
ಬೆಂಗಳೂರು, ಮಾರ್ಚ್ 17: ಕರ್ನಾಟಕದಲ್ಲಿ ಯುಗಾದಿಗೂ ಮುನ್ನವೇ ಮಳೆ (ಮಳೆ) ಶುರುವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಜೋರು ಮಳೆ ಸುರಿದಿದೆ. ಆ ಮೂಲಕ ಬಿಸಿಲಿನಿಂದ ಬೆಂಡಾಗಿದ್ದ ಭೂಮಿಗೆ ವರುಣ ತಂಪೆರೆದಿದ್ದಾನೆ. ಇತ್ತ ಸಿಲಿಕಾನ್ ಸಿಟಿಗೂ ಮಳೆಯ ಸಿಂಚನವಾಗಿದೆ. ಬೆಂಗಳೂರಿನ ಕೆಂಗೇರಿ ಸುತ್ತುಮುತ್ತ ಜೋರು ಮಳೆ ಸುರಿದಿದ್ದು, ರಿಚ್ ಮಂಡ್ ಟೌನ್ ಸುತ್ತಮುತ್ತ ತುಂತುರು ಮಳೆ ಸುರಿದಿದೆ.
ಕಳೆದ ಕೆಲ ದಿನಗಳಿಂದ ಬಿಸಿಲು ಉಷ್ಣಾಂಶ ಹೆಚ್ಚಾಗಿತ್ತು. ಈಗಾಗಲೇ ಧಗೆಗೆ ಜನರು ಬೆಂದುಹೋಗಿದ್ದರು. ಹೀಗಾಗಿ ಸೋಮವಾರ ತಡರಾತ್ರಿ ನಗರದ ಹಲವೆಡೆ ತುಂತುರು ಮಳೆಯಾಗಿದೆ. ವಿಜಯನಗರ, ದೀಪಾಂಜಲಿನಗರ, ಮೈಸೂರು ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿದೆ.
ಸಂಜೆ ಅಥವಾ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ
ಇನ್ನು ಸುಡುಬೇಸಿಗೆ ನಡುವೆ ಮೊದಲ ಮಳೆ ಖುಷಿ ಜೊತೆ ಕೆಲವೆಡೆ ರೈತರಿಗೆ ಆತಂಕ ತಂದಿದೆ. ಹವಾಮಾನ ಇಲಾಖೆ ಇನ್ನೂ ಮೂರ್ನಾಲ್ಕು ದಿನ ಮಳೆಯ ಮುನ್ಸೂಚನೆ ನೀಡಿದೆ. ಇತ್ತ ಬೆಂಗಳೂರಿನ ಹಲವೆಡೆ ಮೋಡಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ.
ಭಾರೀ ಮಳೆಗೆ ಉಪ ನಿರ್ದೇಶಕರ ಕಚೇರಿಗೆ ನುಗ್ಗಿದ ನೀರು
ಇಂದು ರಾಜ್ಯ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಬೆಳಗಾವಿಯಲ್ಲಿ ಭಾರೀ ಮಳೆ ಆಗಿದ್ದು, ರಾಮತೀರ್ಥ ನಗರದಲ್ಲಿರುವ ಮಳೆಯಿಂದ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿಗೆ ನೀರು ನುಗ್ಗಿದೆ. ಮುಂದೆ ನಿಲ್ಲಿಸಿದ್ದ ಬೈಕ್ಗಳು ಕಚೇರಿ ಮುಳುಗಡೆ ಆಗಿವೆ. ಕಚೇರಿಗೆ ನೀರು ನುಗ್ಗಿದ್ದು, ಕಚೇರಿಯಿಂದ ಹೊರ ಬಾರದೆ ನೌಕರರು ಕಂಗಾಲಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಹೊಸೂರಿನ ಶ್ರೀಕಾಂತ ಸುಂಕದವರ ಹೊಲದಲ್ಲಿ ಆಲಿಕಲ್ಲು ಮಳೆಯಾಗಿದೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿ 17 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ, ಈ ಭಾಗದಲ್ಲಿ ಮಾತ್ರ ಬಿಸಿಗಾಳಿ
ಇತ್ತ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೂಡ ವರುಣ ತಂಪೆರೆದಿದ್ದಾನೆ. ಗುಡುಗು ಸಹಿತ ಮಳೆ ಆರ್ಭಟಿಸಿದ್ದು, ಬೇಸಿಗೆಯಿಂದ ಬಸವಳದಿದ್ದ ಜನರು ಮತ್ತು ಇಳೆಗೆ ಮಳೆರಾಯ ತಂಪೆರೆದಿದ್ದಾನೆ. ಮಳೆಯಿಂದ ವಾಹನ ಸವಾರರು ಪರದಾಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.