ಬೆಂಗಳೂರು, ನವೆಂಬರ್ 14: ಬಿಹಾರದಲ್ಲಿ ವಿಧಾನಸಭಾ ಚುನಾವಣೆ (ಬಿಹಾರ ವಿಧಾನಸಭೆ ಚುನಾವಣೆ) ಮುಕ್ತಾಯವಾಗಿ ಇಂದು ಮತ ಎಣಿಕೆ ನಡೆದಿದೆ. ಬಿಜೆಪಿ-ಜೆಡಿಯು ಮೈತ್ರಿಯ ಎನ್‌ಡಿಎ ಬಣ ಅಭೂತಪೂರ್ವ ಜಯ ಸಾಧಿಸಿದೆ. ಈ ಫಲಿತಾಂಶದ ಬಗ್ಗೆ 3 ತಿಂಗಳ ಹಿಂದೆಯೇ ‘ಮಾಡರ್ನ್ ಅಸ್ಟ್ರಾಲಜಿ’ ಭವಿಷ್ಯ ನುಡಿದಿತ್ತು. ‘ಮಾಡರ್ನ್ ಅಸ್ಟ್ರಾಲಾಜಿ’ ಮಾಸಪತ್ರಿಕೆಯಲ್ಲಿ ಬಿಹಾರದ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಬೊಕ್ಕ ಗಾಂಧಿ ಪ್ರಸಾದ್ ಎಂಬುವವರು ಲೇಖನವನ್ನು ಬರೆದಿದ್ದರು. ಅದೇ ಲೇಖನ ಪ್ರಕಟವಾಗಿರುವ ಪುಟದ ಕೆಳ ಭಾಗದ ಸಂಪಾದಕರಿಗೆ ಅದು ತಲುಪಿರುವ ದಿನಾಂಕ ಜೂನ್ 27, 2025 ಎಂದು ಸಹ ತಿಳಿಸಲಾಗಿದೆ. ಬಿಹಾರದ ಚುನಾವಣೆಯ ಲೇಖನವನ್ನು ಸೆಪ್ಟೆಂಬರ್ ತಿಂಗಳ ಮಾಸಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ, ಅದು ಆಗಸ್ಟ್ ತಿಂಗಳ ಕೊನೆಯ ಹೊತ್ತಿಗೆ ಲಭ್ಯವಿತ್ತು. ಈ ಲೇಖನದಲ್ಲಿ ಬಿಜೆಪಿಯ ಬಗ್ಗೆ ಹೀಗೆ ಬರೆಯಲಾಗಿದೆ:
ಭಾರತೀಯ ಜನತಾ ಪಕ್ಷಕ್ಕೆ ಅದು ಸ್ಥಾಪನೆಯಾದ ದಿನದ ಸಮಯದ ಆಧಾರದಲ್ಲಿ ಕುಂಡಲಿಯನ್ನು ತಯಾರಿಸಲಾಯಿತು, ಜುಲೈ 14, 2025 ರಿಂದ ಫೆಬ್ರವರಿ 10,2026 ರ ತನಕ ಚಂದ್ರ ದಶೆಯಲ್ಲಿ ಕೇತು ಭುಕ್ತಿ ನಡೆಯುತ್ತಿದೆ. ಅದರಲ್ಲಿ ರಾಹುವಿನ ಭುಕ್ತಿ ಅಕ್ಟೋಬರ್ 12, 2025 ರಿಂದ ನವೆಂಬರ್ 13,2025 ರ ತನಕ ನಡೆಯುತ್ತಿದೆ. ಚಂದ್ರ ದಶೆ ಬಿಜೆಪಿಗೆ ಉತ್ತಮ ಫಲಿತಾಂಶ ನೀಡಿದೆ. ಬುಧಭಕ್ತಿ ನಡೆಯುವಾಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬಾರದೆ ಹೋಗಿರಬಹುದು. ಆದರೂ ಮಿತ್ರ ಪಕ್ಷಗಳ ಜೊತೆಗೂಡಿ ಬಿಜೆಪಿಯೇ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಸಫಲವಾಗಿದೆ. ಕುಜವತ್ ಕೇತುಃ ಎಂಬ ಪ್ರಮಾಣ ಇದ್ದು, ಕೇತು ಗ್ರಹವು ಕುಜ ಗ್ರಹದ ರೀತಿಯಲ್ಲಿಯೇ ಫಲ ನೀಡುತ್ತದೆ. ಅದಕ್ಕೆ ಶನಿ ಗ್ರಹದ ಪ್ರಭಾವ ಇದೆ. ಬಿಜೆಪಿ ಸ್ಥಾಪಿಸಿದ ಕಾಲದಲ್ಲಿ ಶನಿ, ಕುಜ ಹಾಗೂ ವಕ್ರೀ ಗುರು ಸಿಂಹದಲ್ಲಿದ್ದು, ಕುಂಭ ರಾಶಿಯಲ್ಲಿ ಇದ್ ಕೇತುವಿನ ಮೇಲೆ ದೃಷ್ಟಿ ಇತ್ತು.
ಬಿಜೆಪಿ ಸ್ಥಾಪನೆ ಕಾಲದಲ್ಲಿ ಮಿಥುನ ಲಗ್ನ ಇತ್ತು. ಸದ್ಯಕ್ಕೆ ಶನಿ ಮೀನ ರಾಶಿಯಲ್ಲಿ ಸಂಚರಿಸಿ, ಪಕ್ಷದ ಮಿಥುನ ಲಗ್ನಕ್ಕೆ ಹತ್ತನೇ ಸ್ಥಾನ ಆಗುತ್ತದೆ. ಇನ್ನು ಮಿಥುನದಲ್ಲಿಯೇ ಗುರು ಸಂಚಾರ ನಡೆಯುವುದು ಇವೆಲ್ಲವೂ ಸೇರಿ ಭಾರತೀಯ ಜನತಾ ಪಕ್ಷವು ತನ್ನ ಪ್ರದರ್ಶನವನ್ನು ಸುಧಾರಿಸಲು ಸಾಧ್ಯವಾಗಲಿದೆ.
ನರೇಂದ್ರ ಮೋದಿ ಜಾತಕ ಪರಿಶೀಲನೆ:
ಪಕ್ಷದ ಫಲಿತಾಂಶದ ಮೇಲೆ ಪರಿಣಾಮ ಬೀರುವಲ್ಲಿ ನರೇಂದ್ರ ಮೋದಿ ಪ್ರಮುಖರಾಗುತ್ತಾರೆ. ಆದ್ದರಿಂದ ಅವರ ಜಾತಕ ಪರಿಶೀಲನೆ ಮಾಡುವುದಾದರೆ, ಅಕ್ಟೋಬರ್ 16,2026 ರಿಂದ ಡಿಸೆಂಬರ್ 14,2027 ರ ತನಕ ಅವರಿಗೆ ಕುಜ ದಶೆಯಲ್ಲಿ ಶುಕ್ರ ಭುಕ್ತಿ ನಡೆಯುತ್ತಿದೆ. ಶುಕ್ರನ ಅಂತರ ಭುಕ್ತಿ ಅಕ್ಟೋಬರ್ 16, 2026 ರಿಂದ ಡಿಸೆಂಬರ್ 24, 2026 ರವರೆಗೆ ನಡೆಯುತ್ತದೆ ಮೋದಿ ಅವರಿಗೆ ಉತ್ತಮ ಸಮಯ ಇರುತ್ತದೆ, ಚುನಾವಣೆಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ.
ಕಾಂಗ್ರೆಸ್ ಜಾತಕ ಹೇಗಿದೆ?:
ಕಾಂಗ್ರೆಸ್ ಪಕ್ಷ ಸ್ಥಾಪನೆಯ ಆಧಾರದಲ್ಲಿ ನೋಡುವುದಾದರೆ, ಅಕ್ಟೋಬರ್ 14, 2025 ರಿಂದ ಏಪ್ರಿಲ್ 11, 2027 ರ ತನಕ ಗುರು ದಶೆಯಲ್ಲಿ ರಾಹು ಭುಕ್ತಿ ಇದೆ. ಇನ್ನು ಜುಲೈ 13, 2025 ರಿಂದ ಡಿಸೆಂಬರ್ 6, 2025 ರ ತನಕ ಶುಕ್ರನ ಅಂತರ ಭುಕ್ತಿ ಇದೆ. ಕಾಂಗ್ರೆಸ್ ಸ್ಥಾಪನೆ ಮಕರ ಲಗ್ನದಲ್ಲಿ. ಆ ಸಮಯದಲ್ಲಿ ಅಲ್ಲಿಂದ ಆರನೇ ಮನೆಯಲ್ಲಿ ಗುರು ಗ್ರಹ ಇತ್ತು. ಆದ್ದರಿಂದ ಗುರು ದಶೆಯು ಆ ಪಕ್ಷಕ್ಕೆ ಕಹಿಯ ಅನುಭವವನ್ನೇ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ಅದರ ಹಿಂದಿನ ಫಲಿತಕ್ಕೆ ಫಲಿತಾಂಶ ಸುಧಾರಣೆ ಕಂಡರೂ ಅದರಿಂದ ದೊಡ್ಡ ಅನುಕೂಲ ಅಂತೇನೂ ಆಗಲಿಲ್ಲ. ಆ ಪಕ್ಷ ಸ್ಥಾಪನೆಯಾದಾಗ ಕನ್ಯಾ ರಾಶಿಯಲ್ಲಿ ಚಂದ್ರ ಇತ್ತು. ಆ ಕನ್ಯಾ ರಾಶಿಗೆ ಏಳನೇ ಮನೆಯಲ್ಲಿ ಶನಿ ಸಂಚಾರ ಆಗುತ್ತಿದೆ, ಆ ಪಕ್ಷದ ಸಾಧನೆಯಲ್ಲಿ ಸುಧಾರಣೆ ಆಗುವ ಲಕ್ಷಣವೂ ಇಲ್ಲ. ರಾಹುವು ಚಂದ್ರನ ಯುತಿಯಲ್ಲಿ ಇದ್ದ ಸ್ಥಾಪನೆಯ ಸಮಯದಲ್ಲಿನ ಸ್ಥಿತಿಯು ತಪ್ಪಾದ ನಿರ್ಧಾರಗಳನ್ನು ತೆಗೆದುಕೊಂಡಿತು, ಅದರ ಫಲವನ್ನು ಪಡೆಯಲಾಗುತ್ತದೆ.
ನಿತೀಶ್ ಕುಮಾರ್ ಜಾತಕ ವಿಶ್ಲೇಷಣೆ:
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನ್ಮ ಜಾತಕದ ಪ್ರಕಾರ ಮೇ 25, 2023ರಿಂದ ಮೇ 25, 2026ರವರೆಗೆ ರಾಹು ದಶೆಯಲ್ಲಿ ಶುಕ್ರ ಭುಕ್ತಿ ನಡೆಯುತ್ತಿದೆ. ಇನ್ನು ಅಕ್ಟೋಬರ್ 21, 2025 ರಿಂದ ಮಾರ್ಚ್ 21, 2026 ರ ತನಕ ಬುಧನ ಅಂತರ ಭುಕ್ತಿ ನಡೆಯುತ್ತಿದೆ. ಮಿಥುನ ಲಗ್ನದಲ್ಲಿ ಜನಿಸಿದಂಥ ನಿತೀಶ್ ಅವರಿಗೆ ಜನನ ಕಾಲದಲ್ಲಿ ಶುಕ್ರ ಹತ್ತನೇ ಮನೆಯಲ್ಲಿದೆ. ಆದ್ದರಿಂದ ಮುಖ್ಯಮಂತ್ರಿಯಾಗಿ ಅವರೇ ಮುಂದುವರಿಯುವ ಸಾಧ್ಯತೆ ಹೆಚ್ಚು. ಶನಿ ಗ್ರಹವು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದು, ಬಿಹಾರದಲ್ಲಿ ಜೆಡಿಯು ಸ್ಥಿತಿ ಸುಧಾರಣೆಯಾಗಿದೆ.
ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಎನ್ ಡಿಎ ಮೈತ್ರಿಕೂಟವಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ಸರ್ಕಾರ ರಚನೆ ಮಾಡಬಹುದು.
ಇದು ಆ ಲೇಖನದಲ್ಲಿ ಇರುವಂಥ ಅಂಶವಾಗಿದೆ. ಇನ್ನು ಗಾಯತ್ರಿ ದೇವಿ ವಾಸುದೇವ್ ಅವರ ಟಿವಿ9 ಕನ್ನಡ ವೆಬ್ ಸೈಟ್ ನಿಂದ ಮಾತನಾಡಿದರು. ಮುಂದಿನ ವರ್ಷದ ವಿಶೇಷ ಸಂಚಿಕೆ ತಯಾರಿಯಲ್ಲಿ ಮುಳುಗಿ ಹೋಗಿದ್ದೇನೆ. ಡಿಸೆಂಬರ್ ಮಧ್ಯದ ಹೊತ್ತಿಗೆ ಮುಂದಿನ ವರ್ಷದ ಪ್ರೆಡಿಕ್ಷನ್ ಬಗ್ಗೆ ಮಾತನಾಡಬಲ್ಲೆ. ಆದರೆ ಸದ್ಯಕ್ಕೆ ಆ ಕುರಿತು ಮಾತನಾಡುವುದು ಸರಿ ಹೋಗುವುದಿಲ್ಲ. ನಮ್ಮ ಮಾಡರ್ನ್ ಅಸ್ಟ್ರಾಲಾಜಿಯಲ್ಲಿ ಪ್ರಕಟವಾಗಿರುವ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶದ ಬಗೆಗಿನ ಲೇಖನದ ಅಂಶಗಳನ್ನು ನೀವು ಬಳಸಿಕೊಳ್ಳಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ