ಬೆಂಗಳೂರು , ಡಿ.27: ಗರ್ಭಿಣಿಯರಿಗೆ (ಗರ್ಭಿಣಿಯರು) ಮೀಸಲಾದ ಪಾರ್ಕಿಂಗ್ ಸ್ಥಳದ ಒಂದು ವಿಡಿಯೋವನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಮಾಲ್ ಈ ದೃಶ್ಯ ಕಂಡು ಬಂದಿದೆ. ಮಹಿಳೆಯರಿಗಾಗಿ, ಯಾರಾದರೂ ಗರ್ಭಿಣಿಯರಿಗೆ ಈ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದೀಗ ಮಾಲ್ನ ಈ ಹಾಡಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಮಾಲ್ ನ ಪಾರ್ಕಿಂಗ್ ಪ್ರದೇಶದಲ್ಲಿ ಒಂದು ಸಣ್ಣದಾಗಿ ಗರ್ಭಿಣಿಯರಿಗಾಗಿ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ವಿಡಿಯೋದಲ್ಲಿ ಅಕ್ಷಯ್ ರೈನಾ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದು “ತಾಯಂದಿರಿಗಾಗಿ ಕಾಯ್ದಿರಿಸಲಾಗಿದೆ” ಎಂಬ ಬೋರ್ಡ್ ಅನ್ನು ಕೂಡ ಈ ಪಾರ್ಕಿಂಗ್ ಸ್ಥಳದಲ್ಲಿ ಹಾಕಲಾಗಿದೆ. ಗುಲಾಬಿ ಥೀಮ್ ಮೂಲಕ ಈ ಪಾರ್ಕಿಂಗ್ ಸ್ಥಳವನ್ನು ವಿನ್ಯಾಸಗೊಳಿಸಲಾಗಿದೆ. ಇದು ತುಂಬಾ ವಿಶೇಷವಾಗಿ ಕಂಡು ಬಂದಿದೆ. ದೊಡ್ಡ ಶಾಪಿಂಗ್ ಮಾಲ್ ನಲ್ಲಿ ಜನ ಹಾಗೂ ವಾಹನ ದಟ್ಟಣೆ ಇರುವುದು ಸಹಜ. ಇದರಿಂದ ಗರ್ಭಿಣಿಯರಿಗೆ ಯಾವುದೇ ತೊಂದರೆ ಆಗಬಾರದು ಎಂದು ಈ ವ್ಯವಸ್ಥೆ ಮಾಡಲಾಗಿದೆ. ಪಿಂಕ್ ಕಲರ್ ನಿಂದ ಈ ಪಾರ್ಕಿಂಗ್ ಸ್ಥಳವನ್ನು ಅಲಂಕರಿಸಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಈ ದೃಶ್ಯದ ಬಗ್ಗೆ ಅಕ್ಷಯ್ ರೈನಾ ಅದ್ಭುತವಾಗಿ ವಿವರಿಸಿದ್ದಾರೆ. “ತುಂಬಾ ಒಳ್ಳೆಯ ಮಾತು ಮತ್ತು ನನಗೆ ತುಂಬಾ ಇಷ್ಟವಾಯಿತು. ಈ ದೃಶ್ಯ ಕಂಡು ಬಂದದ್ದು ನೆಕ್ಸಸ್ ಮಾಲ್ ನಲ್ಲಿ, ಸಾಂಪ್ರದಾಯಿಕ ಸೌಲಭ್ಯಗಳನ್ನು ಮೀರಿ ಯೋಚಿಸಿದ್ದಕ್ಕಾಗಿ ಮಾಲ್ ಆಡಳಿತ ಮಂಡಳಿಗೆ ಧನ್ಯವಾದಗಳು” ಎಂದು ಹೇಳಿದರು. ಮಹಿಳೆಯರಿಗೆ, ವಿಶೇಷವಾಗಿ ತಾಯಂದಿರಿಗೆ ಪ್ರತ್ಯೇಕ ಸ್ಥಳವನ್ನು ಇಟ್ಟುಕೊಂಡಿರುವ ಬೆಂಗಳೂರಿನ ನೆಕ್ಸಸ್‌ಮಾಲ್‌ಗಳಿಗೆ ಹ್ಯಾಟ್ಸ್ ಆಫ್. ಇತರ ಎಲ್ಲಾ ಮಾಲ್‌ಗಳು ಇದನ್ನು ಜಾರಿಗೆ ತರಬೇಕು ಎಂದು ಈ ವೀಡಿಯೊದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಕಿರುಕುಳ ನೀಡಿದ ಮೂವರು ಪುಂಡರು
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅನೇಕರು ಈ ವಿಡಿಯೋವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಸಹಾಯಕವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಇದು ಮಾಲ್‌ಗಳ ಜನದಟ್ಟಣೆ ಮತ್ತು ಗೊಂದಲಮಯ ಪಾರ್ಕಿಂಗ್‌ನಲ್ಲಿ ಬಹಳ ಅವಶ್ಯಕವಾದ ಸ್ಥಳವಾಗಿದೆ, ವಾಹನವನ್ನು ತಾಯಂದಿರು ತಮ್ಮ ವಾಹನವನ್ನು ಸುಲಭವಾಗಿ ನಿಲ್ಲಿಸಿ ಮಾಲ್‌ಗೆ ಸುಲಭವಾಗಿ ಹೋಗಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ನೋಡಲು ತುಂಬಾ ಹೃದಯಸ್ಪರ್ಶಿಯಾಗಿದೆ ಎಂದು ಅವರು ಕಮೆಂಟ್ ಮಾಡಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ