಿನಲ್ಲಿತ್ತು.

ಬೆಂಗಳೂರಿನಲ್ಲಿರುವ ಎಲ್ಲಾ ಆಸ್ತಿಯನ್ನು ಮಾರಾಟ ಮಾಡಿ ಸ್ವಂತ ಊರಿಗೆ ತೆರಳಿ ರಾಜಕೀಯದಲ್ಲಿ ಬದುಕು ಕಟ್ಟಿಕೊಳ್ಳಲು ಧನಿಯಪ್ಪ ಪ್ಲಾನ್ ಮಾಡಿದ್ದನು. ಬೆಂಗಳೂರಿನ ಮನೆ ಮಾರಾಟ ಮಾಡಲು ಕಾವ್ಯಾ ಒಪ್ಪಿರಲಿಲ್ಲ. ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸಿಸುವ ಇಂಗಿತ ವ್ಯಕ್ತಪಡಿಸಿದ್ದರು.

ಕಾವ್ಯಾ ಕೊ*ಲೆಗೂ ಮುನ್ನ ಅಥಣಿಯಲ್ಲಿ ಊರಿನ ಎಲ್ಲಾ ಜನರಿಗೆ ಭರ್ಜರಿಯಾಗಿ ಬಾಡೂಟ ಹಾಕಿಸಿ, ಸೋಮವಾರ ಬೆಂಗಳೂರಿಗೆ ಬಂದಿದ್ದನು. ಬಾಡೂಟದ ಮೂಲಕ ರಾಜಕೀಯದಲ್ಲಿ ಕಾಣಿಸಿಕೊಳ್ಳಲು ಧನಿಯಪ್ಪ ಮೊದಲ ಹೆಜ್ಜೆಯನ್ನಿಟ್ಟಿದ್ದನು.

ಇದನ್ನೂ ಓದಿ: ಪಂಚಮಸಾಲಿ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಬೆಂಗಳೂರು ಮಹಿಳೆಯಿಂದ ಲೈಂಗಿಕ ಕಿರುಕುಳ ಆರೋಪ, ಮಹಿಳಾ ಆಯೋಗಕ್ಕೆ ದೂರು

ಗಂಡ ಬರುತ್ತಿದ್ದಂತೆ ಬೆಂಗಳೂರು ಬಿಟ್ಟು ಹೋಗೋದು ಬೇಡ. ಆಸ್ತಿ ಮಾರಾಟ ಮಾಡಲು ಬಿಡುವುದಿಲ್ಲ ಎಂದು ಕಾವ್ಯಾ ಹೇಳಿದ್ದಾರೆ. ಮಕ್ಕಳು ಶಾಲೆಗೆ ಹೋದ ಬಳಿಕ ಗಲಾಟೆ ತೆಗೆದು ಪತ್ನಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿದ್ದಾನೆ. ಈ ಪ್ರಕರಣ ಸಂಬಂಧ ಧನಿಯಪ್ಪನನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: Bengaluru: ಹ್ಯಾಂಡ್‌ಸಮ್ ಹುಡುಗ ಅಂತ ಪರಿಚಯ ಮಾಡಿಕೊಳ್ಳುವ ಮುನ್ನ ಈ ಸುದ್ದಿ ಓದಿ!

Source link
Bengaluru: ಪತ್ನಿಯನ್ನು ಕೊಲ್ಲುವ ಮೊದಲು ಊರಿಗೆ ಬಂದು ಬಾಡೂಟ ಹಾಕಿಸಿದ ಗಂಡ!