ಬೆಂಗಳೂರು, (ಅಕ್ಟೋಬರ್ 26): ಬೆಂಗಳೂರು ನಗರ ಅಭಿವೃದ್ಧಿ (ಬೆಂಗಳೂರು ಅಭಿವೃದ್ಧಿ) ವಿಚಾರವಾಗಿ ಉದ್ಯಮಿಗಳ ಟೀಕೆ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಡಿಕೆ ಶಿವಕುಮಾರ್) ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಉದ್ಯಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು.. ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ‘ನಾಗರಿಕರೊಂದಿಗೆ ನಡಿಗೆ’ ಕಾರ್ಯಕ್ರಮ ನಡೆಸಿದ್ದು, ಈ ಮೂಲಕ ಜನರ ಜೊತೆ ಸಂವಾದ, ಕುಂದುಕೊರತೆ ಆಲಿಸಿದ್ದಾರೆ. ಇದಕ್ಕೆ ಇದೀಗ ಉದ್ಯಮಿ ಮೋಹನ್ ದಾಸ್ ಪೈ (ಮೋಹನದಾಸ್ ಪೈ) ಅವರಂತಹ ಪ್ರಮುಖರು ಡಿಕೆ ಶಿವಕುಮಾರ್ ಅವರನ್ನ ಶ್ಲಾಘಿಸಿ ಗುಣಗಾನ ಮಾಡಿದ್ದಾರೆ.
ನಿನ್ನೆ (ಅಕ್ಟೋಬರ್ 25) ರಾತ್ರಿ ನಡೆದ ವಿಶೇಷ ಡಿನ್ನರ್ ಮೀಟಿಂಗ್ ವೇಳೆ ಡಿಕೆ ಶಿವಕುಮಾರ್ ಅವರು ತಮ್ಮ ಪ್ರಮುಖ ಉದ್ಯಮಿಗಳೊಂದಿಗೆ ಸಂವಾದ ನಡೆಸಿ, ಅವರ ವಿಶ್ವಾಸವನ್ನು ಗಳಿಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ, ಮೂಲಸೌಕರ್ಯ ಸುಧಾರಣೆ ಹಾಗೂ ಹೂಡಿಕೆ ವಾತಾವರಣ ಕುರಿತಂತೆ ಉದ್ಯಮಿಗಳಿಂದ ಹಲವು ಸಲಹೆಗಳನ್ನು ನೀಡಲಾಗಿದೆ. ತಮ್ಮ ಕಾರ್ಯಕ್ರಮಗಳ ಬಗ್ಗೆಯೂ ಉದ್ಯಮಿಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಈ ಮೇಲಿನ “ನಾಗರೀಕರೊಂದಿಗೆ ನಡಿಗೆ” ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆಂಧ್ರ ಡೇಟಾ ಸೆಂಟರ್ ತೆರೆಯುತ್ತಿದೆ: ಆದರೆ ನಾವು ರಸ್ತೆಗುಂಡಿ ಮುಚ್ಚಲು ಕಷ್ಟಪಡುತ್ತೇವೆ; ಮೋಹನ್ ದಾಸ್ ಪೈ
ಡಿಕೆ ಶಿವಕುಮಾರ್ ಅವರ “ನಾಗರೀಕರೊಂದಿಗೆ ನಡಿಗೆ” ಈ ಕಾರ್ಯಕ್ರಮದ ಮೂಲಕ ಜನರ ಮಧ್ಯೆ ತೆರಳಿ, ಅವರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಪರಿಹಾರ ನೀಡುತ್ತಿರುವುದಕ್ಕೆ ಉದ್ಯಮಿಗಳು ಶ್ಲಾಘಿಸಿದರು. ಹಿಂದೆ ಸರ್ಕಾರವನ್ನು ಟೀಕೆ ಮಾಡಿದ್ದ ಉದ್ಯಮಿ ಮೋಹನ್ ದಾಸ್ ಪೈ ಅವರು ಸಾಮಾಜಿಕ ಜಾಲತಾಣದಲ್ಲಿ ಡಿಕೆ ಶಿವಕುಮಾರ್ ಅವರ ಟ್ಯಾಗ್ ಮಾಡಿ ಮೆಚ್ಚುಗೆಯ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಎಕ್ಸ್’ ಖಾತೆಯಲ್ಲಿ ಶ್ಲಾಘಿಸಿದ ಉದ್ಯಮಿ ಮೋಹನ್ ದಾಸ್ ಪೈ, ಜನರ ಜೊತೆ ಸಂವಾದ, ಕುಂದುಕೊರತೆ ಆಲಿಸಿದ್ದು ಒಳ್ಳೆಯ ಕಾರ್ಯ. ಜನರ ಸಮಸ್ಯೆಗಳನ್ನು ಬಗೆಹರಿಸುವುದು ಒಳ್ಳೆಯ ನಾಯಕನ ಕೆಲಸ. ನಿಮ್ಮ ಈ ಕೆಲಸ ಜನರು, ನಾಯಕರ ನಡುವಿನ ಸೇತುವೆ ಇದ್ದಂತೆ. ಕಳೆದ ಮೂರು ತಿಂಗಳಿನಿಂದ ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಮಹತ್ವದ ಯೋಜನೆ ಕೈಗೊಂಡಿದೆ. ಜಿಬಿಎ ರಚನೆ ಮಾಡಿದ್ದು ಅತೀ ದೊಡ್ಡ ಕೊಡುಗೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯವನ್ನು ಹಾಡಿಹೊಗಳಿದ್ದಾರೆ.
ಧನ್ಯವಾದಗಳು ಡಿಸಿಎಂ @ಡಿಕೆ ಶಿವಕುಮಾರ್ ಈ ಅದ್ಭುತ ಉಪಕ್ರಮಕ್ಕಾಗಿ ನಾಗರಿಕರನ್ನು ಭೇಟಿ ಮಾಡುವುದು, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು, ಅವರಿಗೆ ನೆರವು ನೀಡುವುದು, ಅವರ ಸಮಸ್ಯೆಗಳನ್ನು ಪರಿಹರಿಸುವುದು ದೊಡ್ಡ ರಾಜಕೀಯ ನಾಯಕರ ಕಾರ್ಯವಾಗಿದೆ. ನಿಮ್ಮ ಸಂವಾದಗಳು ಮತದಾರರು ಮತ್ತು ಅವರ ಪ್ರತಿನಿಧಿಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿವೆ. ನೀವು ಹೊಂದಿರುವಿರಿ… https://t.co/FiAkwaLefp
— ಮೋಹನದಾಸ್ ಪೈ (@TVMohandasPai) ಅಕ್ಟೋಬರ್ 26, 2025
ನಗರದ ಅಭಿವೃದ್ಧಿ, ಸಾರಿಗೆ ವ್ಯವಸ್ಥೆ ಸುಧಾರಣೆ, ಮೂಲಸೌಕರ್ಯ ವಿಸ್ತರಣೆ ಸೇರಿದಂತೆ ಹಲವು ವಿಷಯಗಳಲ್ಲಿ ಡಿಕೆ ಶಿವಕುಮಾರ್ ಕೈಗೊಂಡಿರುವ ಕ್ರಮಗಳಿಗೆ ಉದ್ಯಮಿಗಳಿಂದ ಮೆಚ್ಚುಗೆ ಬಂದಿದ್ದು, ಆ ಮೂಲಕ ಡಿಕೆ ಶಿವಕುಮಾರ್ ಅವರ ಚಿತ್ರ ಬದಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.