ಬೆಂಗಳೂರು, ಅಕ್ಟೋಬರ್ 29: ನಗರದ ರಸ್ತೆಗಳಲ್ಲಿ ರೋಡ್ ರೋಜ್ (ರಸ್ತೆ ಕೋಪ) ಗಲಾಟೆಗಳು ಸರ್ವೇಸಾಮಾನ್ಯ ಪೊಲೀಸರು ಎಷ್ಟು ಕೇಸ್ ಹಾಕಿ ಬುದ್ಧಿ ಹೇಳಿದರೂ ಕಿರಿಕ್ ಮಾತ್ರ ನಿಲ್ಲುತ್ತಿಲ್ಲ. ಅದೇ ರೀತಿ ಇಲ್ಲೊಂದು ರೋಡ್ ರೇಜ್ ಕಿರಿಕ್ ತಾರಕಕ್ಕೇರಿ ರಾತ್ರಿಯ ಕೊಲೆಯಲ್ಲಿ (ಕೊಲ್ಲಲು) ಅಂತ್ಯವಾಗಿರುವಂತಹ ಶ್ರೀರಾಮ ಲೇಔಟ್ನಲ್ಲಿ ಘಟನೆ ನಡೆದಿದೆ.
ಬೈಕ್ ಕಾರಿನಿಂದ ಡಿಕ್ಕಿ ಹೊಡೆದು ಯುವಕನ ಕೊಲೆ. ಈ ರೋಡ್ ರೇಜ್ ಕಿರಿಕ್ ನಲ್ಲಿ ಕೊಲೆಯಾದ ಬೈಕ್ ಸವಾರನ ಹೆಸರು ದರ್ಶನ್. ಹೀಗೆ ಸಣ್ಣ ವಿಚಾರಕ್ಕೆ ಬೈಕ್ ಸವಾರನ ಪ್ರಾಣ ಬಲಿ ಪಡೆದ ಮನೋಜ್. ಸಾಕ್ಷಿ ನಾಶಕ್ಕೆ ಸಹಾಯ ಮಾಡಿರುವ ಪತ್ನಿ ಆರತಿ. ಸದ್ಯ ಇಬ್ಬರನ್ನು ಬಂಧಿಸಿದ್ದಾರೆ.
ನಡೆದದ್ದೇನು?
ಎ. 25 ರಂದು ರಾತ್ರಿ 11.20 ರ ಸುಮಾರಿಗೆ ದರ್ಶನ್ ಮತ್ತು ಆತನ ಸ್ನೇಹಿತ ವರುಣ್ ಪುಟ್ಟೇನಹಳ್ಳಿ ಶ್ರೀರಾಮ ಬಡಾವಣೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ. ಇದೇ ವೇಳೆ ಮನೋಜ್ ಕಾರಿನಲ್ಲಿ ಹೋಗುತ್ತಿದ್ದ ಯುವಕರ ಬೈಕ್ ಮಿರರ್ ಗೆ ಟಚ್ ಆಗಿ ಡ್ಯಾಮೇಜ್ ಆಗಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಸ್ವಲ್ಪ ಮಾತಿನ ಚಕಮಕಿಯಾಗಿದೆ. ನಂತರ ದರ್ಶನ್ ಮತ್ತು ವರುಣ್ ಇಬ್ಬರು ತಮ್ಮ ಬೈಕ್ನಲ್ಲಿ ಮುಂದೆ ಹೋಗಿದ್ದು, ಎರಡು ಕಿಮೀ ನಷ್ಟು ಹಿಂಬಾಲಿಸಿಕೊಂಡು ಬಂದ ಮನೋಜ್ ಕಾರು, ಏಕಾಏಕಿ ಬೈಕ್ಗೆ ಗುದ್ದಿದ್ದಾರೆ. ಈ ವೇಳೆ ತೀವ್ರ ಸವಾರ ದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ವರುಣ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: ಕಾರ್ ಮಿರರ್ ಹೊಡೆದಕ್ಕೆ ಬೈಕ್ ಸವಾರನ ಹತ್ಯೆ: ಕಾರಿನಿಂದ ಗುದ್ದಿದ ದೃಶ್ಯ ಸಿಸಿಟಿವಿಯಲ್ಲಿ ಇಲ್ಲಿದೆ
ಘಟನೆಯ ಬಗ್ಗೆ ಅಲ್ಲಿದ್ದ ಕೆಲ ಸ್ಥಳೀಯರು ಜೆಪಿ ನಗರ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಅಪಘಾತ ಎಂದು ಕೇಸ್ ದಾಖಲಿಸಿದ್ದರು. ಆದರೆ ತನಿಖೆ ನಡೆಸಿದ್ದ ಪೊಲೀಸರಿಗೆ ಇದೊಂದು ಕೊಲೆ ಎಂದು ಗೊತ್ತಾಗಿದೆ. ಅಪಘಾತ ನಡೆದ ಸ್ಥಳದ ಸಿಸಿಟಿವಿಗಳ ಪರಿಶೀಲನೆ ನಡೆಸಿದಾಗ ಆರೋಪಿಗಳು ಬಂದು ಹೋಗಿರುವುದು ಕಂಡು ಬಂದಿದೆ.
ಉದ್ದೇಶಪೂರ್ವಕವಾಗಿ ಕಾರಿನಲ್ಲಿ ಫಾಲೋ ಮಾಡಿ ಡಿಕ್ಕಿ ಹೊಡೆದಿದ್ದು, ಒಮ್ಮೆ ಬೈಕ್ ನಲ್ಲಿ ಇದ್ದವರು ಮಿಸ್ ಆಗಿದ್ದರಂತೆ. ನಂತರ ಮತ್ತೆ ಯೂ ಟರ್ನ್ ಮಾಡಿಕೊಂಡು ಬಂದು ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾರೆ. ಘಟನೆ ನಡೆದ ಕೆಲ ಸಮಯದ ನಂತರ ದಂಪತಿಗಳಿಬ್ಬರ ಮುಖಕ್ಕೆ ಮಾಸ್ಕ್ ಹಾಕಿಕೊಂಡು ವಾಪಸ್ ಬಂದಿದ್ದಾರೆ. ಸ್ಥಳದಲ್ಲಿ ಕಾರಿನ ಕೆಲ ಪಾರ್ಟ್ಸ್ ಬಿದ್ದಿರುವುದನ್ನ ಗಮಸಿನಿ ಅವರನ್ನು ಎತ್ತಿಕೊಂಡು ಹೋಗುವುದು ಗೊತ್ತಾಗಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ರೀತಿಯಲ್ಲೇ ಸಾಯ್ತೀಯಾ: ವ್ಯಕ್ತಿಯೊಬ್ಬರನ್ನು ಕಿಡ್ನ್ಯಾಪ್ ಮಾಡಿ ಧಮ್ಕಿ
ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ ಹಿಡಿದ, ಇದು ಅಪಘಾತವಲ್ಲ, ಕೊಲೆ ಅನ್ನೋದು ಇದೆ. ಇದೀಗ ಪುಟ್ಟೇನಹಳ್ಳಿ ಪ್ರಕರಣ ದಾಖಲು ಮಾಡಿ ದಂಪತಿಯನ್ನ ಬಂಧಿಸಿದ್ದಾರೆ. ಇಂತಹ ಸಣ್ಣಪುಟ್ಟ ವಿಚಾರವನ್ನ ಅಲ್ಲಿಗೆ ಬಿಟ್ಟಿದ್ದರೆ ಒಂದು ಪ್ರಾಣವು ಉಳಿಯುತ್ತಿತ್ತು. ಜೊತೆಗೆ ಜೈಲು ವಾಸವು ತಪ್ಪುತ್ತಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 10:07 pm, ಬುಧವಾರ, 29 ಅಕ್ಟೋಬರ್ 25