Headlines

ನವವಿವಾಹಿತೆ ಶೃತಿ ಅನುಮಾನಾಸ್ಪದ ಸಾವು, ಗಂಡ ಪವನ್ ಕಲ್ಯಾಣ್ ಅರೆಸ್ಟ್: ಪತಿಯಿಂದಲೇ ಕೊಲೆ ಮಾಡಿ ಆತ್ಮ*ಹತ್ಯೆ ಆರೋಪ!

ನವವಿವಾಹಿತೆ ಶೃತಿ ಅನುಮಾನಾಸ್ಪದ ಸಾವು, ಗಂಡ ಪವನ್ ಕಲ್ಯಾಣ್ ಅರೆಸ್ಟ್: ಪತಿಯಿಂದಲೇ ಕೊಲೆ ಮಾಡಿ ಆತ್ಮ*ಹತ್ಯೆ ಆರೋಪ!

ನವವಿವಾಹಿತೆ ಶೃತಿ ಅನುಮಾನಾಸ್ಪದ ಸಾವು, ಗಂಡ ಪವನ್ ಕಲ್ಯಾಣ್ ಅರೆಸ್ಟ್: ಪತಿಯಿಂದಲೇ ಕೊಲೆ ಮಾಡಿ ಆತ್ಮ*ಹತ್ಯೆ ಆರೋಪ!

ಬೆಂಗಳೂರಿನ ಯಲಹಂಕದಲ್ಲಿ 24 ವರ್ಷದ ನವವಿವಾಹಿತೆ ಶೃತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವರದಕ್ಷಿಣೆ ಕಿರುಕುಳದಿಂದ ಪತಿ ಪವನ್ ಕಲ್ಯಾಣ್ ಮತ್ತು ಆತನ ಕುಟುಂಬವೇ ಕೊಲೆ ಮಾಡಿ ಆತ್ಮ*ಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

ಬೆಂಗಳೂರು (ಮಾ.15): ನಗರದ ಯಲಹಂಕ ನ್ಯೂ ಟೌನ್ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, 24 ವರ್ಷದ ನವವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದನ್ನು ಆತ್ಮ*ಹತ್ಯೆ ಎಂದು ಬಿಂಬಿಸಲು ಪತಿ ಮತ್ತು ಕುಟುಂಬಸ್ಥರು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಸದ್ಯ ಯಲಹಂಕ ನ್ಯೂ ಟೌನ್ ಪೊಲೀಸರು ಮೃತಳ ಪತಿ ಪವನ್ ಕಲ್ಯಾಣ್ ಎಂಬಾತನನ್ನು ಬಂಧಿಸಿದ್ದಾರೆ.

ಯಲಹಂಕ ನ್ಯೂ ಟೌನ್‌ನ ಬೃಂದಾವನ ಲೇಔಟ್‌ನಲ್ಲಿ ವಾಸವಿದ್ದ ಶೃತಿ (24) ಮೃತಪಟ್ಟ ದುರ್ದೈವಿ. ಕಳೆದ 2024ರ ಡಿಸೆಂಬರ್‌ನಲ್ಲಿ ಪವನ್ ಕಲ್ಯಾಣ್ ಮತ್ತು ಶೃತಿ ಅವರ ವಿವಾಹ ಅತ್ಯಂತ ಸಡಗರದಿಂದ ನೆರವೇರಿತ್ತು. ಮದುವೆಯಾದ ಹೊಸತರಲ್ಲಿ ಅನ್ಯೋನ್ಯವಾಗಿದ್ದ ದಂಪತಿಗಳ ನಡುವೆ ಕೆಲವೇ ತಿಂಗಳುಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಶುಕ್ರವಾರ ಶೃತಿ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡರೂ, ಶೃತಿಯ ಪೋಷಕರು ಇದು ವ್ಯವಸ್ಥಿತ ಕೊಲೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಮೃತರ ಕುಟುಂಬಸ್ಥರ ಆರೋಪದ ಪ್ರಕಾರ, ಮದುವೆಯಾದ ಕೆಲವೇ ದಿನಗಳಿಂದ ಪವನ್ ಕಲ್ಯಾಣ್ ಮತ್ತು ಆತನ ಕುಟುಂಬದವರು ಶೃತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಮುಖ್ಯವಾಗಿ ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಈ ವಿಷಯವಾಗಿ ಶೃತಿ ಮತ್ತು ಪತಿ ಕುಟುಂಬದ ನಡುವೆ ಪದೇ ಪದೇ ಜಗಳಗಳು ನಡೆಯುತ್ತಿದ್ದವು. ಈ ಹಿಂದೆ ಮನೆಯ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಕೂಡ ಮಾಡಲಾಗಿತ್ತು. ಜಗಳ ಬಿಟ್ಟು ಸುಖವಾಗಿ ಸಂಸಾರ ನಡೆಸುವಂತೆ ಬುದ್ಧಿವಾದ ಹೇಳಿ ಕಳುಹಿಸಲಾಗಿತ್ತು. ಆದರೂ ಪವನ್ ಕಲ್ಯಾಣ್ ತನ್ನ ಚಾಳಿ ಮುಂದುವರಿಸಿದ್ದ ಎನ್ನಲಾಗಿದೆ.

’ನನ್ನ ಮಗಳನ್ನು ಪವನ್ ಕಲ್ಯಾಣ್ ಮತ್ತು ಆತನ ಕುಟುಂಬದವರೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಪ್ರಕರಣವನ್ನು ಆತ್ಮ*ಹತ್ಯೆ ಎಂದು ತೋರಿಸಲು ಶವವನ್ನು ನೇಣು ಹಾಕಿದ್ದಾರೆ’ ಎಂದು ಶೃತಿಯ ತಂದೆ-ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಶೃತಿಯ ದೇಹದ ಮೇಲೆ ಕೆಲವು ಗಾಯದ ಗುರುತುಗಳು ಕಂಡುಬಂದಿದ್ದು, ಇದು ಸಾವಿನ ಬಗ್ಗೆ ಹೆಚ್ಚಿನ ಅನುಮಾನಗಳನ್ನು ಹುಟ್ಟುಹಾಕಿದೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಯಲಹಂಕ ನ್ಯೂ ಟೌನ್ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತರ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪತಿ ಪವನ್ ಕಲ್ಯಾಣ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ BNS 103(1) (ಕೊಲೆ), 3(5) (ಸಮಾನ ಉದ್ದೇಶದಿಂದ ಎಸಗಿದ ಕೃತ್ಯ), ಹಾಗೂ 80(8) (ವರದಕ್ಷಿಣೆ ಸಾವು ಅಥವಾ ವಿವಾಹಿತ ಮಹಿಳೆಗೆ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಶೃತಿ ಸಾವಿನ ಅಸಲಿ ರಹಸ್ಯ ಹೊರಬೀಳಲಿದೆ. ಮಗಳ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.

Source link

Leave a Reply

Your email address will not be published. Required fields are marked *