ಬೆಂಗಳೂರು, ಜನವರಿ 20: ವಿದೇಶದಲ್ಲಿ ಉದ್ಯೋಗಕ್ಕೆಂದು ತೆರಳಿ ಅಲ್ಲಿ ಕೈ ತುಂಬಾ ಸಂಬಳ ಪಡೆದುಕೊಳ್ತಾರೆ. ಆದರೆ ಮತ್ತೆ ಭಾರತಕ್ಕೆ ಮರಳುವ ಸಂದರ್ಭ ಬಂದಾಗ ಮೊದಲು ಯೋಚಿಸುವುದೇ ಸಂಬಳದ ಬಗ್ಗೆ. ಭಾರತದಲ್ಲಿ ಕಡಿಮೆ ಸಂಬಳಕ್ಕೆ ಹೇಗೆ ಹೊಂದಿಕೊಳ್ಳೋದು ಎನ್ನುವ ಆಲೋಚನೆ ಬರುವುದು ಸಹಜ. ಆದರೆ ಇಲ್ಲೊಬ್ಬ ಅನಿವಾಸಿ ಭಾರತೀಯನದ್ದು(NRI) ಅದೇ ಪರಿಸ್ಥಿತಿ. ಅಮೇರಿಕಾದಲ್ಲಿ ನೆಲೆಸಿರುವ ಎನ್.ಆರ್.ಐ ಬೆಂಗಳೂರಿನಲ್ಲಿ (ಬೆಂಗಳೂರು) 90 ಲಕ್ಷ ರೂ ಉತ್ತಮ ಸಂಬಳವೇ ಎಂಬ ಪ್ರಶ್ನೆ ಕೇಳಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಚರ್ಚೆಗೆ ಕಾರಣವಾಗಿದೆ.
ರಿಟರ್ನ್ ಟು ಇಂಡಿಯಾ (ಭಾರತಕ್ಕೆ ಹಿಂತಿರುಗಿ) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ನಶೀರ್ಷಿಕೆಯಲ್ಲಿ ಭಾರತಕ್ಕೆ ಹಿಂದಿರುಗಿದವರಲ್ಲಿ ಬೆಂಗಳೂರಿನಲ್ಲಿ 90 ಲಕ್ಷ ಉತ್ತಮ ಸಂಬಳವೇ? (ಪಿಹೆಚ್ ಡಿ + 12 ವರ್ಷಗಳು) ಎಂದು ಪ್ರಶ್ನೆ ಕೇಳಿದ್ದಾರೆ.
ಪೋಸ್ಟ್ ವೈರಲ್ ಇಲ್ಲಿದೆ

ಈ ಪೋಸ್ಟ್‌ನಲ್ಲಿ ಅನಿವಾಸಿ ಭಾರತೀಯರು ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಮಾಡಿದ್ದು, ಒಂದು ವಿಶೇಷ ಕ್ಷೇತ್ರದಲ್ಲಿ 12 ವರ್ಷಗಳ ಕಾಲ ಅನುಭವ ಹೊಂದಿರುವುದನ್ನು ಉಲ್ಲೇಖಿಸಿದ್ದಾರೆ. ಸದ್ಯ ಅಮೆರಿಕದಲ್ಲಿ ವರ್ಷಕ್ಕೆ ಅಂದಾಜು 1.60 ಕೋಟಿ ರೂಪಾಯಿ ($190,000) ಸಂಬಳ ಉದ್ಯೋಗದಲ್ಲಿದ್ದು, ಇದೀಗ ಬೆಂಗಳೂರಿಗೆ ಮರಳಲು ಯೋಚಿಸಲಾಗಿದೆ ಎಂದು ಹೇಳಲಾಗಿದೆ. ತಮ್ಮಾದ ತಂದೆ ತಾಯಿಯನ್ನು ನೋಡಿಕೊಳ್ಳಲು ಬೆಂಗಳೂರಿಗೆ ಬರುವವರಿದ್ದಾರೆ. ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯಲ್ಲಿ ವರ್ಷಕ್ಕೆ 90 ಲಕ್ಷ ರೂಪಾಯಿ ಇರುವ ಉದ್ಯೋಗವಿದೆ. ಇದರಲ್ಲಿ 74 ಲಕ್ಷ ರೂಪಾಯಿ ಸಂಬಳವಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಲು, ಮಗುವಿನ ಶೈಕ್ಷಣಿಕ ವೆಚ್ಚಗಳನ್ನು ಭರಿಸಿ, ಉತ್ತಮ ಜೀವನ ನಡೆಸಲು ಈ 90 ಲಕ್ಷ ರೂಪಾಯಿ ಸಂಬಳ ಸಾಕಾ?. ಇದು ಯೋಗ್ಯವಾದ ಕೊಡುಗೆಯನ್ನು ದಯವಿಟ್ಟು ಕುರಿತು ಸ್ವಲ್ಪ ಹೇಳಬಹುದೇ? ನಾನು ಮತ್ತು ನಾನು ನಿರ್ವಹಿಸಬೇಕಾದ ಪಾತ್ರ ತುಂಬಾ ದೊಡ್ಡದಾಗಿದೆ, ಆದ್ದರಿಂದ ನನ್ನ ವೃತ್ತಿಜೀವನದ ಮೇಲೆ ಅದರ ಪರಿಣಾಮವು ಅಗಾಧವಾಗಿದೆ. ಆದರೆ ನಾವು ಆರ್ಥಿಕ ಆಯ್ಕೆ ಕೆಟ್ಟದಾಗಿದ್ದರೆ. ನಾನು ಈ ಪ್ರಸ್ತಾಪವನ್ನು ಸ್ವೀಕರಿಸಲು ಸಾಧ್ಯವಿಲ್ಲ. ಯಾವುದೇ ಸಲಹೆಗಳನ್ನು ಸ್ವೀಕರಿಸದಿದ್ದರೆ ಎಂದು ಬರೆದಿರುವುದನ್ನು ಕಾಣಬಹುದು.
ಇದನ್ನೂ ಓದಿ: ಹೆಣ್ಮಕ್ಕಳಿಗೆ ಬೆಂಗಳೂರಿನ ಈ ಪ್ರದೇಶ ಸೇಫ್ ಅಲ್ಲ; ಮಹಿಳೆ ಹೀಗೆನ್ನಲು ಕಾರಣ ಇದೆ ನೋಡಿ
ಈ ಪೋಸ್ಟ್ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ಅದನ್ನು ಅತಿಯಾಗಿ ಯೋಚಿಸಬೇಡಿ, ಇದು ಒಳ್ಳೆಯ ನಡೆ. ನೀವು ಯಾವಾಗ ಬೇಕಾದರೂ ಹಿಂತಿರುಗಬಹುದು ಏಕೆಂದರೆ ನಿಮ್ಮ ಬಳಿ ಯುಎಸ್‌ಡಿ ಪಾಸ್‌ಪೋರ್ಟ್ ಇದೆ, ಇದು ಎಲ್ಲರಿಗೂ ಇರುವ ಐಷಾರಾಮಿ ವಸ್ತುವಲ್ಲ ಎಂದು ಹೇಳಿದರು. ಮತ್ತೊಬ್ಬರು, ಪಿಎಚ್‌ಡಿ ಮತ್ತು 12 ವರ್ಷದ ಅನುಭವಕ್ಕೆ 90 ಲಕ್ಷ ಕಡಿಮೆ. ಬೆಂಗಳೂರಿನಲ್ಲಿ ಐಟಿ ಕ್ಷೇತ್ರದಲ್ಲಿ ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ 1.5 ಕೋಟಿಗಿಂತ ಹೆಚ್ಚು ಸಂಬಳವಿದೆ. ನೀವು ಕನಿಷ್ಟ 1.8 ಕೋಟಿ ರೂಪಾಯಿಗೆ ಬೇಡಿಕೆ ಇಡಬೇಕು. ಈ ಕೆಲಸಕ್ಕೆ ಒಪ್ಪಿಕೊಳ್ಳಬೇಡಿ ಎಂದು ಸಲಹೆ ನೀಡಿ. ಇತರರು, ಬೆಂಗಳೂರಿನಲ್ಲಿ ತುಂಬಾ 90 ಲಕ್ಷ ಸಂಬಳ ಎಂದರೆ ಕಡಿಮೆ. ಹೀಗಾಗಿ ನೀವು ನಿಮ್ಮ ಬಾಸ್ ತೋಟಕ್ಕೆ ನೀರು ಹಾಕಿ ಇನ್ನೂ ಸ್ವಲ್ಪ ಹೆಚ್ಚು ಸಂಬಳ ಕೇಳಿ ವ್ಯಂಗ್ಯವಾಗಿ ಕಾಮೆಂಟ್ ಮಾಡಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ