ಬೆಂಗಳೂರು: ಹಣದ ಮಳೆ ಸುರಿಸ್ತೀವಿ ಅಂದೋರು ಮಾಡಿದ್ರು ಚೀಟಿಂಗ್; ಲಕ್ಷ ಲಕ್ಷ ಪಂಗನಾಮ

ಬೆಂಗಳೂರು: ಹಣದ ಮಳೆ ಸುರಿಸ್ತೀವಿ ಅಂದೋರು ಮಾಡಿದ್ರು ಚೀಟಿಂಗ್; ಲಕ್ಷ ಲಕ್ಷ ಪಂಗನಾಮ


ಬೆಂಗಳೂರು: ಹಣದ ಮಳೆ ಸುರಿಸ್ತೀವಿ ಅಂದೋರು ಮಾಡಿದ್ರು ಚೀಟಿಂಗ್; ಲಕ್ಷ ಲಕ್ಷ ಪಂಗನಾಮ

ಬೆಂಗಳೂರು, ಮಾರ್ಚ್ 24: ಹಣ ಅಂದರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಮಾತು ನೂರಕ್ಕೆ ನೂರರಷ್ಟು ಸತ್ಯ. ರೊಕ್ಕದ ಲಾಭ ಆಗುತ್ತೆ ಅಂದರೆ ಕೆಲ ಜನ ಏನು ಬೇಕಾದರೂ ಮಾಡುತ್ತಾರೆ. ಕೆಲವು ಮೂರ್ಖರು ಕೂಡ ಆಗುತ್ತಾರೆ. ಈಗಿನ ಕಾಲದಲ್ಲಿ ಲಕ್ಷಕ್ಕೆ ಮೂರು ಲಕ್ಷ ರೂ ಕೊಡ್ತೀವಿ ಅಂದರೆ ಯಾರು ನಂಬ್ತಾರೆ ಹೇಳಿ. ಹೀಗೆ ಡಬಲ್, ಟ್ರಿಬಲ್ ಹಣ (ಹಣ ದ್ವಿಗುಣಗೊಳ್ಳುವುದು) ಸಿಗುತ್ತೆ ಅಂತಾ ಆಸೆ ಬಿದ್ದವರು ಲಕ್ಷ ಲಕ್ಷ ಕಳ್ಕೊಂಡಿದ್ದಾರೆ.

ಮೂವರ ಬಂಧನ

ಅಲ್ಲಿ ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋರು ಇರ್ತಾರೆ ಅನ್ನೋದು ನಿಜಾನೇ ಬಿಡಿ. ಹಣದ ಮಳೆ ರೀತಿ ಸುರಿಯುತ್ತೆ ಅನ್ನೋ ಬಣ್ಣದ ಮಾತುಗಳನ್ನ ನಂಬಿ ಬೆಂಗಳೂರಿನಲ್ಲಿ ಗುತ್ತಿಗೆದಾರ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾನೆ. ಹಣ ಚೀಟ್ ಆಗಿದೆ ಅಂತ ಗೊತ್ತಾದ ಮೇಲೆ ಪೊಲೀಸರು ಮೊರೆ ಹೋಗಿದ್ದು, ಸದ್ಯ ಪೊಲೀಸರು ಮೂವರನ್ನ ಬಂಧಿಸಿ 40 ಲಕ್ಷ ರೂ.

ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ಎಂದು ಯಾಮಾರಿಸಿ ವೃದ್ಧ ಉದ್ಯಮಿಯ 15 ಕೋಟಿ ರೂ. ಆಗರಿಸಿದ್ರು!

ಅಂದಹಾಗೆ ಈ ಘಟನೆ ಬೆಂಗಳೂರಿನ ಬಾಗಲಗುಂಟೆ ನಡೆದಿರುವುದು. ಹಣ ಡಬ್ಲಿಂಗ್ ಮಾಡುವ ನೆಪದಲ್ಲಿ ಗುತ್ತಿಗೆದಾರ ರಮೇಶ್ ಎಂಬವರಿಗೆ 28 ​​ಲಕ್ಷ ರೂ. ವಂಚಿಸಲಾಗಿದೆ. ವಂಚನೆ ಮಾಡಿದ್ದ ಮಧುಗಿರಿ ಮೂಲದ ವಿಜಯ್, ಕೆರೆಗುಡ್ಡದಹಳ್ಳಿಯ ಕೃಷ್ಣ ಸಿಂಗ್ ಮತ್ತು ಚಾಲಕ ನವೀನ್ ಅವರನ್ನು ಬಂಧಿಸಿದ್ದಾರೆ. ಬಾರಿಶ್ ಹಣ ಅಂತಾ ಪುಂಗಿ ಬಿಟ್ಟಿದ್ದ ಖದೀಮರು ನಮ್ಮತ್ರ ದುಡ್ಡಿನ ಸುರಿಮಳೆಯೇ ಇದೆ. ಆದರೆ ಅದು 90 ದಿನದಲ್ಲಿ ನಾರ್ಮಲ್ ಕಾಗದ ಆಗುತ್ತೆ ಹೀಗಾಗಿ ಅದರ ಖರ್ಚು ಮಾಡಬೇಕು. ನೀವು ನಮಗೆ ಒಂದು ಲಕ್ಷ ರೂ ಕೊಟ್ಟರೆ ಮೂರು ಲಕ್ಷ ರೂ ಕೊಡ್ತೀವಿ. ತೊಂಬತ್ತು ದಿನಗಳ ಒಳಗೆ ಯಾವುದಕ್ಕಾದ್ರು ಖರ್ಚು ಮಾಡಿ ಅಂತಾ ನಂಬಿಸಿದ್ದರು.

ಹಣದ ಸಮೇತ ಖದೀಮರು ಪರಾರಿ

ಆರೋಪಿಗಳ ಮಾತನ್ನು ನಂಬಿದ್ದ ಗುತ್ತಿಗೆದಾರ ರಮೇಶ್, 28 ಲಕ್ಷ 60 ಸಾವಿರ ರೂಪಾಯಿ 8ನೇ ಮೈಲಿ ಬಳಿ ತಂದಿದ್ದರು. ಇಷ್ಟು ಕೊಟ್ಟರೆ ಆಕಡೆ ಈಕಡೆ ಒಂದು ಕೋಟಿ ರೂ ಸಿಗುತ್ತೆ ಅಂತಾ ಅತಿ ಆಸೆ ಇಟ್ಕೊಂಡಿದ್ದರು. ಹೋಟೆಲ್ ಒಂದಕ್ಕೆ ಕರೆದಿದ್ದ ಆರೋಪಿಗಳು ಹಣ ಪಡೆದು ಅದನ್ನು ಚೆಕ್ ಮಾಡ್ಕೊಂಡ್ ಬರ್ತೀವಿ ಅಂತಾ ಹಣದ ಸಮೇತ ಪರಾರಿಯಾಗಿದ್ದರು.

ಇದನ್ನೂ ಓದಿ: ಹೆಚ್ಚಿನ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್; ನಿವೃತ್ತ ಸಂಶೋಧಕನಿಗೆ 5 ಕೋಟಿ ರೂ. ವಂಚನೆ!

ಇನ್ನು ಮೋಸ ಹೋಗಿದ್ದು ಗೊತ್ತಾದಾಗಲೇ ರಮೇಶ್ ಗೆ ಎಚ್ಚರವಾಗಿದೆ. ಬಾಗಲಗುಂಟೆ ಪೊಲೀಸರಿಗೆ ದೂರು. ತನಿಖೆ ನಡೆಸಿದ ಆರೋಪಿ ವಂಚಕರನ್ನ ಬಂಧಿಸಿ ಒಟ್ಟು 40 ಲಕ್ಷ ರೂಪಾಯಿ ಹಣವನ್ನು ರಿಕವರಿ ಮಾಡಿದ್ದಾರೆ. ಕೇವಲ ರಮೇಶ್ ಮಾತ್ರ ಅಲ್ಲ, ಇದೇ ರೀತಿಯ ವಂಚನೆಗೆ ವ್ಯಕ್ತಿ ಕೂಡ 18 ಲಕ್ಷ ರೂಪಾಯಿ ಕಳೆದುಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಯಾರಾದರೂ ಹಿಂಗೆ ಡಬಲ್ ಟ್ರಿಬಲ್ ಹಣ ಕೊಡ್ತೀವಿ ಅಂದರೆ ಆಗಲೇ ಹುಷಾರಾಗಿ. ಹೆಚ್ಚು ಹಣ ಸಿಗುತ್ತೆ ಅಂತಾ ಅತಿ ಆಸೆ ಪಟ್ಟರೆ ಈ ಥರ ನೀವೂ ಮೂರ್ಖರಾಗೋದು ಪಕ್ಕಾ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *