ಮಾಲೀಕ ಶೌಚಾಲಯಕ್ಕೆ ಹೋಗಿ ಬರುವುದರೊಳಗೆ ಬಂಗಾರದ ಅಂಗಡಿ ಕದ್ದ ಖದೀಮರು; ಹಾಡಹಗಲೇ ಕೃತ್ಯ

ಮಾಲೀಕ ಶೌಚಾಲಯಕ್ಕೆ ಹೋಗಿ ಬರುವುದರೊಳಗೆ ಬಂಗಾರದ ಅಂಗಡಿ ಕದ್ದ ಖದೀಮರು; ಹಾಡಹಗಲೇ ಕೃತ್ಯ


ಬೆಂಗಳೂರು, ಏಪ್ರಿಲ್ 17: ರಾಜ್ಯದಲ್ಲಿ ಜ್ಯುವೆಲರಿ ಶಾಪ್‌ಗಳ ದರೋಡೆ ಪ್ರಕರಣ ಮುಂದುವರಿದಿದ್ದು, ಬೆಂಗಳೂರಿನಲ್ಲಿ (ಬೆಂಗಳೂರು) ಹಾಡ ಹಗಲೇ ಬಂಗಾರದ ಅಂಗಡಿಯನ್ನು ಖದೀಮರು ದೋಚಿರುವ ಘಟನೆ ನಡೆದಿದೆ. ಅಂಗಡಿಯ ಮಾಲೀಕ ಶೌಚಾಲಯಕ್ಕೆ ಹೋಗಿ ಬರುವ ಒಳಗೆ ಖದೀಮರು ಕನ್ನ ಹಾಕಿದ್ದು, ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಸೇರಿಸಿ ದೋಚಿ ಎಸ್ಕೇಪ್ ಆಗಿದ್ದಾರೆ. ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ, ಈ ಬಗ್ಗೆ ದೂರು ದಾಖಲಾಗಿದೆ. ಪ್ರಕರಣದ ಬೆನ್ನುಹತ್ತಿರುವ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಬನಶಂಕರಿಯ ಬಂಗಾರದ ಅಂಗಡಿಯೊಂದರ ಮಾಲಕರ ಮೂಕಾಂಬಿಕಾ ನಗರದ ನಿವಾಸಿ ಎನ್. ಮಂಜುನಾಥ್ (52) ಹತ್ತಿರದ ಅಂಗನವಾಡಿಯ ಶೌಚಾಲಯಕ್ಕೆ ತೆರಳಿದ್ದರು. ಸುಮಾರು 3.22 ಮಧ್ಯಾಹ್ನದ ಅಂಗಡಿಯನ್ನು ತೆರೆದಿಟ್ಟು ಹೊರಗೆ ಹೋಗಿದ್ದ ಅವರು 3.25ಕ್ಕೆ ಅಂದರೆ ಕೇವಲ 3 ನಿಮಿಷಗಳು ಒಳಗೆ ಹಿಂದಿರುಗಿದ್ದಾರೆ. ಆದರೆ ಅಷ್ಟರೊಳಗಾಗಿಯೇ ಖದೀಮರು ಅಂಗಡಿಗೆ ನುಗ್ಗಿದ್ದು ಬೆಲೆ ಬಾಳುವ ಆಭರಣ ಸೇರಿ, ಹಣವನ್ನು ದೋಚಿದ್ದಾರೆ. ಮಂಜುನಾಥ್ ಅವರು ಹಿಂದಿರುಗುವ ವೇಳೆ ಅಪರಿಚಿತ ವ್ಯಕ್ತಿ ಅಂಗಡಿಗೆ ನುಗ್ಗಿ ಪ್ರದರ್ಶನಕ್ಕೆ ಇಡಲಾಗಿದ್ದ ಆಭರಣ ದೋಚುತ್ತಿರುವುದನ್ನು ಗಮನಿಸಿದ್ದಾರೆ. ಇದನ್ನು ನೋಡಿದ ಖದೀಮ ಕೂಡಲೇ ಅಂಗಡಿಯಿಂದ ಕಾಲ್ಕಿತ್ತಿದ್ದು, ಅದಾಗಲೇ ಬೈಕ್ ನಲ್ಲಿ ಕಾಯುತ್ತಿದ್ದ ಇಬ್ಬರು ಸಹಚರರ ಜೊತೆ ಎಸ್ಕೇಪ್ ಆಗಿದ್ದಾನೆ. ಮಂಜುನಾಥ್ ಅವರು ಆರೋಪಿಗಳನ್ನು ಹಿಡಿಯಲು ಯತ್ನಿಸಿದ್ದರಾದರೂ ಸಾಧ್ಯವಾಗಲಿಲ್ಲ.

ಇದನ್ನೂ ಓದಿ: KSCA ಸದಸ್ಯನಿಂದಲೇ IPL ಬ್ಲಾಕ್ ಟಿಕೆಟ್ ದಂಧೆ! ಚಿನ್ನಸ್ವಾಮಿ ಸ್ಟೇಡಿಯಂ ಹೋಟೆಲ್ ಕ್ಯಾಪ್ಟನ್ ಜೊತೆ ಸೇರಿ ಕೃತ್ಯ

ಇನ್ನು ಕಳ್ಳತನವಾಗಿರುವ ವಸ್ತುಗಳಲ್ಲಿ ಸುಮಾರು 50 ಗ್ರಾಂ ತೂಕದ ಎರಡು ಪ್ಯಾಕೆಟ್ ಬೆಳ್ಳಿ ಸರಗಳು, 10 ಗ್ರಾಂ ತೂಕದ ಮೂರು ಚಿನ್ನದ ಮೂಗುತಿಗಳು ಮತ್ತು 3,000 ನಗದು. ಇವುಗಳ ಒಟ್ಟು ಮೊತ್ತ ಸುಮಾರು 1.8 ಲಕ್ಷ ರೂಪಾಯಿಗಳು ಎಂದು ಅಂದಾಜಿಸ, ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಏ.13 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಬಿಎನ್‌ಎಸ್ ಸೆಕ್ಷನ್ 305 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಮೂವರು ಆರೋಪಿಗಳ ಬಗ್ಗೆ ಸುಳಿವು ಪತ್ತೆಮಾಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಸ್ಕೂಟರ್ ನಂಬರನ್ನೂ ಪತ್ತೆ ಹಚ್ಚಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 2:50 pm, ಶುಕ್ರ, 17 ಏಪ್ರಿಲ್ 26



Source link

Leave a Reply

Your email address will not be published. Required fields are marked *