Headlines

ಪ್ರೀತಿಸಿದ ಹುಡುಗನ ವಶೀಕರಣ ಮಾಡುವುದಾಗಿ ನಂಬಿಸಿ ಯುವತಿಗೆ ಲಕ್ಷ ಲಕ್ಷ ವಂಚನೆ!

ಪ್ರೀತಿಸಿದ ಹುಡುಗನ ವಶೀಕರಣ ಮಾಡುವುದಾಗಿ ನಂಬಿಸಿ ಯುವತಿಗೆ  ಲಕ್ಷ ಲಕ್ಷ ವಂಚನೆ!


ಪ್ರೀತಿಸಿದ ಹುಡುಗನನ್ನು ವಶೀಕರಣ ಮಾಡುವುದಾಗಿ ನಂಬಿಸಿ ಯುವತಿಗೆ 2 ಲಕ್ಷ ರೂ. ವಂಚನೆ!

ಬೆಂಗಳೂರು, ಜನವರಿ 04: ಆನ್‌ಲೈನ್‌ನಲ್ಲಿ ವಶೀಕರಣ ಆಯಡ್ ನಂಬಿ ಯುವತಿಯೊಬ್ಬಳು ಲಕ್ಷ ಲಕ್ಷ ಹಣ ಕಳೆದುಕೊಂಡಳು ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿಸಿದ ಹುಡುಗನನ್ನು ವಶೀಕರಣ ಮಾಡಿಸುವಂತಿದೆ ಕೇಳಿದಾಕೆಯಿಂದ 2 ಲಕ್ಷಕ್ಕೂ ಹೆಚ್ಚು ಹಣ ಪಡೆದ ಆಸಾಮಿ ಮೋಸಮಾಡಿದ್ದಾನೆ. ಈ ಕುರಿತು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನು ಮಾಡ್ತಿಯೋ ಮಾಡಿಕೋ ಎಂದಿದ್ದ ಗುರೂಜಿ

ಕಷ್ಟಕ್ಕೆ ಪರಿಹಾರ ನೀಡುತ್ತೇವೆ ಎಂದು ಕೃಷ್ಣಮೂರ್ತಿ ಗುರೂಜಿ ಎಂಬ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಜಾಹೀರಾತು ನೀಡಲಾಯಿತು. ಜಾಹೀರಾತಿನಲ್ಲಿ ನೀಡಿದ್ದ ಸಂಖ್ಯೆಗೆ ಕರೆ ಮಾಡಿದ ಯುವತಿಯೊಂದಿಗೆ ಚಂದ್ರಶೇಖರ್ ಸುಗತ್ ಗುರೂಜಿ ಎಂದು ತನ್ನನ್ನು ಪರಿಚಯಿಸಿಕೊಂಡ ವ್ಯಕ್ತಿ ಮಾತನಾಡಿದ್ದ.

ಪ್ರೀತಿಸಿದ ಯುವಕ ಸಿಗುತ್ತಾನೆ ಎಂದು ಕೇಳಿದ ಹುಡುಗಿಯ ಬಳಿ ಆತನ ಬಗ್ಗೆ ಮಾಹಿತಿ ಪಡೆದು ಮದುವೆ ಆಗುತ್ತದೆ, ಆದರೆ ಖರ್ಚಾಗುತ್ತದೆ ಎಂದು ಆನ್‌ಲೈನ್ ಮೂಲಕ 2.05 ಲಕ್ಷ ರೂಪಾಯಿ ಪಡೆದಿದ್ದಾನೆ. ನಂತರ ಮತ್ತೆ 4 ಲಕ್ಷ ಕೇಳಿದಾಗ ಅನುಮಾನಗೊಂಡ ಯುವತಿ ಹಣ ಕೇಳಿದರೆ, ಏನು ಮಾಡ್ತಿಯೋ ಮಾಡಿಕೋ ಎಂದು ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಈ ಬಗ್ಗೆ ಯುವತಿ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ ನಿಧಿ ಆಸೆಗೆ ಪೋಷಕರಿಂದಲೇ ಮಗು ಬಲಿಗೆ ಯತ್ನ? 8 ತಿಂಗಳ ಕಂದಮ್ಮನ ರಕ್ಷಣೆ

ಫೈನಾನ್ಸ್ ಹೆಸರಲ್ಲಿ ಮೋಸ

ರಿಲಯಾನ್ಸ್ ಫೈನಾನ್ಸ್ ಹೆಸರಿನಲ್ಲಿ ಕಡಿಮೆ ಬಡ್ಡಿದರದಲ್ಲಿ 75 ಲಕ್ಷದವರೆಗೆ ಸಾಲ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯನ್ನು ವಂಚಿಸಿದ ಪ್ರಕರಣ ಬಯಲಾಗಿದೆ. ಪ್ರೊಸೆಸಿಂಗ್ ಫೀಸ್ ಎಂದು ಸುಮಾರು 30 ಸಾವಿರ ರೂಪಾಯಿ ಪಡೆದ ಬಳಿಕವೂ ಲೋನ್ ನೀಡದ ವಂಚಕರು, ಕಚೇರಿಗೆ ಹಣ ಕೇಳಿದಾಗ ಬನ್ನಿ ಎಂದು ಕರೆದಿದ್ದಾರೆ. ನಂತರ ಅವಾಚ್ಯ ಪದಗಳಿಂದ ನಿಂದಿಸಿ ವಿಕೃತವಾಗಿ ವರ್ತಿಸಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಮಹಿಳೆ ಆರ್.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *