ಬೆಂಗಳೂರು, (ನವೆಂಬರ್ 19): ಬೆಂಗಳೂರಿನಲ್ಲಿ ಹಾಡಹಗಲೇ 7 ಕೋಟಿ 11ಲಕ್ಷ ರೂ. ರಾಬರಿ ಪ್ರಕರಣದಲ್ಲಿ ಇದೀಗ ಹಲವು ಅನುಮಾನಗಳಿವೆ. ಡೈರಿ ಸರ್ಕಲ್ ಬಳಿ ಬರೋಬ್ಬರಿ 7 ಕೋಟಿ 11ಲಕ್ಷ ರಾಬರಿ ಪ್ರಕರಣದಲ್ಲಿ ಹಣ ತುಂಬಿದ ಸಿಎಂಎಸ್ ಚಾಲಕನ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ವಾಹನದಲ್ಲಿದ್ದ ಚಾಲಕನನ್ನು ಸಿಬ್ಬಂದಿಯನ್ಜು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇನ್ನು ಪ್ರಕರಣ ಸಂಬಂಧ ಪೊಲೀಸ್ ಇಲಾಖೆ, ಶಂಕಿತರ ಫೋಟೋ ಬಿಡುಗಡೆ ಮಾಡಿದ್ದು, ಶಂಕಿತರ ಫೋಟೋ ಟಿವಿ9ಗೆ ಲಭ್ಯವಾಗಿದೆ. ಶಂಕಿತರ ಫೋಟೋಗಳನ್ನು ಹಿಡಿದುಕೊಂಡು ತನಿಖೆ ಪತ್ತೆ.