
ಬೆಂಗಳೂರು, ಏಪ್ರಿಲ್ 02: ಹಣಕಾಸಿನ ವಿಚಾರಕ್ಕೆ ಪತ್ನಿ ಮತ್ತು ಗಂಡನ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಬೆಂಗಳೂರು) ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್ಲಿ ನಡೆದಿದೆ. ಕಾವ್ಯಾ (34) ಮೃತಳಾಗಿದ್ದರೆ, ಹೆಂಡ್ತಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಪತಿ ದರಿಯಪ್ಪ ಎಂಬಾತ ಹತ್ಯೆ ಮಾಡಿದ್ದಾನೆ. ಹಣಕಾಸಿನ ವಿಚಾರಕ್ಕೆ ದಂಪತಿ ನಡುವೆ ಒಂದು ವಾರದಿಂದ ಗಲಾಟೆ ನಡೆಯುತ್ತಿತ್ತು. ನಿನ್ನೆ ಎರಡು ಲಕ್ಷ ಹಣವನ್ನು ಮನೆಗೆ ತಂದು ಗಂಡ ದರಿಯಪ್ಪಿಟ್ಟಿದ್ದ. ಆ ಹಣವನ್ನು ತನ್ನ ಅಣ್ಣನಿಗೆ ಕೊಡೋದಾಗಿ ಪತ್ನಿ ಗಲಾಟೆ ಮಾಡಿದ್ದು, ಇದೇ ವಿಚಾರಕ್ಕೆ ಕೊಲೆ ನಡೆದಿದೆ.
ಬೆಳಗಾಂ ಮೂಲದವರಾದ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಸದಾ ಆಸ್ತಿ ಮತ್ತು ಹಣಕಾಸಿನ ವಿಚಾರಕ್ಕೆ ಗಲಾಟೆ ಮಾಡಿಕೊಳ್ಳುತ್ತಾರೆ. ದರಿಯಪ್ಪ ಬಾಡಿಗೆಗೆ ಕೆಲಸ ಮಾಡ್ತಿದ್ದ ಘಟನಾ ಸ್ಥಳಕ್ಕೆ ಪೀಣ್ಯ ಪೊಲೀಸ್ ಭೇಟಿ ನೀಡಿ, ಪರಿಶೀಲನೆ. ಈ ನಡುವೆ ದರಿಯಪ್ಪ ಸ್ನೇಹಿತ ವೆಂಕಟಾಚಲಯ್ಯ ಸ್ಫೋಟಕ ಆರೋಪ ಮಾಡಿದ್ದು, ಆತನಿಗೆ ಹುಡುಗಿಯರ ಶೋಕಿ ವಿಪರೀತವಾಗಿತ್ತು. ಬೇರೆ ಹೆಣ್ಣುಮಕ್ಕಳ ಜೊತೆ ಇರುವ ಫೋಟೊವನ್ನ ತನ್ನ ಹೆಂಡತಿಗೇ ತೋರಿಸುತ್ತಿದ್ದ. ಅಧ್ಯಯನ ಕಾವ್ಯ ಸಾಕಷ್ಟು ನೊಂದಿದ್ದರು. ಇದೇ ವಿಚಾರವಾಗಿ ನಾನು ಹಲವು ಬಾರಿ ರಾಜಿ ಮಾಡಿದ್ದೆ. ನಂತರ ಇತ್ತೀಚೆಗೆ ಮನೆ ಖಾಲಿ ಮಾಡಿ ಇಲ್ಲಿಗೆ ಬಂದು, ನಮ್ಮ ಸಂಪರ್ಕ ತಪ್ಪಿಸಿದ್ದ ಎಂದು.
ಇದನ್ನೂ ಓದಿ: ಪ್ರಾಧ್ಯಾಪಕರೊಂದಿಗೆ ಸಂಬಂಧ ಕಲ್ಪಿಸಿ ಅಪಪ್ರಚಾರ; ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಡೆತ್ ನೋಟ್ ನಲ್ಲಿ ಸ್ಫೋಟಕ ಮಾಹಿತಿ
ವಿದ್ಯುತ್ ಶಾಕ್ ತಗುಲಿ ಮಹಿಳೆ ದುರ್ಮರಣ
ಮನೆಯಲ್ಲಿ ನೀರು ಕಾಯಿಸುವಾಗ ವಿದ್ಯುತ್ ಸ್ಪರ್ಶಿಸಿ ಗೃಹಿಣಿಯೋರ್ವಳು ದಾರುಣವಾಗಿ ಆಸ್ಪತ್ರೆಯ ಘಟನೆ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ನಿವೇದಿತಾ ನಾಯ್ಕರ್(24) ಮೃತರಾಗಿದ್ದು, ಕ್ವಾಯ್ಲ್ನಲ್ಲಿ ಬಕೆಟ್ ಕಾಯಿಸಲು ಇಟ್ಟ ನೀರಿನ ಬಕೆಟ್ ಆಕಸ್ಮಿಕವಾಗಿ ಮುಟ್ಟಿದ ಕಾರಣ ವಿದ್ಯುತ್ ಶಾಕ್ ತಗುಲು ಪ್ರಾಣ ಬಿಟ್ಟಿದ್ದಾರೆ, ಗ್ರಾಮೀಣ ಧಾರವಾಡ ಪೊಲೀಸ್ ಠಾಣೆ ಠಾಣಾ ಘಟನೆ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.