ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಬಿಜೆಪಿ ಶಾಸಕ

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಬಿಜೆಪಿ ಶಾಸಕ


ಬೆಂಗಳೂರು, (ಜನವರಿ 29):ವಿಧಾನಸಭೆ ಅಧಿವೇಶನದಲ್ಲಿಂದು (ವಿಧಾನಸಭೆ ಅಧಿವೇಶನ) ಬಳ್ಳಾರಿ ಬ್ಯಾನರ್ ಗಲಾಟೆ (ಬಳ್ಳಾರಿ ಬ್ಯಾನರ್ ಸಾಲು) ಬಾರೀ ಸದ್ದು ಮಾಡಿದ್ದು, ಈ ವೇಳೆ ಮಧ್ಯೆ ಪ್ರವೇಶಿಸಿದ ಬಿಜೆಪಿ ಶಾಸಕ ಮುನಿರತ್ನ (ಮುನಿರತ್ನ) ಸಹ ತಮ್ಮ ರಾಜರಾಜೇಶ್ವರಿ ಕ್ಷೇತ್ರದಲ್ಲಿನ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ನಾನೊಬ್ಬ ಶಾಸಕನಾಗಿ ಗನ್ಮ್ಯಾನ್ ಮನವಿ ಮಾಡಿದ್ದೆ. ಸ್ಪೀಕರ್, ಸಿಎಂ ಗೃಹ ಸಚಿವರು ಸೇರಿ ಎಲ್ಲರಿಗೂ ಮನವಿ ಕೊಟ್ಟಿದ್ದೆ. ಈಗ ಸಿಎಂ ಸಿದ್ದರಾಮಯ್ಯನವರು ಗನ್ ಮ್ಯಾನ್ ಹೇಳಿದ್ದಾರೆ. ಅವರು ಚೆನ್ನಾಗಿ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಸೋತಿರುವವರು ಶಾಸಕ ಅಂತಿದ್ದಾರೆ. ಯಾರು, ಯಾವಾಗ ಏನಾಗಬೇಕೆಂದು ದೇವರು ಹಣೆಯಲ್ಲಿ ಬರೆದಿರ್ತಾನೆ. ಕ್ಷೇತ್ರದಲ್ಲಿ ಕೆಲವರು ಹಿಂಸೆ ಕೊಡುತ್ತಾರೆ. ಅದರಲ್ಲೇ ಖುಷಿ ಪಡುತ್ತಿದ್ದಾರೆ ಎಂದು ಹೆಸರು ಹೇಳಿದ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದರು.

ರಾಜರಾಜೇಶ್ವರಿನಗರ ಸೂಕ್ಷ್ಮ ಪ್ರದೇಶ ಎಂದು ಹೇಳುತ್ತಾರೆ. ಇದುವರೆಗೆ ಎಷ್ಟು ಪೊಲೀಸ್ ಅಧಿಕಾರಿಗಳು ಅಮಾನತಾಗಿದ್ದಾರೆ ಗೊತ್ತಾ? ಕ್ಷೇತ್ರದಲ್ಲಿ ಪೊಲೀಸರಾಗಿ ಬರಬೇಕೆಂದರೆ ಶಾಸಕರ ವಿರುದ್ಧ ಕೇಸ್ ಹಾಕ್ಬೇಕು. ಅಂಥವರಿಗೆ ಮಾತ್ರ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಅವಕಾಶ ಕೊಡ್ತಾರೆ. ಮೊಟ್ಟೆ ಹೊಡ್ದ್ರೆ ದೂರು ಸ್ವೀಕರಿಸಲ್ಲ, ಕಾರು ಹೊಡೆದ್ರೆ ದೂರು ಪಡೆಯಲ್ಲ. ದಯವಿಟ್ಟು ಒಬ್ಬ ಶಾಸಕನಿಗೆ ರಕ್ಷಣೆ ಕೊಡಿ ಎಂದು ಸದಾ ಪರಿಪರಿಯಾಗಿ ಬೇಡಿಕೊಂಡರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *