ನಮ್ಮ ಮೆಟ್ರೋ ಪಿಂಕ್​​ ಲೈನ್​​ ಆರಂಭಕ್ಕೆ ಭರದ ಸಿದ್ಧತೆ: ನಾಳೆಯಿಂದ ಪರಿಶೀಲನಾ ಕಾರ್ಯ ಶುರು

ನಮ್ಮ ಮೆಟ್ರೋ ಪಿಂಕ್​​ ಲೈನ್​​ ಆರಂಭಕ್ಕೆ ಭರದ ಸಿದ್ಧತೆ: ನಾಳೆಯಿಂದ ಪರಿಶೀಲನಾ ಕಾರ್ಯ ಶುರು


ನಮ್ಮ ಮೆಟ್ರೋ ಪಿಂಕ್ ಲೈನ್ ಆರಂಭಕ್ಕೆ ಭರದ ಸಿದ್ಧತೆ: ನಾಳೆಯಿಂದ ಪರಿಶೀಲನಾ ಕಾರ್ಯ ಶುರು

ಬೆಂಗಳೂರು, ಮಾರ್ಚ್ 20: ಕಾಳೇನ ಅಗ್ರಹಾರ ಟು ತಾವರೆಕೆರೆ ನಡುವಿನ ಪಿಂಕ್ ಲೈನ್ ಎತ್ತರಿಸಿದ ಮೆಟ್ರೋ ಮಾರ್ಗವನ್ನು ಈ ವರ್ಷ ಮೇ ತಿಂಗಳಿನಲ್ಲಿ ಓಪನ್ ಮಾಡಲು ಬಿಎಂಆರ್ಸಿಎಲ್ ಭರದ ಸಿದ್ಧತೆ ನಡೆಸಿದೆ. ಈ ನಾಳೆ ಹಿನ್ನೆಲೆಯಿಂದ ಏಪ್ರಿಲ್ 5ರ ವರೆಗೆ 16 ದಿನಗಳ ಕಾಲ RDSO ಅಧಿಕಾರಿಗಳು ವಿವಿಧ ಪರಿಶೀಲನಾ ಕಾರ್ಯಗಳು ನಡೆಯಲಿವೆ. ರೈಲಿನ ಸ್ಪೀಡ್ ಮತ್ತು ಲೋಡ್ ಟೆಸ್ಟ್ ಜೊತೆಗೆ ಟೆಸ್ಟ್, ಸ್ಟೇಷನ್ ತಪಾಸಣೆ, ಪವರ್ಕಿಂಗ್ ಸೇರಿದಂತೆ ಹಲವು ಬಗೆಯ ಪರೀಕ್ಷೆಗಳನ್ನು ಅಧಿಕಾರಿಗಳು ನಡೆಸಲಿದ್ದಾರೆ.

ಇನ್ನು ಈ ಪಿಂಕ್ ಲೈನ್‌ಗೆ ಅದಾಗಲೇ 4 ರೈಲುಗಳು ಆಗಮಿಸಿವೆ. ಇವುಗಳ ಜೊತೆಯಲ್ಲಿ ಈ ತಿಂಗಳ ಕೊನೆಯಲ್ಲಿ ಒಂದು ರೈಲು ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಆರನೇ ರೈಲು ಸೇರ್ಪಡೆಯಾಗಲಿವೆ. ಆ ಮೂಲಕ ಮೊದಲ ಹಂತದ ಪಿಂಕ್ ಲೈನ್‌ನಲ್ಲಿ 6 ಡ್ರೈವರ್ಲೆಸ್ ರೈಲುಗಳು ಸಂಚರಿಸುತ್ತವೆ, ಕಾಳೇನ ಅಗ್ರಹಾರ ಟು ನಾಗವಾರ ನಡುವೆ ಇವು ಸಂಪರ್ಕ ಕಲ್ಪಿಸಲಿವೆ. ಪಿಂಕ್ ಲೈನ್ ಒಟ್ಟು 21.25 ಕಿ.ಮೀ. ವಿಸ್ತೀರ್ಣ ಹೊಂದಿದ್ದು 18 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ. ಆ ಮೇಲಕ್ಕೆ 12 ಅಂಡರ್ ಗ್ರೌಂಡ್ ಮತ್ತು 6 ಎಲಿವೇಟೆಡ್ ಸ್ಟೇಷನ್ ಈ ವರ್ಷ ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ 6 ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಓಪನ್ ಮಾಡಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಂಡಿದ್ದು, ಉಳಿದ 13.76.ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಸ್ಟೇಷನ್ ಮಾರ್ಗದ ಕಾಮಗಾರಿಗಳು ನಡೆಯುತ್ತಿವೆ. ಇವು ಪ್ರಾರಂಭವಾದ ಬಳಿಕ ಈ ವರ್ಷದ ಅಂತ್ಯಕ್ಕೆ ಪೂರ್ತಿ ಮಾರ್ಗವನ್ನು ಸಿದ್ದಪಡಿಸಲಾಗಿದೆ.

ಇದನ್ನೂ ಓದಿ: ಪಿಂಕ್ ಲೈನ್ ಮೆಟ್ರೋಗೆ ಬಂತು ನಾಲ್ಕನೇ ರೈಲು, ಮೇನಲ್ಲಿ ಸಂಚಾರ ನಿರೀಕ್ಷೆ

ಪಿಂಕ್ ಲೈನ್‌ಗಾಗಿ ಬಿಐಎಂಎಲ್‌ನಲ್ಲಿ ಒಟ್ಟು 23 ರೈಲುಗಳಿಗೆ ಆರ್ಡರ್ ನೀಡಲಾಯಿತು, ಈ ಮಾರ್ಗದ ಆರಂಭದಿಂದಾಗಿ ಪ್ರತಿನಿತ್ಯ ವಿಪರೀತ ವಾಹನ ದಟ್ಟಣೆಯಿಂದ ಕೂಡಿರುವ ಬನ್ನೇರುಘಟ್ಟ ರಸ್ತೆಯ ಸಂಚಾರ ಸುಧಾರಿಸುವ ನಿರೀಕ್ಷೆಯೂ ಮೂಡಿದೆ. ಕೇಂದ್ರ ಅಧಿಕಾರಿಗಳು ತಪಾಸಣೆ ಮಾಡಿ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಕೊನೆಯದಾಗಿ ಕಮಿಷನರ್ ಆಫ್ ಮೆಟ್ರೋ ರೈಲ್ವೇ ಸೇಫ್ಟಿಯವರಿಗೆ ಅನುಮತಿ ಸಿಗುವಂತೆ ಪಿಂಕ್ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ವಾಣಿಜ್ಯ ಸಂಚಾರ ಆರಂಭ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *