ಮಲ್ಲೇಶ್ವರಂನ ಸಂಪಿಗೆ ರಸ್ತೆ ದುಬಾರಿ: ಪೇ ಆ್ಯಂಡ್​ ಪಾರ್ಕಿಂಗ್​ ವ್ಯವಸ್ಥೆ ಜಾರಿ

ಮಲ್ಲೇಶ್ವರಂನ ಸಂಪಿಗೆ ರಸ್ತೆ ದುಬಾರಿ: ಪೇ ಆ್ಯಂಡ್​ ಪಾರ್ಕಿಂಗ್​ ವ್ಯವಸ್ಥೆ ಜಾರಿ


ಬೆಂಗಳೂರು, ಜನವರಿ 20: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನಗರದ ಭಾಗದಲ್ಲಿ ರಸ್ತೆಬದಿ ಪಾರ್ಕಿಂಗ್ ವ್ಯವಸ್ಥೆ ಸುಗಮಗೊಳಿಸುವ ಗೋಡೆ ಪೇ ಆಯಂಡ್ ಪಾರ್ಕ್ (ಪೇ ಮತ್ತು ಪಾರ್ಕ್) ನಗರದಾದ್ಯಂತ ವಿಸ್ತರಿಸಲು ಮುಂದಾಗಿದೆ. ಇದೀಗ ಶಾಪಿಂಗ್ ಪ್ರಿಯರ ಹಾಟ್ ಸ್ಪಾಟ್ ಮಲ್ಲೇಶ್ವರನ ಸಂಪಿಗೆ ರಸ್ತೆಯಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಮಲ್ಲೇಶ್ವರನ ಸಂಪಿಗೆ ರಸ್ತೆ ಶಾಪಿಂಗ್ ಪ್ರಿಯರ ಹಾಟ್ ಸ್ಪಾಟ್. ಸಂಪಿಗೆ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳು ಸದಾ ವಿವಿಧ ಚಟುವಟಿಕೆಗಳಿಂದ ಗಿಜುಗುಡುತ್ತಿರುತ್ತವೆ. ಆದರೆ ಶಾಪಿಂಗ್ ಅಂತಾ ಕಾರು, ಬೈಕ್‌ಗಳಲ್ಲಿ ಬರುವ ಜನರು ಶೀಘ್ರದಲ್ಲೇ ಪಾರ್ಕಿಂಗ್ ಅಂತಲೇ ಹೆಚ್ಚುವರಿ ಹಣ ಪಡೆಯಬೇಕು.

ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ

ಬೆಂಗಳೂರಿನ ಮಲ್ಲೇಶ್ವರಂ ಐಕಾನಿಕ್ ಸ್ಥಳಗಳಲ್ಲಿ ಒಂದಾಗಿದ್ದರೆ, ಇಲ್ಲಿನ ಸಂಪಿಗೆ ರಸ್ತೆ ಶಾಪಿಂಗ್ ಪ್ರಿಯರಿಗೆ ಅಚ್ಚುಮೆಚ್ಚು. ಕಾರು, ಬೈಕ್‌ಗಳಲ್ಲಿ ಶಾಪಿಂಗ್ ಮಾಡುತ್ತೇನೆ ಅಂತಾ ಗ್ರಾಹಕರು ವಾಹನಗಳನ್ನು ಪಾರ್ಕಿಂಗ್ ಮಾಡಿ ಹೋಗುತ್ತಾರೆ. ಆದರೆ ಈ ರಸ್ತೆಯಲ್ಲಿ ಪೇ ಆ್ಯಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿ ಮಾಡುವುದಕ್ಕೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಮುಂದಾಗಿದೆ.

ಇದನ್ನೂ ಓದಿ: Bengaluru Pay and Park: ಬೆಂಗಳೂರಿನಲ್ಲಿ ವಾಹನ ಪಾರ್ಕ್ ಮಾಡುವವರಿಗೆ ಜಿಬಿಎ ಶಾಕ್!

ಇನ್ನು ಪಶ್ಚಿಮ ನಗರ ಪಾಲಿಕೆ ಟೆಂಡರ್ ಆಹ್ವಾನ ನೀಡಿದ್ದು, ಸಂಪಿಗೆ ರಸ್ತೆ, 11,15 ಹಾಗೂ 18ನೇ ಅಡ್ಡರಸ್ತೆಗಳಲ್ಲಿ ಪಾರ್ಕಿಂಗ್‌ಗೆ ಶುಲ್ಕ ಸಂಗ್ರಹಿಸಲಾಗುತ್ತದೆ. ವಾರ್ಷಿಕ ಪರವಾನಿಗೆ ಬಯಸುವ ಏಜೆನ್ಸಿಗಳಿಗೆ 2.20 ಕೋಟಿ ರೂಪಾಯಿಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆದರೆ ಪಾಲಿಕೆ ನಿರ್ಧಾರದ ವಿರುದ್ಧ ಗ್ರಾಹಕರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ವೈಟ್ ಟ್ಯಾಪಿಂಗ್ ರಸ್ತೆಗಳಲ್ಲೆಲ್ಲ ಶೀಘ್ರ ಪೇ ಆಯಂಡ್ ಪಾರ್ಕಿಂಗ್? ದುಬಾರಿ ಸರಿದೂಗಿಸಲು ಜಿಬಿಎ ಹೊಸ ಯೋಜನೆ

ಬಟ್ಟೆ, ಚಪ್ಪಲಿ, ಅಲಂಕಾರಿಕ ವಸ್ತುಗಳು, ಆಹಾರ ಉತ್ಪನ್ನಗಳ ಖರೀದಿಗೆ ಮುಗಿಬೀಳುತ್ತಿದ್ದ ಗ್ರಾಹಕರ ಸಂಪಿಗೆ ರಸ್ತೆ ಹೆಚ್ಚು ದುಬಾರಿಯಾಗಲಿದೆ. ಉಚಿತವಾಗಿ ಪಾರ್ಕ್ ಮಾಡಿ ಹೋಗುತ್ತಿದ್ದ ಜನರಿಗೆ ಈ ಹೊರೆ ಬಿಸಿಮುಟ್ಟಿಸುತ್ತದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *