ಡಿಸಿಎಂ ಡಿಕೆ ಶಿವಕುಮಾರ್ ಅವರು ಜೆಪಿ ಪಾರ್ಕ್ನಲ್ಲಿ ‘ಬೆಂಗಳೂರು ನಡಿಗೆ’ ನಡೆಸಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ, ತಮ್ಮ ಬಾಲ್ಯದ ಗೆಳೆಯ ಮಾಧವ್ ನಾಯ್ಕ್ ಅವರನ್ನು ಭೇಟಿಯಾಗಿ ಶಾಲಾ ದಿನಗಳನ್ನು ನೆನಪಿಸಿಕೊಂಡರು ಹಾಗೂ ಪಾರ್ಕ್ನ ಸೌಲಭ್ಯಗಳನ್ನು ಸುಧಾರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಂಗಳೂರು ನಡಿಗೆ ಆರಂಭಿಸಿದ್ದಾರೆ. ಮತ್ತಿಕೆರೆ ಬಳಿಯ ಜೆಪಿ ಪಾರ್ಕ್ನಲ್ಲಿ ವಾಕಿಂಗ್ ಮಾಡುತ್ತಾ ಸಾರ್ವಜನಿಕ ಜೊತೆ ಸಂವಾದ ನಡೆಸುತ್ತಿದ್ದಾರೆ. ಶನಿವಾರ ಲಾಲ್ಬಾಗ್ ನಲ್ಲಿ ಬೆಂಗಳೂರು ನಡಿಗೆ ಮಾಡಿದ್ದರು.

ಇಂದಿನ ಬೆಂಗಳೂರು ನಡಿಗೆಯಲ್ಲಿ ಉಪಮುಖ್ಯಮಂತ್ರಿಗಳಿಗೆ ಬಾಲ್ಯದ ಗೆಳೆಯ ಮಾಧವ್ ನಾಯ್ಕ್ ಅವರನ್ನು ಭೇಟಿಯಾಗಿದ್ದರು. ಮಾಧವ್ ನಾಯ್ಕ್ ಇಂದು ಜೆಪಿ ಪಾರ್ಕ್ನಲ್ಲಿ ವಾಕಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

ಗೆಳೆಯ ಮಾಧವ್ ನಾಯ್ಕ್ ಅವರನ್ನ ನೋಡುತ್ತಿದ್ದಂತೆ ಡಿಕೆ ಶಿವಕುಮಾರ್ ಸಂತಸ ವ್ಯಕ್ತಪಡಿಸಿ ಸ್ನೇಹಿತನ ಕುಶಲೋಪಚಾರ ವಿಚಾರಿಸಿದ್ದರು. ನಂತರ ಎಲ್ಲರೊಂದಿಗೆ ಶಾಲಾ ದಿನಗಳ ಬಗ್ಗೆಯೂ ಡಿಕೆ ಶಿವಕುಮಾರ್ ಮಾತನಾಡಿದರು.

ಇವರು ನನ್ನ ಗೆಳೆಯ ಮಾಧವ್ ನಾಯ್ಕ್ ಎಂದು ಡಿಕೆ ಶಿವಕುಮಾರ್ ಪರಿಚಯಿಸಿದರು. ನಾನು ಆಗಿನ ಕಾಲದಲ್ಲಿಯೇ ಸ್ಕೂಲ್ ಎಲೆಕ್ಷನ್ಗೆ ನಿಂತಿದ್ದೆ. ಆ ಸಂದರ್ಭದಲ್ಲಿ ಮಾಧವ್ ನಾಯ್ಕ್ ಅವರನ್ನೇ ವಿದ್ಯಾರ್ಥಿ ಎಲೆಕ್ಷನ್ ಗೆ ಏಜೆಂಟ್ ಆಗಿ ಕಳುಹಿಸಿದ್ದೇವೆ ಎಂದು ಶಾಲಾ ದಿನಗಳನ್ನು ನೆನಪು ಮಾಡಿಕೊಂಡರು. ನಂತರ ಮಾಧವ್ ನಾಯ್ಕ್ ಜೊತೆಯಲ್ಲಿ ಫೋಟೋ ಸಹ ಕ್ಲಿಕ್ಕಿಸಿಕೊಂಡರು.

ಜೆಪಿ ಪಾರ್ಕ್ ವ್ಯಾಯಾಮ ಜಾಗ ವೀಕ್ಷಣೆ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್, ಈ ಭಾಗದಲ್ಲಿ ಶೆಲ್ಟರ್ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಭಾಗದಲ್ಲಿರುವ ಜಿಮ್ ವಸ್ತುಗಳು ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಸರಿಪಡಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.

Source link
55 ವರ್ಷದ ನಂತರ ಬಾಲ್ಯದ ಗೆಳೆಯನನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್