ಬೆಂಗಳೂರಿನ ರಸ್ತೆ ಗುಂಡಿಯಿಂದ ಕೈ-ಕಾಲು ಮುರಿದುಕೊಂಡ ಬೈಕ್​​ ಸವಾರ, 6 ಲಕ್ಷ ರೂ. ಆಸ್ಪತ್ರೆ ಬಿಲ್‌

ಬೆಂಗಳೂರಿನ ರಸ್ತೆ ಗುಂಡಿಯಿಂದ ಕೈ-ಕಾಲು ಮುರಿದುಕೊಂಡ ಬೈಕ್​​ ಸವಾರ, 6 ಲಕ್ಷ ರೂ. ಆಸ್ಪತ್ರೆ ಬಿಲ್‌


ಬೆಂಗಳೂರಿನ ಗುಂಡಿಗಳು (ಬೆಂಗಳೂರು ರಸ್ತೆಗಳ ಬಿಕ್ಕಟ್ಟು) ಮತ್ತೆ ಚರ್ಚೆಗೆ ಬಂದಿವೆ. ಈ ಹಿಂದೆ ಬೆಂಗಳೂರಿನ ಹೊಂಡಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಗುಂಡಿಗಳು ಮತ್ತೆ ಚರ್ಚೆಗೆ ಬರಲು ಈ ಘಟನೆ ಕಾರಣ. ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನ ಗುಂಡಿಯಿಂದ ಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲೇ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಈ ಸ್ಥಿತಿಗೆ ಕಳಪೆ ಮೂಲಸೌಕರ್ಯ ಕಾರಣ ಎಂದು ಹೇಳಿದ್ದಾರೆ.ಈ ವಿಡಿಯೋವನ್ನು ಅವರ ಸ್ನೇಹಿತೆ ಶ್ರೀವವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ರಸ್ತೆ ಸುರಕ್ಷತೆ, ಹೊಣೆಗಾರಿಕೆ ಮತ್ತು ಪ್ರಯಾಣಿಕರು ಎದುರಿಸುತ್ತಿರುವ ದೈನಂದಿನ ಸಮಸ್ಯೆಯ ಬಗ್ಗೆ ಈ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಗಳನ್ನು ಸರಿಪಡಿಸಲು ನಿಮಗೆ ಸಾಧ್ಯವಾಗದಿದ್ದರೆ, ದಯವಿಟ್ಟು ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳನ್ನು ನಿಷೇಧಿಸಿ ಎಂದು ಈ ಪೋಸ್ಟ್‌ನಲ್ಲಿ ಶೀರ್ಷಿಕೆ ನೀಡಲಾಗಿದೆ. ಈ ಬಗ್ಗೆ ವಿಡಿಯೋದಲ್ಲಿ ಸೌರಭ್ ಪಾಂಡೆ ಹೀಗೆ ಹೇಳಿದ್ದಾರೆ. “ಕಳಪೆ ರಸ್ತೆ, ಗುರುತು ಹಾಕದ ಸ್ಪೀಡ್ ಬ್ರೇಕರ್‌ನಿಂದ ನನ್ನ ದ್ವಿಚಕ್ರ ವಾಹನ ನಿಯಂತ್ರಣ ಕಳೆದುಕೊಂಡಿತ್ತು. ಇದರಿಂದ ನನ್ನ ಕಾಲು, ಕೈ ಮತ್ತು ತೋಳಿಗೆ ತೀವ್ರವಾದ ಗಾಯವಾಗಿದೆ. ದಯವಿಟ್ಟು ನಗರದ ರಸ್ತೆಗಳ ಬಗ್ಗೆ ಏನಾದರೂ ಮಾಡಿ” ಎಂದು ಹೇಳಿದರು.

ಇನ್ಸ್ಟಾಗ್ರಾಮ್ ವಿಡಿಯೋ ಇಲ್ಲಿದೆ ನೋಡಿ:

ಇನ್ನು ಈ ವಿಡಿಯೋವನ್ನು ಹಂಚಿಕೊಂಡಿರುವ ಸೌರಭ್ ಪಾಂಡೆ ಅವರ ಸ್ನೇಹಿತೆ ಶ್ರೀ ಅವರು ಹೀಗೆ ಹೇಳಿದ್ದಾರೆ. “ಅ ಸ್ಪೀಡ್ ಬ್ರೇಕರ್ ನಿಂದ ಬೈಕ್ ನಿಯಂತ್ರಣ ತಪ್ಪಿ ನನ್ನ ಸ್ನೇಹಿತನಿಗೆ ಗಾಯವಾಗಿದೆ. ಇದೀಗ ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ತಿಂಗಳ ಕೊನೆಯಲ್ಲಿ ಹೋಗಬೇಕಿತ್ತು. ಆದರೆ ಈಗ ಅವರಿಗೆ ನಡಿಯಲು ಸಾಧ್ಯವಿಲ್ಲ. ಈ ಶಸ್ತ್ರಚಿಕಿತ್ಸೆ 6 ಲಕ್ಷ ರೂ. ಖರ್ಚಾಗಿದೆ. ಇದಕ್ಕೆ ನಿಜವಾಗಿ ಯಾರು ಹೊಣೆ, ಹೆಲ್ಮೆಟ್ ಹಾಕದಿದ್ದರೆ ದಂಡ ಹಾಕುತ್ತಾರೆ, ಆದರೆ ಸ್ಪೀಡ್ ಬ್ರೇಕರ್ ಯಾಕೆ ಸರಿಯಾಗಿ ಮಾಡಿಲ್ಲ” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ದಾರಿಯಲ್ಲಿ ಮಹಿಳೆಗೆ 10 ಲಕ್ಷ ರೂ.ಹಣ ಇದ್ದ ಬ್ಯಾಗ್: ಬಳಿಕ ಆಕೆ ಮಾಡಿದ್ದೇನು?

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು :

ಬೆಂಗಳೂರಿನಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ದೈನಂದಿನ ಸಮಸ್ಯೆ ಇದು ಹಲವು ನೆಟ್ಟಿಗರು ಕೋಪದಿಂದ ಬಂದಿದೆ. ನೀವು ಬೆಂಗಳೂರಿನಲ್ಲಿ ಸರಿಯಾಗಿ ವಾಹನ ಚಲಾಯಿಸಲು ಕಲಿತರೆ, ಜಗತ್ತಿನ ಯಾವ ಮೂಲೆಯಲ್ಲೂ ಬೇಕಾದರೂ ವಾಹನ ಓಡಿಸಬಹುದು ಎಂದು ಒಬ್ಬ ನೆಟ್ಟಿಗರು ಹೇಳಿದ್ದಾರೆ. ವಾಹನ ಓಡುವಾಗ ಕಣ್ಣು ತೆರೆದು ಓಡಿಸಿ, ಏಕೆಂದರೆ ಬೆಂಗಳೂರಿನ ರಸ್ತೆ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *