ಹೆಣ್ಣು ತಾಯಿಯಾಗುವುದು ದುರ್ಬಲತೆಯೇ? 30 ಲಕ್ಷ ರೂ. ಸಂಬಳದ ಉದ್ಯೋಗ ನಿರಾಕರಿಸಿದ ಬೆಂಗಳೂರಿನ ಮಹಿಳೆ

ಹೆಣ್ಣು ತಾಯಿಯಾಗುವುದು ದುರ್ಬಲತೆಯೇ? 30 ಲಕ್ಷ ರೂ. ಸಂಬಳದ ಉದ್ಯೋಗ ನಿರಾಕರಿಸಿದ ಬೆಂಗಳೂರಿನ ಮಹಿಳೆ


ಬೆಂಗಳೂರು, ಜ.7: ಬೆಂಗಳೂರು ಮೂಲದ ಮಹಿಳೆಯೊಬ್ಬರು 30 ಲಕ್ಷ ಸಂಬಳ ಸಿಗುವ ಬ್ಯಾಂಕ್ (ತಾಯ್ತನದ ತಾರತಮ್ಯ) ಉದ್ಯೋಗವನ್ನು ನಿರಾಕರಿಸಲಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಬಾರಿ ತಾಯಿ ಆಗಿರುವ ಬಗ್ಗೆ ಹಾಗೂ ತಾಯಿತನದ ಸುಖದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಕೋಮಲ್ ಎಂಬ ಮಹಿಳೆ ಈ ಬಗ್ಗೆ ಹೇಳಿದ್ದಾರೆ. ತನ್ನ ನಿರ್ಧಾರವು ಹಣದ ಬಗ್ಗೆ ಅಲ್ಲ, ಹೆರಿಗೆಯ ನಂತರ ಕೆಲಸಕ್ಕೆ ಮರಳುವ ಮಹಿಳೆಯರಿಗೆ ಕಚೇರಿಯಲ್ಲಿ ಸಿಗುವ ಬೆಲೆ ಹೇಗಿರುತ್ತದೆ. ಮಗು ಪಡೆದ ನಂತರ ಮಹಿಳೆಯರು ದುರ್ಬಲರು ಎಂಬ ಭಾವನೆ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಕೋಮಲ್ ಅವರು ಹೇರಿಗೆ ಕಾರಣಕ್ಕಾಗಿ ಹಿಂದಿನ ಕೆಲಸವನ್ನು ಐದನೇ ನಂತರ ತೊರೆದು ನಂತರ, ತಾಯಿತನದ ಸುಖವನ್ನು ಪಡೆದಿದ್ದಾರೆ ಎಂದು ಈ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಕೋಮಲ್ ಅವರ ಗಂಡ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದರು, ಆದರೆ ಕೋಮಲ್ ಮುಂಬೈನಲ್ಲಿ ವಾಸವಾಗಿದ್ದರು. ನಂತರ ಅವರು ಕೂಡ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ಸ್ಥಳೀಯ ಬ್ಯಾಂಕ್, ಅವರ ಪ್ರೊಫೈಲ್ ಮತ್ತು ಆದ್ಯತೆಯ ಸ್ಥಳ ಎರಡಕ್ಕೂ ಹೊಂದಿಕೆಯಾಗುವ ಕೆಲಸ ಮಾಡಲು ಮುಂದಾಗಿದೆ. ಅದಕ್ಕಾಗಿ ಅವರಿಗೆ ಸಂದರ್ಶನವನ್ನು ಕೂಡ ಮಾಡಿತ್ತು. ಸಂದರ್ಶನಕ್ಕಾಗಿ 8 ತಿಂಗಳು ತೆಗೆದುಕೊಂಡಿದೆ.

ಉದ್ಯೋಗ ಪಡೆಯುವವರಿಗೆ ಬ್ಯಾಂಕ್ ಯಾವುದೇ ಆಂತರಿಕ ನಿಯಮಗಳನ್ನು ಮಾಡಿಲ್ಲ. ಆ ಕಾರಣಕ್ಕೆ ಇವರ ತಾಯಿ ಆಗಿರುವ ಬಗ್ಗೆ ಬ್ಯಾಂಕ್ ಗೆ ಹೇಳಿಲ್ಲ. ತಾಯೊಯಾದ ಕೇವಲ 14 ದಿನಗಳ ನಂತರ ಸಂದರ್ಶನವನ್ನು ಅಂತಿಮಗೊಳಿಸಿ, ಅವರಿಗೆ ಕೆಲಸ ಪಕ್ಕಾ ಮಾಡಿತ್ತು. ಆದರೆ ಈ ವೇಳೆ ಕೋಮಲ್ ಹೆಣ್ಣು ಮಗುವಿಗೆ ಜನ್ಮ ನೀಡಿದೆ ಎಂದು ಬ್ಯಾಂಕ್‌ಗೆ ತಿಳಿಯಿತು. ಅದಕ್ಕೆ ಕೋಮಲ್ ಕೂಡ ನಾನು ಇತ್ತೀಚೆಗೆ ತಾಯಿಯಾಗಿರುವುದು ಸ್ಪಷ್ಟನೆ ನೀಡಿದೆ. ಆದರೆ ಬ್ಯಾಂಕ್ ಇದಕ್ಕೆ ಒಪ್ಪಿಲ್ಲ. ಆದರೆ ಇದರ ಬಗ್ಗೆ, ಪ್ರಕ್ರಿಯೆ ಮುಂದುವರೆದಿದೆ ಎಂದು ಕೋಮಲ್ ಹೇಳಿದ್ದಾರೆ. ಮುಖಾಮುಖಿ ಸಂದರ್ಶನದಲ್ಲಿ, ಸಂದರ್ಶಕರು, 3 ತಿಂಗಳ ಮಗು ಇರಬೇಕಾದರೆ ಇಷ್ಟು ಬೇಗ ಯಾಕೆ ಮತ್ತೆ ಕೆಲಸ ಬಂದಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ವೈಯಕ್ತಿಕ ಕಾರಣ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ:

“ಸಂಸ್ಥೆಯು ನನ್ನ ಪ್ರೊಫೈಲ್ ಅನ್ನು ಇಷ್ಟಪಟ್ಟಿದ್ದರೂ, ತಾಯಿ ಎಂದು ತಿಳಿದ ನಂತರ ಆಫರ್ ಅನ್ನು ಕಡಿಮೆ ಮಾಡಲಾಗಿದೆ. 30 ಲಕ್ಷ ರೂ. ಆಫರ್ ಅನ್ನು ಸ್ವೀಕರಿಸಿ ಅಥವಾ ಆಫರ್ ಹಿಂಪಡೆಯಬಹುದು ಎಂದು ಹೇಳಿದ್ದಾರೆ. ಇಲ್ಲಿ ಹಣದ ಮೌಲ್ಯ, ಕೆಲಸ, ಸಾಮರ್ಥ್ಯ, ಭಾವನೆಗಳಿಗೆ ಬೆಲೆ ಇಲ್ಲ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಹೊಸ ಯೋಜನೆ: ಶಾಲಾ ಬಸ್‌ನಲ್ಲಿ ಬಯೋ-ಟಾಯ್ಲೆಟ್ ಸೌಲಭ್ಯ

ಈ ಪೋಸ್ಟ್‌ಗೆ ಹಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ನಿರ್ಧಾರ ಮಾತೃತ್ವ ರಜೆಯ ನಂತರ ಕೆಲಸಕ್ಕೆ ಮರಳುವವರ ದುಃಸ್ಥಿತಿ ಮತ್ತೊಂದು ವೃತ್ತಾಂತ ಎಂದು ಒಬ್ಬರು ಒಳ್ಳೆಯ ಕಮೆಂಟ್ ಮಾಡಿದ್ದಾರೆ. ಇದು ಕಂಪನಿಯ ಸಮಸ್ಯೆಯಾಗಿದೆ, ಹಲವು ಕಡೆ ಇಂತಹ ಘಟನೆಗಳು ನಡೆದಿವೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ವೇತನ, ಮನ್ನಣೆ ಮತ್ತು ನಿರೀಕ್ಷೆಗಳ ವಿಷಯದಲ್ಲಿ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಮಹಿಳೆಯರ ಕಡೆಗೆ ಪಕ್ಷಪಾತವಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *