Headlines

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 1.5 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 1.5 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ


ಬೆಂಗಳೂರು, ಫೆಬ್ರವರಿ 17: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಕೋರರ ಹಾವಳಿ ಮುಂದುವರಿದಿದೆ. ಮೇಲಿಂದ ಮೇಲೆ ನಡೆಯುತ್ತಿರುವ ಖಾಕಿ ಕಾರ್ಯಾಚರಣೆಗೂ ಬಗ್ಗದ ಖದೀಮರು ಪೊಲೀಸರ ಕಣ್ತಪ್ಪಿಸಿ ದಂಧೆ ಮುಂದುವರಿಸಿದ್ದಾರೆ. ನಗರದ ವಿವಿಧೆಡೆ ಡ್ರಗ್ಸ್ ಮಾರುತ್ತಿದ್ದ ಸೆನೆಗಲ್ ಮೂಲದ ಬ್ಯಾರಿ ಯಾ ಅಲಿಯಾಸ್ ಒಕೊಲಿಯನ್ನು ಬಂಧಿಸಲಾಗಿದೆ, ಆರೋಪಿಯಿಂದ ಬರೋಬ್ಬರಿ ಒಂದು ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. 29 ಎಲ್‌ಎಸ್‌ಡಿ ಮಾತ್ರೆ, 546 ಗ್ರಾಂ ಎಂಡಿಎಂಎ, 152 ಗ್ರಾಂ ಹೈಡ್ರೋ ಗಾಂಜಾ, 131 ಗ್ರಾಂ ಕೊಕೇನ್, 27 ಎಲ್‌ಎಸ್‌ಡಿ ಸ್ಟ್ರಿಪ್ಸ್‌ನ ವಶಕ್ಕೆ ಪಡೆಯಲಾಗಿದೆ.

ಆರೋಪಿ ಎರಡನೇ ಬಾರಿಗೆ ಬಂಧನಕ್ಕೆ ಒಳಗಾಗಿದ್ದು, ಈ ಹಿಂದೆಯೂ ಈತನನ್ನು ಬಂಧಿಸಿ ಗಡಿಪಾರು ಮಾಡಲಾಗಿದೆ. ಆದರೆ ಮತ್ತೆ ಡ್ರಗ್ಸ್ ಮಾರಾಟದಲ್ಲಿ ನಿರತನಾಗಿದ್ದ ಈತ ಖಾಕಿ ಕೈಗೆ ಸಿಕ್ಕಿಬಿದ್ದಿದ್ದು, ಮತ್ತೊಂದು ಹೆಸರಿನಲ್ಲಿ ಆರೋಪಿ ದಾಖಲಾತಿ ಮಾಡಿಸಿಕೊಂಡಿದ್ದಾನೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಕ್ಯಾಂಡಿ ಪ್ಯಾಕೆಟ್‌ಗಳಲ್ಲಿ ಬ್ಯಾಂಕಾಕ್‌ನಿಂದ ಬರುತ್ತಿತ್ತು ಡ್ರಗ್ಸ್! ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರ ಬಂಧನ

ಮಾದಕದ್ರವ್ಯ ಸಾಗಾಟ: ವಿದೇಶಿ ಮಹಿಳೆಯ ಬಂಧನ

ಬೆಂಗಳೂರು ವಿಮಾನ ನಿಲ್ದಾಣ

ವಶಕ್ಕೆ ಪಡೆಯಲಾದ ಮಾದಕ ವಸ್ತು

ಅಕ್ರಮವಾಗಿ ಬೆಂಗಳೂರಿಗೆ ಮಾದಕ ದ್ರವ್ಯ ಸಾಗಣೆ ಮಾಡುತ್ತಿರುವ ವಿದೇಶಿ ಮಹಿಳೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಕಾಶ್ ಏರ್ ಲೈನ್ಸ್ ನಲ್ಲಿ ಆಗಮಿಸಿದ್ದ ಮಹಿಳಾ ಪ್ರಯಾಣಿಕ ಬಳಿ ಸುಮಾರು 2.5 ಕೆಜಿ ಮೆಥಾಂಪೇಟಮೈನ್ ಗಾಂಜಾವನ್ನು ಸೀಜ್ ಮಾಡಲಾಗಿದೆ. ವಶಕ್ಕೆ ಪಡೆಯಲಾದ ಮಹಿಳೆ ನೈಜಿರಿಯಾ ಮೂಲದ ವೆರೋನಿಕಾ ಎಮ್ಯಾನುಯೆಲ್ ಎಂದು ಗೊತ್ತಾಗಿದ್ದು, ಆಕೆಯ ವಿಚಾರಣೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *