ಹೊಸ ವರ್ಷಕ್ಕೆ ಕೌಂಡ್​​ಡೌನ್​​: ಬೆಂಗಳೂರಲ್ಲಿ ಅದಾಗಲೇ ಫೀಲ್ಡ್​​ಗೆ ಇಳಿದಿದ್ದೇಕೆ ಖಾಕಿ?

ಹೊಸ ವರ್ಷಕ್ಕೆ ಕೌಂಡ್​​ಡೌನ್​​: ಬೆಂಗಳೂರಲ್ಲಿ ಅದಾಗಲೇ ಫೀಲ್ಡ್​​ಗೆ ಇಳಿದಿದ್ದೇಕೆ ಖಾಕಿ?


ಬೆಂಗಳೂರು, ಡಿಸೆಂಬರ್ 14: 2025 ಇನ್ನೇನು ಕೆಲ ದಿನಗಳಲ್ಲಿ ಮುಗಿಯಲಿಲ್ಲ, 2026ರ ಹೊಸ ವರ್ಷ ಸ್ವಾಗತಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ನ್ಯೂ ಅಯ್ಯರ್‌ಗೆ ವೆಲ್ಕಮ್ ಬೆಂಗಳೂರಿನಲ್ಲಿ ತುಸು ಜೋರಾಗಿಯೇ ಇರಲಿದೆ, ಪಬ್, ಕ್ಲಬ್ ಮತ್ತು ರೆಸ್ಟೋರೆಂಟ್‌ಗಳಿಂದ ಜನ ತುಂಬಿ ತುಳುಕುತ್ತಿರುತ್ತಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಖಾಕಿ ಹದ್ದಿನ ಕಣ್ಣು

ಮಾದಕ ವಸ್ತುಗಳ ಸಾಗಾಟ, ಮಾರಾಟದ ಬಗ್ಗೆ ಮುಖ್ಯವಾಗಿ ಪರಿಶೀಲನೆ ನಡೆಸಲಾಗುತ್ತಿದೆ, ಎಲ್ಲಾ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ತಪಾಸಣೆ ನಡೆಯುತ್ತಿದೆ. ಆಟೋ, ಕಾರು, ಬೈಕ್ ಸೇರಿ ಪ್ರತೀ ವಾಹನವನ್ನೂ ಚೆಕ್ ಮಾಡಲಾಗ್ತಿದೆ. ಖುದ್ದು ಡಿಸಿಪಿ, ಎಸಿಪಿ ಅಧಿಕಾರಿಗಳೇ ಫೀಲ್ಡ್‌ಗೆ ಇಳಿದಿದ್ದು, ಎಂ.ಜಿ. ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲದ 80 ಫೀಟ್ ರಸ್ತೆ, ಇಂದಿರಾನಗರದ 100 ಫೀಟ್ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಬೆನ್ನಲ್ಲೇ ಕೇಂದ್ರದ ತನಿಖಾ ಸಂಸ್ಥೆಗಳು ಎಲ್ಲಾ ರಾಜ್ಯಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿರುವ ಹಿನ್ನಲೆ ಬೆಂಗಳೂರಿನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೊಸ ವರ್ಷದ ಆಚರಣೆ ವೇಳೆ ನಗರದ ಮೇಲೆ ಹದ್ದಿನ ಕಣ್ಣಿಡಲಿರುವ ಡ್ರೋಣ್ ಕ್ಯಾಮರಾಗಳ ತರಬೇತಿ ಸಂಬಂಧ ಪ್ರಾಯೋಗಿಕ ಹಾರಾಟವೂ ನಡೆಯುತ್ತಿದೆ.

ಇದನ್ನೂ ಓದಿ: ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಈ ನಿಯಮ ಪಾಲಿಸಲೇಬೇಕು, ಉಲ್ಲಂಘಿಸಿದ್ರೆ ದಂಡ ಖಂಡಿತ

ಪಬ್, ರೆಸ್ಟೋರೆಂಟ್‌ಗಳ ಬುಕ್ಕಿಂಗ್ ಶುರು

ಬೆಂಗಳೂರು ಸಿಟಿಯಲ್ಲಿ ಹದಿನೈದು ದಿನದ ಮುಂಚೆಯೇ ನ್ಯೂ ಇಯರ್ ವೈಬ್ ಶುರುವಾಗಿದೆ, ಪಬ್, ರೆಸ್ಟೋರೆಂಟ್ ಬುಕ್ಕಿಂಗ್ ಆರಂಭವಾಗಿದೆ. ಹೀಗಾಗಿ ಪಾರ್ಟಿ ಹಾಟ್‌ಸ್ಪಾಟ್‌ಗಳಲ್ಲಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗುತ್ತಿದೆ, ಹೋಟೆಲ್, ರೆಸ್ಟೋರೆಂಟ್ ಮತ್ತು ಪಬ್‌ನಲ್ಲಿನ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸಿಸಿಟಿವಿ, ಅಲ್ಲಿನ ಸೆಕ್ಯುರಿಟಿ ವ್ಯವಸ್ಥೆ, ಬೌನ್ಸರ್ ಗಳ ವ್ಯವಸ್ಥೆ, ಎಮರ್ಜೆನ್ಸಿ ಎಕ್ಸಿಟ್, ಅಗ್ನಿ ಅವಘಡ ಸಂಬಂಧ ಕೈಗೊಂಡಿರುವ ಮುಂಜಾಗ್ರತಾ ಕ್ರಮ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *