Headlines

ಬೆಂಗಳೂರಿಗರಿಗೆ ಮೆಟ್ರೋ ದರ ಏರಿಕೆ ಬಿಸಿ: ಎಲ್ಲಿಂದ ಎಲ್ಲಿಗೆ ಎಷ್ಟಾಯ್ತು ಟಿಕೆಟ್ ಬೆಲೆ?

ಬೆಂಗಳೂರಿಗರಿಗೆ ಮೆಟ್ರೋ ದರ ಏರಿಕೆ ಬಿಸಿ:  ಎಲ್ಲಿಂದ ಎಲ್ಲಿಗೆ ಎಷ್ಟಾಯ್ತು ಟಿಕೆಟ್ ಬೆಲೆ?


ಬೆಂಗಳೂರು, ಫೆ.5: ಬೆಂಗಳೂರಿನ ನಮ್ಮ ಮೆಟ್ರೋ (ಬೆಂಗಳೂರು ಮೆಟ್ರೋ) ಪ್ರಯಾಣಿಕರಿಗೆ ದರದ ಶಾಕ್ ನೀಡಲಿದೆ. ಮೆಟ್ರೋ ಟಿಕೆಟ್ ದರವನ್ನು 5% ರಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಮೆಟ್ರೋ ನಿಗಮವು ಈ ಸಿದ್ಧತೆ ನಡೆಸಿದೆ. ಕಳೆದ ವರ್ಷ ಫೆಬ್ರವರಿ 9 ರಂದು ದಾಖಲೆಯ 101.5% ದರ ಏರಿಕೆಯಾಗಿದೆ. ಈ ನಿರ್ಧಾರವು ಪ್ರಯಾಣಿಕರು ಮತ್ತು ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವ್ಯಾಪಕ ವಿರೋಧ ವ್ಯಕ್ತವಾದ ನಂತರ, ಮೆಟ್ರೋ ನಿಗಮವು ದರವನ್ನು ಸುಮಾರು 70% ರಷ್ಟು ಇಳಿಕೆ ಮಾಡಿತ್ತು. ಆದರೆ, ಈಗ ಮತ್ತೊಮ್ಮೆ ಅದೇ ಫೆಬ್ರವರಿ 9 ರಂದು 5% ದರ ಹೆಚ್ಚಳಕ್ಕೆ ಮೆಟ್ರೋ ನಿಗಮ ಮುಂದಾಗಿದೆ.

ಈ ದರ ಏರಿಕೆಯ ಪ್ರಸ್ತಾವನೆಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಡೀ ಜೀವನವನ್ನು ತೆರಿಗೆ ಕಟ್ಟಿಕೊಂಡೇ ಬದುಕಬೇಕಾ? ಮಧ್ಯಮ ವರ್ಗದವರು, ಬಡ ವರ್ಗದವರು ಬದುಕೋಕೆ ಆಗೋದಿಲ್ಲವೇ?” ಎಂದು ಲಾಲ್ ಬಾಗ್ ಮೆಟ್ರೋ ಸ್ಟೇಷನ್ ಬಳಿ ಟಿವಿ9 ವರದಿಗಾರರ ಮುಂದೆ ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಪ್ರಸ್ತುತ ಪ್ರತಿಯೊಂದು ದಿನಸಿ ವಸ್ತುಗಳ ಬೆಲೆಯು ಏರಿಕೆಯಾಗುವ ಸಂದರ್ಭದಲ್ಲಿ ಮೆಟ್ರೋ ದರವು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಒಂದು ಕಡೆ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಮತ್ತೊಂದು ಕಡೆ ಅಗತ್ಯ ಸೇವೆಗಳ ಬೆಲೆಗಳನ್ನು ಹೆಚ್ಚಿಸುವುದರಿಂದ ಎಷ್ಟು ಸರಿ ಎಂಬ ಪ್ರಶ್ನೆಗಳು ಎದ್ದಿವೆ.

ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ, ಎಷ್ಟು?

ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್:

ಕಳೆದ ಬಾರಿ ದರದಿಂದಾಗಿ ಅನೇಕ ಪ್ರಯಾಣಿಕರು ಮೆಟ್ರೋ ಬಳಸುವುದನ್ನು ನಿಲ್ಲಿಸಿದರು, ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಪ್ರಾರಂಭಿಸಿದರು. ಇದರಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಮತ್ತೆ ಹೆಚ್ಚಾಗಿತ್ತು. ವರದಿಗಳ ಪ್ರಕಾರ, ದೇಶದಲ್ಲೇ ಬೆಂಗಳೂರು ಮಹಾನಗರದ ದರ ಅತಿ ಹೆಚ್ಚಾಗಿದೆ. ಮೆಟ್ರೋದ ಆಂತರಿಕ ಯೋಜನೆಯ ಪ್ರಕಾರ, ಪ್ರಯಾಣಿಕರು ಈ ಪ್ರಸ್ತಾವಿತ ದರವನ್ನು ವಿರೋಧಿಸದಿದ್ದರೆ ಅದನ್ನು ನಿಲ್ಲಿಸುವ ಮತ್ತು ವಿರೋಧಿಸಿದರೆ ನಿಲ್ಲಿಸುವ ಲೆಕ್ಕಾಚಾರವಿದೆ. ಸರ್ಕಾರವೂ ಸಹ ಇದೆ ರೀತಿಯ ಸೂಚನೆಯನ್ನು ಮೆಟ್ರೋ ನಿಗಮಕ್ಕೆ ನೀಡಿದೆ. ವೇತನ ಕಡಿಮೆ, ಕೆಲಸ ಕಡಿತಗೊಳ್ಳುತ್ತಿರುವ ಇಂತಹ ಸನ್ನಿವೇಶದಲ್ಲಿ ಮತ್ತೆ ದರ ಏರಿಸಿದರೆ ಬದುಕುವುದು ಹೇಗೆ ಎಂದು ಪ್ರಯಾಣಿಕರು ಟಿವಿ9 ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *