Bengaluru: ಬಾಡಿಗೆ ಮನೆ ಹುಡುಕಲು ಹೋದಾಗ ಕಳ್ಳತನ ನಡೆಸಿ ಸಿಕ್ಕಿಬಿದ್ದ ಫೋಟೋಗ್ರಾಫರ್​​

Bengaluru: ಬಾಡಿಗೆ ಮನೆ ಹುಡುಕಲು ಹೋದಾಗ ಕಳ್ಳತನ ನಡೆಸಿ ಸಿಕ್ಕಿಬಿದ್ದ ಫೋಟೋಗ್ರಾಫರ್​​


ಬೆಂಗಳೂರು, ಫೆಬ್ರವರಿ 17: ಬಾಡಿಗೆ ಮನೆ ಹುಡುಕಲು ಹೋದ ವ್ಯಕ್ತಿ 55 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣ ಕಳ್ಳತನ ನಡೆಸಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ವೈಟ್ ಫೀಲ್ಡ್ ನಿವಾಸಿ ಕಿರಣ್ ಬಂಧಿತ ಆರೋಪಿ, ಮಲೆಮಹದೇಶ್ವರ ದರ್ಶನ ಮಾಡಿ ಹಿಂದಿರುಗಿದ್ದ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಫೋಟೋ ಸ್ಟುಡಿಯೋ ನಡೆಸುತ್ತಿದ್ದ ಕಿರಣ್, ಕೋವಿಡ್ ವೇಳೆ ನಷ್ಟ ಉಂಟಾದ ಕಾರಣ ಅದನ್ನು ಮುಚ್ಚಿದೆ. ಕ್ಯಾಮರಾ ಇದ್ದ ಕಾರಣ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನಂಬಿ ಜೀವನ ನಡೆಸುತ್ತಿದ್ದ.

ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗೊಂಡನಹಳ್ಳಿಯಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದ ಕಿರಣ್, ಸಾಫ್ಟ್ ವೇರ್ ನಲ್ಲಿ ಜಗದೀಶ್ ಎಂಬವರ ಮನೆ ಬಳಿ ಮನೆ ಎಂಬ ಬೋರ್ಡ್ ನೋಡಿದ್ದಾನೆ. ಈ ಹಿನ್ನೆಲೆ ವಿಚಾರಿಸಲೆಂದು ಮನೆ ಬಳಿ ಹೋದಾಗ ಶೂ ರ್ಯಾಕ್ ನಲ್ಲಿ ಮನೆಯ ಬೀಗ ಆತನಿಗೆ ಕಂಡಿದೆ. ಅದನ್ನು ಬಳಸಿ ಮನೆಯ ಬಾಗಿಲು ತೆರೆದು ಒಳಗೆ ಹೋಗಿದ್ದ ಈತ, ಮನೆಯಲ್ಲಿ ಚಿನ್ನಾಭರಣ ಕದ್ದಿದ್ದ. ಘಟನೆ ಬೆಳಕಿಗೆ ಬರುತ್ತಿರುವ ದೂರು ಕಳ್ಳತನಿರುವ ಬಗ್ಗೆ ಮನೆ ಮಾಲೀಕ ಜಗದೀಶ್ ಪೊಲೀಸರಿಗೆ ನೀಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿ ಆರೋಪಿಯನ್ನ ಖಾಕಿ ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: ಪೊಲೀಸರ ಸೋಗಲ್ಲಿ ಉದ್ಯಮಿ ಮನೆಗೆ ನುಗ್ಗಿ 20 ಲಕ್ಷ ನಗದು, ಅರ್ಧ ಕೆಜಿ ಚಿನ್ನಾಭರಣ ದರೋಡೆ

ಕಳ್ಳತನ ನಡೆಸಿ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಆರೋಪಿ

ಬಾಡಿಗೆ ಮನೆ ವಿಚಾರಿಸಲು ಹೋಗಿ ಕಳ್ಳತನ ನಡೆಸಿದ್ದ ಆರೋಪಿ ಕಿರಣ್ ಗೆ ತಾನು ಮಾಡಿದ ಕೆಲಸದ ಬಗ್ಗೆ ನಂತರ ಪಾಪ ಪತ್ತೆಯಾಗಿತ್ತು. ಹೀಗಾಗಿ ಆ ಬಳಿಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನವನ್ನು ಈತ ಮಾಡಿದ್ದ. ಅದಾಗಲೇ ಆರೋಪಿಯ ಜಾಡು ಪತ್ತೆಗೆ ಪೊಲೀಸರು ಈತ ಮಲೆಮಹದೇಶ್ವರ ಬೆಟ್ಟದಿಂದ ಬರುತ್ತಿದ್ದಂತೆ ಖೆಡ್ಡಾಗೆ ಬಿದ್ದಿದ್ದಾರೆ. ಮಾಡಬಾರದ್ದನ್ನು ಮಾಡಲು ಹೋದ ಫೋಟೋಗ್ರಾಪರ್ ಈಗ ಖಾಕಿ ಕೈಲಿ ತಗಲಾಕಿಕೊಂಡಿದ್ದು, ಘಟನೆಯ ಬಗ್ಗೆ ಆರೋಪಿಯ ವಿಚಾರಣೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *