Headlines

ನಾಕಾಬಂದಿ ಹಾಕಿ ಅಡ್ಡಹಾಕಿದ ಪೊಲೀಸ್: ಈರುಳ್ಳಿ ಮೂಟೆಯಲ್ಲಿ ಸಿಕ್ಕಿತ್ತು ಚೀನಾಗೆ ಕಳ್ಳಸಾಗಣೆಯಾಗಲಿದ್ದ 750 ಕೆಜಿ ಶ್ರೀಗಂಧ!

ನಾಕಾಬಂದಿ ಹಾಕಿ ಅಡ್ಡಹಾಕಿದ ಪೊಲೀಸ್: ಈರುಳ್ಳಿ ಮೂಟೆಯಲ್ಲಿ ಸಿಕ್ಕಿತ್ತು ಚೀನಾಗೆ ಕಳ್ಳಸಾಗಣೆಯಾಗಲಿದ್ದ 750 ಕೆಜಿ ಶ್ರೀಗಂಧ!


ಸಿದ್ದಾಪುರ ಪೊಲೀಸ್ ಠಾಣೆ ಹಾಗೂ ಶ್ರೀಗಂಧ ಸಾಗಿಸುತ್ತಿದ್ದ

ಬೆಂಗಳೂರು, ಅಕ್ಟೋಬರ್ 27: ಬೆಂಗಳೂರು (ಬೆಂಗಳೂರು) ಸಿದ್ದಾಪುರ, ನಾಕಬಂದಿ ಹಾಕಿ ಪರಿಶೀಲನೆ ನಡೆಸಿದರು. ಅಷ್ಟರಲ್ಲಿ ಒಂದು ಪಿಕ್ ಅಪ್ ವಾಹನ ವೇಗವಾಗಿ ಬಂದು ಪೊಲೀಸರ ಮುಂದೆ ನಿಂತಿತ್ತು. ಚಾಲಕನ ಮುಖದಲ್ಲಿ ಅತಿಯಾದ ಆತ್ಮವಿಶ್ವಾಸ ಕಾಣಿಸಿತ್ತು. ಏಕೆಂದರೆ ಪಿಕ್ ಅಪ್ ವಾಹನದಲ್ಲಿ ಇದ್ದದ್ದು ಆನ್ ಮೂಟೆಗಳು. ಅನುಮಾನ ಬಂದ ಕಾರಣ ಪಿಕ್ ಅಪ್ ವಾಹನ ಪರಿಶೀಲನೆ ನಡೆಸಿದ್ದಾರೆ. ಈರುಳ್ಳಿ ಮೂಟೆಗಳನ್ನು ಸರಿಸಿ ಕೆಳಭಾಗದಲ್ಲಿ ಏನಿದೆ ಎಂದು ನೋಡಿದ್ದಾರೆ. ಅಲ್ಲಿ ಕಾಣಿಸಿದ ವಸ್ತು ಒಂದು ಕ್ಷಣ ದಂಗಾಗಿ ಹೋಗುವಂತೆ ಮಾಡಿತ್ತು. ಏಕೆಂದರೆ, ಈರುಳ್ಳಿ ಮೂಟೆ ಅಡಿಯಲ್ಲಿ ಶ್ರೀಗಂಧದ ಮೂಟೆಯೇ ಇತ್ತು.

ಪುಷ್ಪಾ ಸಿನಿಮಾ ಸ್ಟೈಲ್‌ನಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಚೀಲದ ಅಡಿಯಲ್ಲಿ ಹಾಕಿ ಮೇಲೆ ಈರುಳ್ಳಿ ತುಂಬಿ ಸಾಗಿಸಲಾಯಿತು. ಆಂಧ್ರ ಪ್ರದೇಶದ ಕರ್ನೂಲ್ ನಿಂದ ಬೆಂಗಳೂರಿಗೆ ಶ್ರೀಗಂಧವನ್ನು ತಂದು ಇನ್ನೇನು ಗಮ್ಯ ತಲುಪುವಷ್ಟರಲ್ಲಿ ನಾಲ್ವರ ಗ್ಯಾಂಗ್ ಮಾಲು ಸಮೇತ ಪೊಲೀಸ್ ಬಲೆಗೆ ಬಿದ್ದಿದೆ.

ಆಂಧ್ರ ಪ್ರದೇಶದಿಂದ ಚೀನಾಗೆ ಶ್ರೀಗಂಧ ಕಳ್ಳಸಾಗಣೆ

ಸಿರಾಜ್ ಎಂಬಾತ ತನ್ನ ಗ್ಯಾಂಗ್‌ನೊಂದಿಗೆ ಆಂಧ್ರ ಪ್ರದೇಶದ ಕರ್ನೂಲ್ ಕಾಡುಗಳಲ್ಲಿ ಶ್ರೀಗಂಧ ಕಡಿದು ಈರುಳ್ಳಿ ಮಾರಾಟಗಾರ ವೇಷದಲ್ಲಿ ಬೆಂಗಳೂರಿಗೆ ತಂದು ಇಲ್ಲಿ ಚೀನಾಕ್ಕೆ ಪೂರೈಕೆ ಮಾಡಲಾಗುತ್ತಿದೆ. ಸಿದ್ಧಾಪುರ ಪೊಲೀಸರು ನಾಕಾಬಂದಿ ಹಾಕಿ ಪರಿಶೀಲನೆ ನಡೆಸಿದಾಗ 18 ಶ್ರೀಗಂಧದ ಮರದ ತುಂಡುಗಳು ಬ್ಯಾಗಿದ್ದು, ಅವರಿಗೆ ಜಪ್ತಿ ಮಾಡಲಾಗಿದೆ. ಆಂಧ್ರದ ಸಿರಾಜ್ ಎಂಬ ಗ್ಯಾಂಗ್ ಸದಸ್ಯರೊಂದಿಗೆ ಶ್ರೀಗಂಧ ಕಡಿದು, ಅಕ್ರಮವಾಗಿ ಖರಿದಿ ಮಾಡಿ ಬೆಂಗಳೂರಿನ ಡೀಲರ್‌ಗೆ ತಲುಪಿಸಿ ನಂತರ ಆತನ ಮೂಲಕ ಚೀನಾಗೆ ಕಳುಹಿಸುತ್ತಿದ್ದರು. ಸದ್ಯ ಶೇಖ್ ಶಾರೂಕ್, ಶೇಖ್ ಅಬ್ದುಲ್, ಪರಮೇಶ್, ರಾಮ್ ಭೂಪಾಲ್ ಎಂಬ ನಾಲ್ವರು ಶ್ರೀಗಂಧ ಸ್ಮಗ್ಲರ್‌ಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿಸಿಬಿ ಮೆಗಾ ಬೇಟೆ: 5.5 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ; ಇಬ್ಬರು ಅರೆಸ್ಟ್

ಶ್ರೀಗಂಧ ಅಕ್ರಮ ಸಾಗಾಟದ ಜಾಲದ ತನಿಖೆ ಆರಂಭಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಬೆಂಗಳೂರಿನ ಡೀಲರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *