ಬೆಂಗಳೂರು, ಜನವರಿ 10: ನಗರವಾಸಿಗಳಿಗೆ ಮೆಟ್ರೋದಿಂದ ಮತ್ತೊಂದು ಶುಭ ಸುದ್ದಿ ಲಭಿಸಿದೆ. ನಗರದ ಬಹುನಿರೀಕ್ಷಿತ ಪಿಂಕ್ ಲೈನ್ ಮಾರ್ಗದಲ್ಲಿ ಮೆಟ್ರೋ ರೈಲು ಓಡಾಟದ ಟ್ರಯಲ್ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಆರಂಭಿಸಿದೆ. ಒಟ್ಟು 21.26 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ ಪ್ರಥಮ ಹಂತವಾಗಿ 7.5 ಕಿ.ಮೀ ಎಲಿವೇಟೆಡ್ ಟ್ರಯಲ್ ನಡೆಯುತ್ತಿದೆ. ಈ ಎಲಿವೇಟೆಡ್ ಮಾರ್ಗದಲ್ಲಿ ಒಟ್ಟು 6 ಸ್ಟೇಷನ್‌ಗಳಿದ್ದು, ಕಾಳೇನಾ ಅಗ್ರಹಾರದಿಂದ ತಾವರೆಕೆರೆ ನಡುವಿನ ಭಾಗದಲ್ಲಿ ಪರೀಕ್ಷಾ ಚಾಲನೆ ಆರಂಭವಾಗಿದೆ. ಏಪ್ರಿಲ್-ಮೇ ತಿಂಗಳಿನಲ್ಲಿ ಈ ಮಾರ್ಗವನ್ನು ಸಾರ್ವಜನಿಕರಿಗೆ ತೆರೆಯಲು ಬಿಎಂಆರ್ಸಿಎಲ್ ಸಿದ್ಧತೆ ನಡೆಸುತ್ತಿದೆ. ಉಳಿದ 13.76 ಕಿ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.