Headlines

ಹುಡುಗಿಯರ ಮೊಬೈಲ್​ ನಂಬರ್​​ ಕೇಳಿದ್ದಕ್ಕೆ ಫೈಟ್​​: ಪೊಲೀಸ್​​ ಠಾಣೆ ಮೆಟ್ಟಿಲೇರಿದ ಪಬ್​​ ಗಲಾಟೆ

ಹುಡುಗಿಯರ ಮೊಬೈಲ್​ ನಂಬರ್​​ ಕೇಳಿದ್ದಕ್ಕೆ ಫೈಟ್​​: ಪೊಲೀಸ್​​ ಠಾಣೆ ಮೆಟ್ಟಿಲೇರಿದ ಪಬ್​​ ಗಲಾಟೆ


ಬೆಂಗಳೂರು, ಡಿಸೆಂಬರ್ 18: ಹುಡುಗಿಯರ ಮೊಬೈಲ್ ನಂಬರ್ ಕೇಳಿದ ಆರೋಪ ವಿಚಾರವಾಗಿ ನಿನ್ನೆ ರಾತ್ರಿ 12.30ರ ಸುಮಾರಿಗೆ ಪಬ್ನಲ್ಲಿ ನಡೆದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೆರಿದ್ದು, ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು. ನಾಗರಬಾವಿ ರಸ್ತೆಯಲ್ಲಿರುವ ಪಬ್‌ನಲ್ಲಿ ನಡೆದ ಘಟನೆ ಎರಡೂ ಕಡೆಯವರ ದೂರು ಪಡೆದಿರುವ ಪೊಲೀಸರು, ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಘಟನೆ ಏನು?

ಪಬ್‌ನಲ್ಲಿ ಹೇಮಂತ್ ಜೊತೆಗಿದ್ದ ಯುವತಿಯರ ಫೋನ್ ನಂಬರ್ ಉಮೇಶ್ ಎಂಬವರು ಕೇಳಿದ್ದಾರೆ. ಈ ವೇಳೆ ಯುವತಿಯರು ಮೊಬೈಲ್ ನಂಬರ್ ನಿರಾಕರಿಸಿರುವ ಕಾರಣಕ್ಕೆ ಅವರ ಜೊತೆಗೆ ಉಮೇಶ್ ಅಸಭ್ಯವರ್ತನೆ ತೋರಿದ್ದಾರೆ. ಘಟನೆಯ ಬಗ್ಗೆ ಪಬ್ ಸಿಬ್ಬಂದಿಗೆ ಹೇಮಂತ್ ದೂರು ನೀಡಿದ್ದು, ಆ ಬಳಿಕ ಉಮೇಶ್ ಟೇಬಲ್ ನ ಪಬ್ನವರು ಬೇರೆಡೆಗೆ ಶಿಫ್ಟ್ ಮಾಡುವ ಮೂಲಕ ಪರಿಸ್ಥಿತಿ ಶಾಂತವಾಗಿದ್ದಾರೆ. ಆದರೆ ಪಾರ್ಟಿ ಮುಗಿಸಿ ಪಬ್ನಿಂದ ಹೊರಬರುವಾಗ ಉಮೇಶ್ ಮತ್ತೆ ಹೇಮಂತನಿಗೆ ಬೈದಿದ್ದು ರಾದ್ಧಾಂತಕ್ಕೆ ಕಾರಣವಾಯಿತು.

ಇದನ್ನೂ ಓದಿ: ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್; ಯುವತಿ ಮೇಲೆ ವಿಕೃತಿ ಮೆರೆದ ಗ್ಯಾಂಗ್

ಉಮೇಶ್ ಮಾತಿನಿಂದ ಹೇಮಂತ್ ಕೂಡ ಸಿಟ್ಟಾಗಿದ್ದರೆ, ಈ ವೇಳೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಆಕ್ರೋಶಭರಿತರಾಗಿ ಹೇಮಂತ್ ಉಮೇಶ್ ಮೇಲೆ ಹಲ್ಲೆ. ನಂತರ ಪಬ್ ಬಳಿಗೆ ಕೆಲ ಹುಡುಗರನ್ನು ಕರೆಸಿ ಮತ್ತೆ ಅಟ್ಯಾಕ್ ಗೆ ಮುಂದಾಗಿದ್ದಾರೆ. ಈ ವೇಳೆ ದೊಡ್ಡ ಗಲಾಟೆ ನಡೆಯದಂತೆ ಪಬ್ ಸಿಬ್ಬಂದಿ ಮತ್ತು ಸ್ಥಳಕ್ಕೆ ಬಂದ ಜ್ಞಾನಭಾರತಿ ಪೊಲೀಸರು ತಡೆದಿದ್ದಾರೆ. ಬಳಿಕ ಹೇಮಂತ್ ತನ್ನ ಮೇಲೆ ಹಲ್ಲೆ ಮಾಡಿದ್ದು ಉಮೇಶ್ ದೂರು ನೀಡಿದ್ದಾನೆ, ಅಸಭ್ಯ ವರ್ತನೆ ಆರೋಪದಡಿ ಉಮೇಶ್ ವಿರುದ್ಧ ಹೇಮಂತ್ ಜೊತೆಗಿದ್ದ ಯುವತಿಯರು ಕೂಡ ಪ್ರತಿದೂರು ದಾಖಲಿಸಿದ್ದಾರೆ. ಇಬ್ಬರ ದೂರಿನ ಅನ್ವಯಭಾರತಿ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *