ಬೆಂಗಳೂರು, (ಅಕ್ಟೋಬರ್ 29): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಪಾಲಾಗಿದ್ದಾರೆ. ಇದರಲ್ಲೇ ಈ ಪ್ರಕರಣ ದೇಶದೆಲ್ಲೆಡೆ ಭಾರೀ ಸದ್ದು ಮಾಡಿದ್ದು, ಇದೀಗ ಇದೇ ಮಾದರಿಯಲ್ಲಿ ಸಾಯಿಸುವುದಾಗಿ ವ್ಯಕ್ತಿಯೋಬ್ಬರಿಗೆ ಧಮ್ಕಿ ಹಾಕಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿ ನಡೆದಿದೆ.
ಮಂಜುನಾಥ್ ಹಾಗೂ ಬಾಗೇಗೌಡ ಎರಡು ವರ್ಷದಿಂದ ಸ್ನೇಹಿತರಾಗಿದ್ದರೆ, ಗ್ಲೋಬಲ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಕೊನೆಗೆ ನಷ್ಟ ಕಂಪನಿಯಾಗಿ ಈ ಪ್ರಕರಣ ದಾಖಲಾಗಿದೆ. ಬಾಗೇಗೌಡನ ನಂಬಿ ಹಣ ಹೂಡಿಕೆ ಮಾಡಿ ನಷ್ಟವಾಗಿದ್ದರಿಂದ ಮಂಜುನಾಥ್ ಕೋಪಗೊಂಡಿದ್ದ. ಹೇಗಾದರೂ ಮಾಡಿ ತನ್ನ ಹಣ ವಸೂಲಿ ಮಾಡಬೇಕೆಂದು ಪ್ಲ್ಯಾನ್ ಮಾಡಿ ಬಾಗೇಗೌಡನನ್ನು ಹೋಟೆಲ್ ಗೆ ಕರೆಯಿಸಿಕೊಂಡಿದ್ದಾನೆ. ಬಳಿಕ ಆಚೆ ಹೋಗಿ ಬರೋಣ ಎಂದು ಗೋದಾಮಿಗೆ ಕರೆದೊಯ್ದಿದ್ದಾನೆ. ಬಳಿಕ ಗೋದಾಮಿಗೆ 8 ಜನರ ಕರೆಸಿ ಹಣ ಕೊಡುವಂತೆ ಬಾಗೇಗೌಡನ ಮೇಲೆ ಹಲ್ಲೆ ಮಾಡಿದ್ದಾನೆ.ಒಂದು ವೇಳೆ ಹಣ ಕೊಡದಿದ್ದರೆ ರೇಣುಕಾಸ್ವಾಮಿ ಈ ರೀತಿ ಕೊಲೆ ಆಗ್ತೀಯಾ ಎಂದು ಧಮ್ಕಿ ಹಾಕಿದ್ದಾನೆ.
ಇನ್ನು ಇದೇ ವೇಳೆ 44 ಲಕ್ಷ ಹಣ ಕೊಡಬೇಕು ಎಂದು ಬಾಗೇಗೌಡನಿಂದ ಬಲವಂತವಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದು, ಬಾಗೇಗೌಡನ ಬಾಮೈದನಿಂದ ಚೆಕ್ ತರಿಸಿ ಸಹಿ ಮಾಡಿಸಿಕೊಂಡಿದ್ದಾರೆ. ಸದ್ಯ ಈ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ ಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.