ಬೆಂಗಳೂರು, ಜ.9: ಪ್ರತಿಯೊಬ್ಬ ಹೆಣ್ಣಿಗೂ ತಾಯಿಯಾಗುವ ಹಕ್ಕಿದೆ. ಆದರೆ ಆ ಪಡೆಯುವ ರೀತಿಯೂ ಮುಖ್ಯ. ಈ ಪ್ರಕೃತಿಯ ಪ್ರಕಾರ ಒಂದು ಹೆಣ್ಣು ಗಂಡಿನಿಂದಲೇ ಪಡೆಯಬೇಕು ಎಂಬ ನಿಯಮವಿದೆ. ಗಂಡು-ಹೆಣ್ಣು ಸೇರಿದಾಗ ಮಾತ್ರ ಸಂಬಂಧಗಳಿಗೆ ಅರ್ಥ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕೆ ವಿರುದ್ಧವಾಗಿ ನಡೆಯುತ್ತಿದೆ. ಈಗಿನ ಟ್ರೆಂಡ್ ಪ್ರಕಾರ ಸಮಲಿಂಗಿ ಸಂಬಂಧಗಳು ಅಂದರೆ ಸಲಿಂಗ ಪ್ರೇಮ, ಇದು ಸಾಮಾಜಿಕ ವ್ಯವಸ್ಥೆಯಲ್ಲಿ ಹಾಗೂ ಭಾರತದ ಪದ್ಧತಿಗೂ ವಿರುದ್ಧವಾಗಿದೆ. ಈಗಾಗಲೇ ಕೂಡ ಸಲಿಂಗ ಸಂಬಂಧಕ್ಕೆ ಕಾನೂನಾತ್ಮಕ ಸ್ಥಾನಮಾನ ಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಇದರ ಮಧ್ಯೆ ಬೆಂಗಳೂರಿನಲ್ಲಿ ಒಂದು ವಿಚಿತ್ರ ಘಟನೆ ನಡೆದ ಪೋಸ್ಟ್ ವೊಂದು ವೈರಲ್ ಆಗಿದೆ. ಬೆಂಗಳೂರಿನ ಸಲಿಂಗಕಾಮಿ ದಂಪತಿಯಲ್ಲಿ (ಲೆಸ್ಬಿಯನ್ ದಂಪತಿಗಳು) ಒಬ್ಬಾಕೆ ಗರ್ಭಿಣಿಯಾಗಿದ್ದಾಳೆ ಎಂಬ ಪೋಸ್ಟ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ವ್ಯಾಪಕ ಚರ್ಚೆಗೂ ಕಾರಣವಾಗಿದೆ.
ಈಗ ಈ ಬಗ್ಗೆ ಫೋಟೋವೊಂದು ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ಈ ಸುದ್ದಿಗ ನಿಜವಲ್ಲ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಟೋವೊಂದು ವೈರಲ್ ಆಗಿದೆ. ಈ ಜೋಡಿ ತಮ್ಮ ಸಂಬಂಧ ಹಾಗೂ ಗರ್ಭಿಣಿಯಾಗಿರುವ ಬಗ್ಗೆ ಎಲ್ಲೂ ಹಂಚಿಕೊಂಡಿಲ್ಲ. ಆದರೆ ಈ ಫೋಟೋವನ್ನು ನೋಡಿ ಅನೇಕರು ಈ ಐಯಿಂದ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇಬ್ಬರಿಗೂ ಈ ಸಲಿಂಗ ಸಂಬಂಧವಿದೆ ಎಂಬುದಕ್ಕೆ ಯಾವ ಮಾಹಿತಿ ಇಲ್ಲ. ಒಂದು ಹೆಣ್ಣಿನಿಂದ ಮತ್ತೊಂದು ಹೆಣ್ಣು ಮಗು ಪಡೆಯುವುದು ಹೇಗೆ? ಸಾಧ್ಯ ಎಂದು ಅನೇಕರು ಪ್ರಶ್ನೆಗಳನ್ನು ಮಾಡಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಜೀವನಶೈಲಿ ದುಬಾರಿ ಅಲ್ಲ: ತಿಂಗಳಿಗೆ 27,300 ರೂ ಖರ್ಚು ಮಾಡುವ ಯುವತಿಯ ಸಲಹೆ
ಈ ಫೋಟೋವನ್ನು ನೋಡಿ ಹಲವು ತಜ್ಞರು ತುಂಬಾ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ. ತಮ್ಮ ಪೋಟೋಗಳನ್ನು ಎಐಗೆ ಹಾಕುವ ಮುನ್ನ ತಾಂತ್ರಿಕ ರಕ್ಷಣೆಯ ಬಗ್ಗೆ ನೋಡಬೇಕು. ಈ ಬಾರಿ ಎಐಗೆ ಹಾಕುವ ಕಾರಣ ಫೋಟೋಗಳನ್ನು ಕಡಿಯುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಅದರಲ್ಲಿಯೂ ನೋಡಲು ಸುಂದರ ಆಗಿರುವ ಯುವತಿಯರು ಅಪ್ಲೋಡ್ ಮಾಡಿದ್ರೆ ಮುಗಿದೇ ಹೋಯ್ತು. ಇಂತಹ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ ಎಂದು ಹೇಳಲಾಗಿದೆ. ಸಲಿಂಗಿಗಳ ವಿವಾಹಕ್ಕೆ ಪ್ರಸ್ತಾವನೆ ಅಕ್ಟೋಬರ್ 2023 ರಲ್ಲಿ ಕಾನೂನು ಮಾನ್ಯತೆ ನೀಡಲು ನಿರಾಕರಿಸಲಾಗಿದೆ, ಅದಕ್ಕೂ ಮುನ್ನ ಅವರ ನ್ಯಾಯಾಲಯವನ್ನು ಎತ್ತಿ ಹಿಡಿದಿದೆ, ಸಲಿಂಗ ಸಂಬಂಧಗಳು ಈಗ ಅಪರಾಧವಲ್ಲ ಎಂದು ಹೇಳಲಾಗಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ