ಜಿಬಿಎನ ಟಿವಿಸಿಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಕಾರಣ ಏನು?

ಜಿಬಿಎನ ಟಿವಿಸಿಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಕಾರಣ ಏನು?


ಬೆಂಗಳೂರು, ನವೆಂಬರ್ 11: ಆರ್. ಆರ್. ನಗರ ರಸ್ತೆ ಕಾಮಗಾರಿ ಅಕ್ರಮದ ಕುರಿತು ಜಿಬಿಎನ ಟಿವಿಸಿ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ. ಲೋಕಾಯುಕ್ತ ಇನ್ಸ್ ಪೆಕ್ಟರ್ ಗೋವಿಂದರಾಜು ನೇತೃತ್ವದಲ್ಲಿ ಕಾರ್ಪೋರೇಷನ್ ಸರ್ಕಲ್ ಬಳಿ ಇರುವ ಕಚೇರಿಯ ಮೇಲೆ ರೆಡ್ ನಡೆದಿದ್ದು, ಒಟ್ಟು 5 ಅಧಿಕಾರಿಗಳ ತಂಡ ಕಡತಗಳ ಪರಿಶೀಲನೆ ನಡೆಸಿದೆ. ಆರ್. ಆರ್. ನಗರ ನಿರ್ಮಾಣ ಕಾಮಗಾರಿಯ ಫೈಲ್‌ಗಾಗಿ ತಲಾಶ್ ನಡೆಸಿದೆ.

ಒಟ್ಟು 12 ಕಡೆ ಲೋಕಾಯುಕ್ತ ರೆಡ್

ಒಟ್ಟು 126 ಕಾಮಗಾರಿಗಳಲ್ಲಿ ಕಳಪೆ ಕಾಮಗಾರಿ ಆಗಿರುವ ಬಗ್ಗೆ ಶಂಕೆ ಇದ್ದು, ಹಿನ್ನಲೆ ಕಾಮಗಾರಿ ಸಂಪೂರ್ಣ ಪರಿಶೀಲನೆಗೆ ಲೋಕಾಯುಕ್ತವಾಗಿದೆ. ಕಳಪೆ ಕಾಮಗಾರಿ ಹಾಗೂ ಕಾಮಗಾರಿ ನಡೆಸದೇ ಬಿಲ್‌ಗೆ ಅನುಮೋದನೆ ನೀಡಲಾಗಿದೆ ಹಿನ್ನಲೆ ತನಿಖೆ ನಡೆಸಲಾಗುತ್ತಿದೆ. ಜಿಬಿಎ ಜೊತೆಗೆ ಇದರ ವ್ಯಾಪ್ತಿಯ ಮೂರು ನಗರ ಪಾಲಿಕೆಗಳ ಮೇಲೂ ದಾಳಿ ನಡೆದಿದ್ದು ದಕ್ಷಿಣ, ಉತ್ತರ ಹಾಗೂ ಪಶ್ಚಿಮ ನಗರ ಪಾಲಿಕೆ, ತಲಾಶ್ ನಡೆಸಲಾಗಿದೆ. 7 ಕಡೆಗಳಲ್ಲಿ ಪಾಲಿಕೆ ಇಂಜಿನಿಯರ್‌ಗಳ ಮನೆ ಮೇಲೂ ಲೋಕಾಯುಕ್ತ ರೆಡ್ ನಡೆದಿದ್ದು, ಡಿ.ಕೆ. ಸುರೇಶ್ ದೂರಿನ ಹಿನ್ನಲೆ ಲೋಕಾಯುಕ್ತ ದಾಳಿ ಮಾಡಿದೆ. ಒಟ್ಟು 12 ಕಡೆ ರೆಡ್ ನಡೆದಿದೆ. ಸುಮಾರು 250 ಕೋಟಿ ಮೌಲ್ಯದ ಹಗರಣ ನಡೆದ ಹಿನ್ನಲೆ ದಾಳಿ ನಡೆಸಿದ್ದು, 2020-2021ನೇ ಸಾಲಿನಲ್ಲಿ ನಡೆದ ರಸ್ತೆ ಕಾಮಗಾರಿ ಸೇರಿ ಹಲವು ಕಾಮಗಾರಿಗಳ ಬಗ್ಗೆ ದೂರು ಬಂದಿತ್ತು. ಈ ಹಿನ್ನಲೆ ನಿವೃತ್ತಿಯಾಗಿರೋ ಇಂಜಿನಿಯರ್‌ಗಳ ಮನೆ ಮೇಲೂ ಅಧಿಕಾರಿಗಳು ರೆಡ್ ಮಾಡಿದ್ದು, ಸತೀಶ್, ಶಿಲ್ಪ, ಬಸವರಾಜ್, ಸಿದ್ದರಾಮಯ್ಯ ಸೇರಿ ಹಲವರ ಮನೆ ಶೋಧ ಮಾಡಿದ್ದಾರೆ.

ಇದನ್ನೂ ಓದಿ: ನಕಲಿ ಬಿಲ್ ಸೃಷ್ಟಿಸಿ ಪರಿಹಾರ ಸಿಎಂ ನಿಧಿ ಪಡೆಯುತ್ತಿದ್ದ ಆರೋಪಿ ಅಂದರ್

ಜಿಬಿಎ ಮೇಲೆ ಲೋಕಾ ರೆಡ್ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚೀಫ್ ಕಮಿಷನರ್ ಮಹೇಶ್ವರ್ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.ಲೋಕಾಯುಕ್ತ ಅಧಿಕಾರಿಗಳು ಬಂದು ಕೆಲವು ಮಾಹಿತಿ ಕೇಳಿದ್ದು, ಅವರಿಗೆ ಬೇಕಾದ ಮಾಹಿತಿಯನ್ನು ನಮ್ಮ ಅಧಿಕಾರಿಗಳು ಒದಗಿಸಿದ್ದಾರೆ. ಅಸಮರ್ಪಕ ಕಾಮಗಾರಿಯಾಗಿದೆ ಎಂಬ ವಿಚಾರ ಬಿಂಬಿತ ಇದ್ದಾಗಲೂ ಆಂತರಿಕ ತನಿಖೆ ನಡೆದಿತ್ತು. ಆ ಬಗ್ಗೆ ಸರ್ಕಾರಕ್ಕೆ ವರದಿ ಒದಗಿಸಿದೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *