World’s Best Cities: ವಿಶ್ವದ ಟಾಪ್ 30 ನಗರಗಳಲ್ಲಿ ಬೆಂಗಳೂರಿಗೂ ಸ್ಥಾನ

World’s Best Cities: ವಿಶ್ವದ ಟಾಪ್ 30 ನಗರಗಳಲ್ಲಿ ಬೆಂಗಳೂರಿಗೂ ಸ್ಥಾನ


ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರು (Bengaluru) ಕೂಡ ಒಂದು ಸ್ಥಾನವನ್ನು ಹೊಂದಿದೆ. ಇದು ಬೆಂಗಳೂರಿಗೆ ದೊಡ್ಡ ಗೌರವ ಎಂದು ಹೇಳಲಾಗಿದೆ. ರೆಸೋನೆನ್ಸ್ ಕನ್ಸಲ್ಟೆನ್ಸಿ ಬಿಡುಗಡೆ ಮಾಡಿದ 30 ಟಾಪ್ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ರೆಸೋನೆನ್ಸ್ ಕನ್ಸಲ್ಟೆನ್ಸಿ ಅಂಶಗಳನ್ನು ಇಟ್ಟುಕೊಂಡು ಈ ವರದಿಯನ್ನು ನೀಡಿದೆ. 2025-26ರಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಭೇಟಿ ನೀಡಲು ಯೋಗ್ಯವಾದ ವಿಶ್ವದ ಟಾಪ್ 100 ಅತ್ಯುತ್ತಮ ನಗರಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಅದರಲ್ಲಿ 30 ಅತ್ಯುತ್ತಮ ನಗರಗಳನ್ನು ವಿಭಾಗಿಸಿದೆ. ಇನ್ನು ಈ ವರದಿಯಲ್ಲಿ ಸೂಚಿಸಲಾದ ನಗರಗಳು ಪ್ರಾಬಲ್ಯ ಸಾಧಿಸಿದ್ದು, ಏಷ್ಯಾದ ಎರಡು ನಗರಗಳು ಮಾತ್ರ ಟಾಪ್ 10 ರಲ್ಲಿ ಸ್ಥಾನವನ್ನು ಹೊಂದಿದೆ. ಹಾಗೆ? ಬೆಂಗಳೂರಿಗೆ ಎಷ್ಟನೇ ಸ್ಥಾನ ನೀಡಲಾಗಿದೆ ಎಂಬುದನ್ನು ತಿಳಿಸಲಾಗಿದೆ.

ಈಯೂ ಸಾರ್ವಜನಿಕ ಗ್ರಹಿಕೆ, ಜನಸಂಖ್ಯೆಯ ವರದಿ, ಆರ್ಥಿಕ ಶಕ್ತಿ, ಪ್ರವಾಸೋದ್ಯಮ ಆಹಾರ ಸಂಸ್ಕೃತಿ, ಸಾರಿಗೆ, ಪರಿಸರ ಮತ್ತು ಇತ್ತೀಚಿನ ಜೀವನಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸ್ಥಾನವನ್ನು ನೀಡಲಾಗುತ್ತದೆ. ಇದರಲ್ಲಿ ಮೊದಲು ಟಾಪ್ 10 ನಗರಗಳನ್ನು ಹೊಂದಿದೆ. ವಿಶ್ವದ ಅತ್ಯುತ್ತಮ ನಗರಗಳಲ್ಲಿ ಲಂಡನ್ ಸತತ 11ನೇ ವರ್ಷವು ಕೂಡ ಮೊದಲ ಸ್ಥಾನದಲ್ಲೇ ಉಳಿದುಕೊಂಡಿದೆ. ಅಮೆರಿಕಾದ ಜನಪ್ರಿಯ ನಗರ ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ನಂತರ ಫ್ರಾನ್ಸ್ನ ಪ್ಯಾರಿಸ್ ಮೂರನೇ ಸ್ಥಾನ, ಜಪಾನ್ನ ಸಾಂಸ್ಕೃತಿಕ ನಗರ ಟೊಕಿಯೋ ನಾಲ್ಕನೇ ಸ್ಥಾನ, ಸ್ಪೇನ್ ರಾಜಧಾನಿ ಮ್ಯಾಡ್ರಿಡ್ ನಗರ ಐದನೇ ಸ್ಥಾನ, ಸಿಂಗಾಪುರ ನಗರ ಆರನೇ ಸ್ಥಾನ, ರೋಮ್ ಏಳನೇ ಸ್ಥಾನ, ದುಬೈ ಎಂಟಾನೆ ಸ್ಥಾನ, ಜರ್ಮನಿಯ ರಾಜಧಾನಿ ಬರ್ಲಿನ್ ಒಂಬತ್ತನೇ ಸ್ಥಾನ, ಸ್ಪೇನ್ ಬಾರ್ಸಿಲೋನಾ 10.

ಇದನ್ನೂ ಓದಿ: ನಾಯಿ ಕಚ್ಚಿ ಸಾವನ್ನಪ್ಪಿದವರಿಗೆ 5 ಲಕ್ಷ ರೂ.ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ

ವಿಶ್ವದ ಅತ್ಯುತ್ತಮ 30 ನಗರಗಳಲ್ಲಿ ಬೆಂಗಳೂರಿಗೆ ಎಷ್ಟು ಸ್ಥಾನ?

ಬೆಂಗಳೂರು ವಿಶ್ವದ ಅತ್ಯುತ್ತಮ 30 ನಗರಗಳಲ್ಲಿ 29ನೇ ಸ್ಥಾನವನ್ನು ಹೊಂದಿದೆ. ಬೆಂಗಳೂರಿಗೆ ತಂತ್ರಜ್ಞಾನ, ಹಸಿರು, ವಿಜ್ಞಾನಕ್ಕೆ ಪ್ರೋತ್ಸಾಹ, ಆಹಾರ ಪದ್ಧತಿಗಳು, ಸುರಕ್ಷತೆ, ಪ್ರವಾಸಿ ತಾಣಗಳನ್ನು ಗಮನದಲ್ಲಿಟ್ಟುಕೊಂಡು ಈ ಸ್ಥಾನವನ್ನು ನೀಡಲಾಗಿದೆ. ಇದರೊಂದಿಗೆ ವನ್ಯಜೀವಿ ಉದ್ಯಾನವನ, ಟೆಕ್ ಪ್ರಯೋಗಾಲಯ, ಇತಿಹಾಸದ ಪುಸ್ತಕ, ಇನ್ನು ಹಲವು ವಿಚಾರಗಳಲ್ಲಿ ಜಗತ್ತಿನ ಗಮನ ಸೆಳೆದಿದೆ. ಇದರೊಂದಿಗೆ ಭಾರತದ ವಾಣಿಜ್ಯ ನಗರಿ ಮುಂಬೈ 40ನೇ ಸ್ಥಾನ ಪಡೆದಿದ್ದು, ರಾಷ್ಟ್ರ ರಾಜಧಾನಿ ದೆಹಲಿ 54ನೇ ಸ್ಥಾನವನ್ನು ಅಲಂಕರಿಸಿದೆ. 82ನೇ ಸ್ಥಾನದಲ್ಲಿ ತೆಲಂಗಾಣದ ರಾಜಧಾನಿ ಹೈದರಾಬಾದ್ ಇದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *