Headlines

ಪ್ರೆಸಿಡೆನ್ಸಿ ವಿವಿ ಇನ್ವೆನ್ಸಿಯಾ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಮೆರುಗು, ಹುಚ್ಚೆದ್ದು ಕುಣಿದ ವಿದ್ಯಾರ್ಥಿಗಳು

ಪ್ರೆಸಿಡೆನ್ಸಿ ವಿವಿ ಇನ್ವೆನ್ಸಿಯಾ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಮೆರುಗು, ಹುಚ್ಚೆದ್ದು ಕುಣಿದ ವಿದ್ಯಾರ್ಥಿಗಳು


ಪ್ರೆಸಿಡೆನ್ಸಿ ವಿವಿ ಇನ್ವೆನ್ಸಿಯಾ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಮೆರುಗು, ಹುಚ್ಚೆದ್ದು ಕುಣಿದ ವಿದ್ಯಾರ್ಥಿಗಳು

ಬೆಂಗಳೂರು, (ಏಪ್ರಿಲ್ 12): ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳಿಗೊಮ್ಮೆ ಇನ್ವೆನ್ಸಿಯಾ (ಬೆಂಗಳೂರು ಪ್ರೆಸಿಡೆನ್ಸಿ ಯೂನಿವರ್ಸಿಟಿ ಇನ್ವಿನ್ಸಿಯಾ 2026) ಅನ್ನೋ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಬರ್ತಿದ್ದು, ಈ ಬಾರಿಯೂ ಸಹ ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೀತು. ಬಾಲಿವುಡ್ ನಟಿ ಶ್ರೀಲೀಲಾ ಸಹ ಭಾಗವಹಿಸಿ, ವಿವಿಯ 50 ನೇ ವರ್ಷದ ಲೋಗೋ ಲಾಂಚ್ ಮಾಡಿದ್ರು. ಹೌದು.. ಬೆಂಗಳೂರಿನ ಯಲಹಂಕದ ರಾಜಾನುಕುಂಟೆ ಬಳಿಯಿರುವ ಪ್ರೆಸಿಡೆನ್ಸಿ ವಿವಿಯಲ್ಲಿ ಎರಡು ವರ್ಷಗಳಿಗೊಮ್ಮೆ ಇನ್ವೆನ್ಸಿಯಾ ಅನ್ನೋ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತೆ. ಕಳೆದ ಎರಡು ದಿನಗಳಿಂದ ವಿವಿಯ ಕ್ಯಾಂಪಸ್‌ನಲ್ಲಿ ಕಲ್ಚರಲ್ ಫೆಸ್ಟ್ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು ಈ ಫೆಸ್ಟ್‌ನಲ್ಲಿ ಭಾಗವಹಿಸಿದ್ರು.

ಬಹುಬಾಷಾ ನಟಿ, ಕನ್ನಡದವರೇ ಆದ ನಟಿ ಶ್ರೀಲೀಲಾ ಸಹ ವಿವಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮತ್ತಷ್ಟು ರಂಗು ತಂದಿದ್ದರು. ಇನ್ನು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ 50 ವರ್ಷ ಪೂರೈಸಿದೆ. ಹೀಗಾಗಿ ನಟಿ ಶ್ರೀಲೀಲಾ 50ನೇ ವರ್ಷದ ಲೋಗೋ ಲಾಂಚ್ ಮಾಡಿದ್ದು, ವಿವಿಯಲ್ಲಿ ಎರಡು ದಿನಗಳಿಂದ ವಿದ್ಯಾರ್ಥಿಗಳ ಸಂಗೀತ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಂಜಾಯ್ ಮಾಡಿದರು.



Source link

Leave a Reply

Your email address will not be published. Required fields are marked *