ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ: ಸಾವು-ಬದುಕಿನ ನಡುವೆ ಮಹಿಳೆಯ ಹೋರಾಟ

ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ: ಸಾವು-ಬದುಕಿನ ನಡುವೆ ಮಹಿಳೆಯ ಹೋರಾಟ


ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ: ಸಾವು-ಬದುಕಿನ ನಡುವೆ ಮಹಿಳೆಯ ಹೋರಾಟ

ಬೆಂಗಳೂರು, ಮಾರ್ಚ್ 13: ಹೆತ್ತ ತಾಯಿ ಹೊತ್ತ ನಾಡು ಸ್ವರ್ಗ ಮಿಗಿಲು ಎಂಬ ಮಾತಿದೆ. ಜನ್ಮ ನೀಡಿದ ತಾಯಿ ಅಂದ್ರೆ ನಡೆದಾಡುವ ದೇವರು ಎಂದು ನಾವು ಪೂಜಿಸುತ್ತೇವೆ. ಆದರೆ ಇಲ್ಲೊಬ್ಬ ಮಗ ಆಸ್ತಿಗಾಗಿ ಅಂತಹ ತಾಯಿ ಮೇಲೆಯೇ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪಾಪಿ ಮಗನ ಕ್ರೌರ್ಯಕ್ಕೆ ವೃದ್ಧೆ ಆಸ್ಪತ್ರೆ ಸೇರಿದ್ದಾರೆ. ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆ ಘಟನೆ ನಡೆದಿದ್ದು, ಲಕ್ಷ್ಮೀ ಎಂಬವರು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ.

ಜಯನಗರದ ನಿವಾಸಿ ಲಕ್ಷ್ಮೀ ಹಾಗೂ ಸಣ್ಣಸಿದ್ದಪ್ಪ ದಂಪತಿಗೆ 3 ಜನ ಗಂಡು ಮಕ್ಕಳು. ಈ ಮೇಲಕ್ಕೆ ಲಕ್ಷ್ಮೀ ಅವರ ಪತಿ ಸಣ್ಣಸಿದ್ದಪ್ಪ ಮತ್ತು ಎರಡನೇ ಮಗ ಆರೋಗ್ಯ ಸಮಸ್ಯೆಯಿಂದ ಪ್ರತಿನಿಧಿಸಿದ್ದಾರೆ. ಜಯನಗರದ ಮನೆ, ಬನ್ನೇರುಘಟ್ಟ ಬಳಿ ಫ್ಯಾಕ್ಟರಿ ಮತ್ತು ಶಿರಾ ಬಳಿ 7 ಮನೆ ಜಮೀನು ಹೊಂದಿದ್ದು, ಆಸ್ತಿಗಾಗಿ ಮೊದಲನೇ ಮಗ ರಮೇಶ್ ಹಾಗೂ ಮೂರನೇ ಮಗ ಪ್ರಕಾಶ್ ನಡುವೆ ಕಲಹ ನಡೆದಿತ್ತು. ಆಸ್ತಿ ಭಾಗ ಆಗಬೇಕೆಂದು ಮೂರನೇ ಮಗ ಪ್ರಕಾಶ್ ಕೋರ್ಟ್ ಮೆಟ್ಟಿಲು ಕೂಡ ಏರಿದ್ದ. 2016ರಿಂದಲೂ ಇದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ಪಾರ್ಟಿಗೆಂದು ಹೋದವ ಸಿಕ್ಕಿದ್ದು ಶವವಾಗಿ; ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ಯಾರು?

ಈ ನಡುವೆ ನಿನ್ನೆ ಜಯನಗರದ 9ನೇ ಬ್ಲಾಕ್ ನ ಮನೆ ಬಳಿ ಬಂದ ಪ್ರಕಾಶ್ ಏಕಾಏಕಿ ಮನೆ ರಿನೋವೇಶನ್ ಮಾಡಲು ಮುಂದಾಗಿದ್ದಾನೆ. ಆಗ ತಾಯಿ ಕೋರ್ಟ್ ನಲ್ಲಿ ಕೇಸ್ ಇದೆಲ್ಲ ಯಾಕೆ ಮಾಡ್ತೀಯ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕುಪಿತಗೊಂಡ ಮಗ ಪ್ರಕಾಶ್ ತಾಯಿ ಮನೆಯ ವಸ್ತುಗಳನ್ನೆಲ್ಲ ಒಡೆದು ಹಾಳುಮಾಡಿದ್ದಾನೆ. ಜೊತೆಗೆ ವಾಕಿಂಗ್ ಸ್ಟಿಕ್ ನಿಂದ ತಲೆಗೆ ಹೊಡೆದಿದ್ದಾನೆ. ಪೆಟ್ಟಾಗಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಲಕ್ಷ್ಮೀ ಅವರನ್ನು ಮೊದಲ ಮಗ ರಮೇಶ್ ಆಸ್ಪತ್ರೆಗೆ ದಾಖಲಿಸಿದ್ದು, ಜಯನಗರ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ತಿಲನಗರ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ವಿರುದ್ಧ ದೂರು ದಾಖಲಾಗಿದೆ. ಎಫ್ಐಆರ್ ದಾಖಲಿಸಿರೋ ಆರೋಪಿ ಸದ್ಯಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *